ಸೋಮವಾರಪೇಟೆ, ಆ. ೯: ಕೊಡಗಿನಿಂದ ೫ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಬಿ.ಜೆ.ಪಿ.ಯ ಪ್ರಮುಖರುಗಳು ಸೇರಿದಂತೆ ವಿವಿಧ ಸಂಘಸAಸ್ಥೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದು, ಇಂದು ನಡೆಯುವ ಬೆಂಗಳೂರು ಚಲೋ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಪತ್ರಿಕಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ನಗರಾಧ್ಯಕ್ಷ ಹಾಗೂ ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯರು ಮಾತನಾಡಿ, ಶಾಸಕ ರಂಜನ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಆಗ್ರಹಿಸಿದರು.

೫ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕರಿಗೆ ಮಂತ್ರಿ ಸ್ಥಾನ ನೀಡದೆ ಕೊಡಗಿಗೆ ಅವಮಾನ ಮಾಡಲಾಗಿದೆ ಎಂದು ನಗರಾಧ್ಯಕ್ಷ ಎಸ್.ಆರ್. ಸೋಮೇಶ್ ಹೇಳಿದರು. ಮಂತ್ರಿ ಸ್ಥಾನ ನೀಡುವಂತೆ ತಾ. ೧೦ ರಂದು (ಇಂದು) ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.

ಕೊಡಗಿನ ಉಸ್ತುವಾರಿಯನ್ನು ಹೊರಭಾಗದವರಿಗೆ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಇಲ್ಲಿನ ಶಾಸಕರಿಗೆ ಜಿಲ್ಲೆಯ ಉಸ್ತುವಾರಿ ನೀಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಕಾಂಗ್ರೆಸ್ ಮುಕ್ತ ಕೊಡಗಿಗೆ ರಂಜನ್ ಶ್ರಮಿಸಿದ್ದಾರೆ. ಕಳೆದ ೩೦ ವರ್ಷ ಗಳಿಂದಲೂ ಪಕ್ಷ ಕಟ್ಟಿದ್ದಾರೆ. ದೆಹಲಿಯಲ್ಲಿದ್ದ ಪಟ್ಟಿಯಲ್ಲಿ ರಂಜನ್ ಹೆಸರಿದ್ದರೂ, ಹಿತಶತ್ರುಗಳ ಹುನ್ನಾರದಿಂದ ಸಚಿವ ಸ್ಥಾನ ತಪ್ಪಿದೆ. ಈ ತಪ್ಪನ್ನು ತಕ್ಷಣ ಸರಿಪಡಿಸಿಕೊಳ್ಳಬೇಕಿದೆ ಎಂದರು.

ಪ.ಪA. ನಾಮನಿರ್ದೇಶಿತ ಸದಸ್ಯ ಶರತ್‌ಚಂದ್ರ ಮಾತನಾಡಿ, ಪಠ್ಯ ಪುಸ್ತಕದಿಂದ ಟಿಪ್ಪು ಚರಿತ್ರೆಯನ್ನು ತೆಗೆಯುವಂತೆ ಅಪ್ಪಚ್ಚುರಂಜನ್ ಹೋರಾಡಿದ್ದಾರೆ. ಇವರಿಗೆ ಸಚಿವ ಸ್ಥಾನ ನೀಡಿಲ್ಲ; ಆದರೆ ಟಿಪ್ಪು ಜಯಂತಿ ಅಚರಿಸಬೇಕೆಂದು ಹೋರಾಟ ಮಾಡಿದ ಅನಂದ್ ಸಿಂಗ್ ಅವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಇದರಿಂದಾಗಿ ಪಕ್ಷದ ಸಿದ್ದಾಂತಕ್ಕೆ ವಿರುದ್ಧವಾಗಿ ನಾಯಕರೇ ನಡೆದು ಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊರೊನಾ ಸಂದರ್ಭ ಪಿಪಿಇ ಕಿಟ್ ಧರಿಸಿ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಸತತ ೨.೪೮ ಗಂಟೆಗಳ ಕಾಲ ಕೊರೊನಾ ಸೋಂಕಿತರೊAದಿಗೆ ಮಾತನಾಡಿ ಆತ್ಮಸ್ಥೆöÊರ್ಯ ನೀಡಿದ್ದಾರೆ. ಇದು ರಾಜ್ಯದಲ್ಲಿಯೇ ಶಾಸಕರೋರ್ವರು ನಡೆಸಿದ ಮಾದರಿ ಕಾರ್ಯ. ಇಂತಹ ಶಾಸಕರಿಗೆ ಸಚಿವ ಸ್ಥಾನ ನೀಡದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪಂಚಾಯಿತಿ ಸದಸ್ಯ ಬಿ.ಆರ್. ಮಹೇಶ್ ಹೇಳಿದರು.

ಪ್ರಕೃತಿ ವಿಕೋಪ ಸಂದರ್ಭ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ೨೦ ವರ್ಷಗಳಿಂದ ಕೊಡಗು ಬಿಜೆಪಿ ಭದ್ರಕೋಟೆಯಾಗಿದೆ. ರಾಜ್ಯದ ೮ ನಗರಸಭೆಗಳ ಚುನಾವಣೆಯಲ್ಲಿ ೭ ನಗರಸಭೆಗಳಲ್ಲಿ ಬಿಜೆಪಿ ಸೋತಿದೆ. ಮಡಿಕೇರಿ ನಗರಸಭೆಯನ್ನು ಬಿಜೆಪಿ ಹಿಡಿಯಲು ಕ್ಷೇತ್ರದ ಶಾಸಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಇವರಿಗೆ ಮಂತ್ರಿ ಸ್ಥಾನ ನೀಡದೇ ಬಿಜೆಪಿ ಪಕ್ಷ ಕೊಡಗನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.

ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ೫ ತಾಲೂಕಿದ್ದರೂ ಕೇವಲ ಈರ್ವರೇ ಶಾಸಕರಿದ್ದಾರೆ. ಸಮಸ್ಯೆಗಳೂ ಸಾಕಷ್ಟಿದ್ದು, ಇವುಗಳ ಪರಿಹಾರಕ್ಕೆ ಜಿಲ್ಲೆಗೆ ಮಂತ್ರಿ ಸ್ಥಾನ ನೀಡಬೇಕಿದೆ ಎಂದರು.

ಕರವೇ ನಗರಾಧ್ಯಕ್ಷ ಮಂಜುನಾಥ್ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸದಸ್ಯೆ ವರಲಕ್ಷಿö್ಮÃ ಸಿದ್ದೇಶ್ವರ್ ಮಾತನಾಡಿ, ಕೆಲವು ಜಿಲ್ಲೆಗಳಿಗೆ ೩ ರಿಂದ ೪ ಸಚಿವ ಸ್ಥಾನ ನೀಡಲಾಗಿದೆ. ಆದರೆ ಕೊಡಗಿಗೆ ಅನ್ಯಾಯ ಮಾಡಲಾಗಿದೆ. ನೂತನ ಮುಖ್ಯಮಂತ್ರಿಗಳು ಈ ತಪ್ಪನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ವೇದಿಕೆಯ ಸದಸ್ಯರಾದ ಗೀತಾರಾಜು, ಸುಷ್ಮಾ, ಸರಿತಾ ಅಜಯ್ ಉಪಸ್ಥಿತರಿದ್ದರು.

ಬೆಂಬಲ: ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿ ನಡೆಯಲಿರುವ ಬೆಂಗಳೂರು ಚಲೋ ಅಭಿಯಾನಕ್ಕೆ ಮಡಿಕೇರಿ ನಗರ ಯುವ ಮೋರ್ಚಾ ವತಿಯಿಂದ ಬೆಂಬಲ ನೀಡುವುದಾಗಿ ನಗರ ಯುವ ಮೋರ್ಚಾ ಅಧ್ಯಕ್ಷ ನವೀನ್ ಪೂಜಾರಿ ತಿಳಿಸಿದ್ದಾರೆ.