ಮಡಿಕೇರಿ, ಆ. ೧೦: ಐದು ಬಾರಿ ಗೆಲುವು ಸಾಧಿಸಿ ಜನಮನ್ನಣೆ ಗಳಿಸಿರುವ ಮಡಿಕೇರಿ ಕ್ಷೇತ್ರದ ಹಿರಿಯ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೊಡಗು ಮುಸ್ಲಿಂ ಸಮಾಜದ ಸದಸ್ಯರು ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಸದಸ್ಯರುಗಳಾದ ಎಂ.ಐ. ರಜಾ಼ಕ್, ಉಸ್ಮಾನ್, ನಿಸಾರ್, ಅಬ್ದುಲ್ಲ, ಷಂಶುದ್ದೀನ್, ಕೆ.ಎ. ಅಬ್ಬಾಸ್, ಮೊಯ್ದೀನ್ ಹಾಗೂ ಹೆಚ್.ಆರ್. ಅಬ್ದುಲ್ ಹಮೀದ್ ಸರ್ಕಾರ ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಅಗೌರವ ತೋರಬಾರದೆಂದು ಮನವಿ ಮಾಡಿದ್ದಾರೆ.

ಜನಪರ ಕಾಳಜಿ ತೋರಿರುವ ಶಾಸಕ ಅಪ್ಪಚ್ಚು ರಂಜನ್ ಅವರು ಸಚಿವರಾಗಿ ಆಡಳಿತ ನಡೆಸಲು ಎಲ್ಲಾ ಅರ್ಹತೆಯನ್ನು ಹೊಂದಿದ್ದಾರೆ. ಸರ್ಕಾರ ಇವರ ಹಿರಿತನವನ್ನು ಗೌರವಿಸಿ ತಕ್ಷಣ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ಬಿಜೆಪಿ ಪಕ್ಷದ ಶಾಸಕರಾಗಿದ್ದರೂ ಎಲ್ಲಾ ಸಮುದಾಯದ ಮಂದಿಯನ್ನು ಒಗ್ಗಟ್ಟಾಗಿ ಮುನ್ನಡೆಸುತ್ತಿದ್ದಾರೆ. ಪ್ರತಿಯೊಂದು ಜಾತಿ, ಧರ್ಮಕ್ಕೆ ಸೇರಿದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಇವರು ಹೊಂದಿದ್ದು, ಬಡವರಿಗೆ ನೆರವಾಗುತ್ತಿದ್ದಾರೆ. ಕೊಡಗಿನ ಅಭಿವೃದ್ಧಿಯ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಅಪ್ಪಚ್ಚು ರಂಜನ್ ಅವರಿಗೆ ಪ್ರಮುಖ ಖಾತೆ ಯನ್ನು ನೀಡಿದರೂ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿ ದ್ದಾರೆ. ಸಮಾಜಮುಖಿ ಚಿಂತನೆಯ ಇವರಿಗೆ ಸರ್ಕಾರ ಸಚಿವ ಸ್ಥಾನ ನೀಡಲೇಬೇಕೆಂದು ಮುಸ್ಲಿಂ ಸಮಾಜದ ಸದಸ್ಯರು ಆಗ್ರಹಿಸಿದ್ದಾರೆ.

ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಲು ಸರ್ಕಾರದ ಬಳಿಗೆ ನಿಯೋಗ ತೆರಳಲು ಕೂಡ ಸಿದ್ಧ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಲಾರಿ ಮಾಲೀಕರ ಮತ್ತು ಚಾಲಕರ ಸಂಘ

ಜಿಲ್ಲೆಯಿAದ ೫ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮಡಿಕೇರಿ ಕ್ಷೇತ್ರದ ಶಾಸಕರಾಗಿರುವ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಮಡಿಕೇರಿ ತಾಲೂಕು ಲಾರಿ ಮಾಲೀಕರ ಮತ್ತು ಚಾಲಕರ ಸಂಘ ಒತ್ತಾಯಿಸಿದೆ.

ಕಳೆದ ೨೦೧೮ ರಿಂದ ಕೊಡಗಿನಲ್ಲಿ ಪ್ರವಾಹವಾಗಿ ಆಸ್ತಿಪಾಸ್ತಿ, ಮನೆ ಕಳೆದುಕೊಂಡು ಸಂತ್ರಸ್ತರಾದವರಿಗೆ ಸಹಾಯಹಸ್ತ ನೀಡಿದ್ದಾರೆ. ಕೊರೊನಾ ಮಹಾಮಾರಿ ಸಂದರ್ಭ ಕೋವಿಡ್ ಕೇಂದ್ರಕ್ಕೆ ತೆರಳಿ ಸೋಂಕಿತರಿಗೆ ಅಭಯಹಸ್ತ ನೀಡಿದಲ್ಲದೆ, ಕೋವಿಡ್ ಹೆಚ್ಚಾಗದಂತೆ ಜಿಲ್ಲಾಡಳಿತಕ್ಕೆ ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ಆದುದರಿಂದ ನಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಸಂಘದ ಅಧ್ಯಕ್ಷ ಮೋಹನ್ ಬಿ.ಜಿ. ಅವರು ತಿಳಿಸಿದ್ದಾರೆ.

ರೋಮನ್ ಕ್ಯಾಥೋಲಿಕ್ ಆಗ್ರಹ

ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ೫ ಬಾರಿ ಗೆಲುವು ಸಾಧಿಸಿದ್ದು, ಯಾವುದೇ ಧರ್ಮ, ಜಾತಿ, ಮತ ಭೇದವಿಲ್ಲದೆ ಕೊಡಗಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಆಗ್ರಹಿಸಿದೆ.

ಕೊಡಗು ಜಿಲ್ಲೆಯಲ್ಲಿ ಭೂಮಿ ಸಮಸ್ಯೆ ಸಿಎನ್‌ಡಿ ಲ್ಯಾಂಡ್, ಅರಣ್ಯದ ಅಂಚಿನಲ್ಲಿರುವ ಆದಿವಾಸಿಗಳಿಗೆ ಮನೆ ನಿರ್ಮಿಸಿಕೊಡುವುದು ಸೇರಿದಂತೆ ಜಠಿಲ ಸಮಸ್ಯೆಗಳಿದ್ದು, ಅದನ್ನು ಪರಿಹರಿಸಬೇಕಾದರೆ ಕೊಡಗಿನವರೇ ಮಂತ್ರಿಯಾಗಬೇಕು. ಹೊರ ಜಿಲ್ಲೆಯವರನ್ನು ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಿಸುವುದರಿಂದ ಇಲ್ಲಿನ ಸಮಸ್ಯೆಗಳನ್ನು ನಿರ್ವಹಿಸು ವುದು ಕಷ್ಟ ಸಾಧ್ಯವಾಗುತ್ತದೆ. ಅನೇಕ ಜಿಲ್ಲೆ ವರ್ಷಗಳಿಂದ ಹೊರ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನು ನೇಮಕಗೊಳಿಸುತ್ತಿರು ವುದರಿಂದ ಅಭಿವೃದ್ಧಿ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ. ಹಿರಿಯ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿರ್ವಹಿಸಲಿ ದ್ದಾರೆ. ೨೦೧೮ ರಿಂದ ಈಚೆಗೆ ಜಿಲ್ಲೆಯಲ್ಲಿ ಅತಿವೃಷ್ಟಿ ಪ್ರವಾಹದಿಂದ ಆಸ್ತಿ, ಭೂಮಿ, ಮನೆ ಕಳೆದುಕೊಂಡು ಹಲವು ಕುಟುಂಬಗಳು ಅತಂತ್ರವಾ ಗಿವೆ. ಆ ಸಂದರ್ಭದಲ್ಲಿ ಶಾಸಕರು ಸರಕಾರದಿಂದ ಹೆಚ್ಚಿನ ಅನುದಾನವನ್ನು ತರಿಸಿ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.

ಕೊರೊನಾ ಸೋಂಕು ಸಂದರ್ಭದಲ್ಲೂ ಜಿಲ್ಲಾಡಳಿತಕ್ಕೆ ಸಲಹೆ, ಸೂಚÀನೆ, ಮಾರ್ಗದರ್ಶನ ನೀಡಿ ನಿಯಂತ್ರಣಕ್ಕೆ ಕ್ರಮ ವಹಿಸಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುವ ಶಾಸಕ ಅಪ್ಪಚ್ಚು ರಂಜನ್ ಸಚಿವರಾದರೆ ಜಿಲ್ಲೆ ಅಭಿವೃದ್ಧಿಗೊಳ್ಳಲಿದೆ ಎಂದು ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಗೌರವಾಧ್ಯಕ್ಷ ವಿ.ಎ. ಲಾರೆನ್ಸ್, ಉಪಾಧ್ಯಕ್ಷ ಜೋಕಿಂ ವಾಸ್, ಜಾನ್ಸನ್ ಪಿಂಠೋ, ವಿನ್ಸಿಡಿಸೋಜ, ಒತ್ತಾಯಿಸಿದ್ದಾರೆ.