ಕಣಿವೆ, ಆ. ೯: ಕೊಡಗು ಜಿಲ್ಲಾಡಳಿತ ಜಿಲ್ಲೆಯಲ್ಲಿ ಜಾರಿ ಮಾಡಿರುವ ವಾರಾಂತ್ಯದ ಲಾಕ್‌ಡೌನ್ ನಿಂದಾಗಿ ವ್ಯಾಪಾರೋದ್ಯಮಿಗಳ ಬದುಕು ಮೂರಾಬಟ್ಟೆಯಾಗಿರುವ ಕಾರಣ ತಾ. ೧೪ ಮತ್ತು ೧೫ ರಿಂದ ವಾರಾಂತ್ಯದ ಲಾಕ್‌ಡೌನ್ ಪಾಲಿಸದೇ ಇರಲು ಕುಶಾಲನಗರದ ಕನ್ನಿಕಾ ಹೊಟೇಲ್ ಸಭಾಂಗಣದಲ್ಲಿ ನಡೆದ ಕೊಡಗು ಪ್ರವಾಸೋದ್ಯಮ ಅವಲಂಬಿತರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ನೆರೆಯ ಕೇರಳ, ಮಹಾರಾಷ್ಟç ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹರಡುತ್ತಿರುವ ಕೊರೊನಾ ಮಹಾಮಾರಿಯನ್ನು ರಾಜ್ಯದಲ್ಲಿ ಹತ್ತಿಕ್ಕುವ ಸಂಬAಧ ರಾಜ್ಯದ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಲಾಕ್‌ಡೌನ್ ನಿಯಮ ಜಾರಿಗೊಳಿಸಿರುವುದರಿಂದ ಕೊಡಗಿನ ಪ್ರವಾಸೋದ್ಯಮ ಸೇರಿದಂತೆ ಇನ್ನಿತರ ಕ್ಷೇತ್ರಗಳ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಆಯಾಯ ದಿನದ ವ್ಯಾಪಾರದಲ್ಲಿ ಜೀವನ ಮಾಡುವ ಕಡುಬಡ ವ್ಯಾಪಾರಿಗಳ ಬದುಕು ಕುಸಿದಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ನಂಬಿರುವ ಸುಮಾರು ೩೦ ಸಾವಿರ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿವೆ. ಕೊಡಗು ಜಿಲ್ಲೆಯಲ್ಲಿ ನಾವು ಲಾಕ್‌ಡೌನ್ ನಿಯಮಗಳನ್ನು ವಾರಾಂತ್ಯದ ದಿನಗಳಲ್ಲಿ ಪಾಲಿಸಲು ಸಾಧ್ಯವೇ ಇಲ್ಲ ಎಂದು ಕೊಡಗು ಜಿಲ್ಲಾ ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟದ ಅಧ್ಯಕ್ಷ ಕೆ.ಕೆ. ಮಂಜುನಾಥ ಕುಮಾರ್ ಹೇಳಿದರು.

ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ರು ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಅಧಿಕಾರಿಗಳು ಈ ವಿಷಯದಲ್ಲಿ ತಮ್ಮ ಮೂಗಿನ ನೇರಕ್ಕೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯಲ್ಲಿ ಹೋಮ್ ಸ್ಟೇ, ರೆಸಾರ್ಟ್ಗಳು ದಂಧೆ ನಡೆಸುತ್ತಿವೆ ಎಂದು ಕೆಲವು ವಿರೋಧಿಗಳು ಅಪಪ್ರಚಾರ ನಡೆಸುತ್ತಿದ್ದಾರೆ.

ಆದರೆ ರೆಸಾರ್ಟ್,

(ಮೊದಲ ಪುಟದಿಂದ) ಹೋಮ್ ಸ್ಟೇಗಳಿರುವುದರಿಂದ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳು ವಿಸ್ತಾರಗೊಂಡು ಸಣ್ಣ ಪುಟ್ಟ ವ್ಯಾಪಾರಿಗಳಿಂದ ಹಿಡಿದು ಪೆಟ್ರೋಲ್ ಬಂಕ್, ಮದ್ಯದಂಗಡಿ ಮೊದಲಾದವುಗಳ ಮಾಲೀಕರು ಲಾಭ ಗಳಿಸುತ್ತಿಲ್ಲವೇ ಎಂದು ಸಭೆಯಲ್ಲಿ ಉದ್ಯಮಿ ಪ್ರವೀಣ್ ಪ್ರಶ್ನಿಸಿದರು.

ವ್ಯಾಪಾರೋದ್ಯಮಕ್ಕೆ ಧಕ್ಕೆ ಆಗುವಂತಹ ನಿಯಮಗಳನ್ನು ಅಧಿಕಾರಿಗಳು ಅವೈಜ್ಞಾನಿಕವಾಗಿ ಜಾರಿಗೊಳಿಸಿದರೂ ಕೂಡ ಜಿಲ್ಲೆಯ ಶಾಸಕರು ಏಕೆ ಆ ನಿಯಮಗಳನ್ನು ಅವಲೋಕಿಸುತ್ತಿಲ್ಲ ಎಂದು ಪ್ರಶ್ನಿಸಿದ ಕರಂದ್ಲಾಜೆ ಆನಂದ್, ನಾವುಗಳು ಕೋವಿಡ್ ನಿಯಮಾವಳಿ ಪಾಲಿಸಿಕೊಂಡೇ ವ್ಯಾಪಾರ ಮಾಡೋಣ. ಯಾವ ಕಾರಣಕ್ಕೂ ವಾರಾಂತ್ಯದ ಲಾಕ್‌ಡೌನ್‌ಗೆ ಸಹಕರಿಸಬಾರದು ಎಂದರು.

ಸಾಧಕ ಬಾಧಕಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಮಡಿಕೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ಮನವರಿಕೆ ಮಾಡಿ ಮನವಿ ಪತ್ರ ನೀಡುವಂತೆಯೂ ಹಾಗೂ ಜಿಲ್ಲೆಯ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳ ಸಹಕಾರ ಪಡೆಯುವ ಬಗ್ಗೆಯೂ ತೀರ್ಮಾನಿಸಲಾಯಿತು. ವಾರಾಂತ್ಯದ ದಿನಗಳಲ್ಲಿ ಅಂಗಡಿ ಮುಂಗಟ್ಟು ತೆರೆದಾಗ ಅಡ್ಡಿ ಮಾಡುವವರನ್ನು ಸಾಮೂಹಿಕವಾಗಿ ಪ್ರಶ್ನಿಸುವ ಕುರಿತಾಗಿಯೂ ತೀರ್ಮಾನಿಸ ಲಾಯಿತು. ಕುಶಾಲನಗರ ವರ್ತಕರ ಸಂಘದ ಅಧ್ಯಕ್ಷ ಬಿ.ಅಮೃತರಾಜು ಕೂಡಲೇ ವರ್ತಕರ ಸಭೆ ಕರೆದು ಎರಡು ದಿನಗಳಲ್ಲಿ ನಿಲುವು ಪ್ರಕಟಿಸುವುದಾಗಿ ಹೇಳಿದರು.

ಸಂತೆ ಮಾರುಕಟ್ಟೆ ಸಮಿತಿ ಅಧ್ಯಕ್ಷ ಈರುಳ್ಳಿ ಮಹೇಶ್, ಉಪಾಧ್ಯಕ್ಷ ಹೆಚ್.ಡಿ.ಚಂದ್ರು, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗದೀಶ್, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜನಾರ್ಧನ್, ಟ್ಯಾಕ್ಸಿ ಸಂಘದ ಉಮಾಶಂಕರ್, ಪ್ರವಾಸೋದ್ಯಮ ಅವಲಂಬಿತರ ಸಂಘದ ಉಪಾಧ್ಯಕ್ಷ ಕೆ.ವರದ, ಪ್ರಮುಖರಾದ ಮಂಜುನಾಥ ಗುಂಡೂರಾವ್, ನಾಣಿ, ಎಂ.ವಿ.ನಾರಾಯಣ, ಅತಿಥಿ ಭಾಸ್ಕರ್, ಪದ್ಮಮಧುಕುಮಾರ್, ಅಬ್ದುಲ್ ಸಲಾಂ ರಾವ್ ತರ್ ಮೊದಲಾದವರಿದ್ದರು.