ಮಡಿಕೇರಿ, ಆ. ೯: ವಿಶ್ವ ಆದಿಮ ಸಂಜಾತ ಬುಡಕಟ್ಟು ಸಂಜಾತ ಹಕ್ಕುಗಳ ದಿನಾಚರಣೆಯ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ.) ಸಂಘಟನೆ ವತಿಯಿಂದ ಇಂದು ದೇವಾಟ್‌ಪರಂಬು ಸ್ಮಾರಕ ಜಾಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವರ್ಷಂಪ್ರತಿ ಬೆಂಗಳೂರಿನಲ್ಲಿ ಈ ದಿನಾಚರಣೆಯ ದಿನದಂದು ಪ್ರತಿಭಟನೆ ನಡೆಸಿ ಸರಕಾರಕ್ಕೆ ಸಂಘಟನೆಯ ಮೂಲಕ ತನ್ನ ಬೇಡಿಕೆಗಳ ಕುರಿತಾಗಿ ಮನವಿ ಸಲ್ಲಿಸಿ ಗಮನ ಸೆಳೆಯಲಾಗುತ್ತಿತ್ತು. ಆದರೆ, ಈ ಬಾರಿ ಕೊರೊನಾ ಕಾರಣದಿಂದಾಗಿ ಸರಳ ಕಾರ್ಯಕ್ರಮವನ್ನು ದೇವಾಟ್‌ಪರಂಬು ವಿನಲ್ಲಿ ನಡೆಸಲಾಯಿತು.

ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಹಾಗೂ ಬೆಂಬಲಿಗರು ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ನಾಚಪ್ಪ ಅವರು ಕೊಡವ ಜನಾಂಗ ಒಂದೇ ಮಣ್ಣಿನಿಂದ ಬಂದವರಾಗಿದ್ದು, ನೈಜ ಬುಡಕಟ್ಟು ಜನಾಂಗವಾಗಿದೆ. ವಿಶಿಷ್ಟವಾದ ಈ ಜನಾಂಗ ಸಂವಿಧಾನಾತ್ಮಕವಾಗಿ ಬುಡಕಟ್ಟು ಪಟ್ಟಿಗೆ ಸೇರುವ ಅರ್ಹತೆ ಹೊಂದಿದ್ದು, ಹೋರಾಟ ಮುಂದುವರೆಯಲಿದೆ. ಈ ನಡುವೆ ಜನಾಂಗ ಹಾಗೂ ಹೋರಾಟವನ್ನು ಹತ್ತಿಕ್ಕಲು ಷಡ್ಯಂತ್ರಗಳು ನಡೆಯುತ್ತಿವೆ ಯಾದರೂ, ಧೃತಿಗೆಡದೆ ಹೋರಾಟ ಮುಂದುವರಿಸುವುದಾಗಿ ಹೇಳಿದರು.

ಈ ಸಂದರ್ಭ ಸಂಘಟನೆಯ ಕಲಿಯಂಡ ಪ್ರಕಾಶ್, ಅಳಮಂಡ ಜೈ, ಪಟ್ಟಮಾಡ ಕುಶ, ನಿವೃತ್ತ ಲೆ.ಕ. ಪಾರ್ವತಿ, ಮಂದಪAಡ ಮನೋಜ್, ಚೆಂಬಾAಡ ಜನತ್, ಕಾಟುಮಣಿಯಂಡ ಉಮೇಶ್, ಮತ್ತಿತರ ಸಿ.ಎನ್.ಸಿ. ಬೆಂಬಲಿಗರು ಪಾಲ್ಗೊಂಡಿದ್ದರು.