*ಗೋಣಿಕೊಪ್ಪ, ಆ. ೯: ಬಿಲ್ಲು, ಉರಣೆ, ಸೊರೆಬುರುಡೆಯನ್ನು ಪ್ರತಿಷ್ಠಾಪಿಸಿ ೨೭ನೇ ವಿಶ್ವ ಆದಿವಾಸಿ ದಿನಾಚರಣೆಯನ್ನು ನಾಗರಹೊಳೆ ಬುಡಕಟ್ಟು ಸಮುದಾಯದವರು ಸಾಂಪ್ರಾದಾಯಿಕವಾಗಿ ನೆರವೇರಿಸಿದರು.
ನಾಗರಹೊಳೆ ವ್ಯಾಪ್ತಿಯ ಕರಡಿಕಲ್ಲು, ಅತ್ತೂರು ಕೊಲ್ಲಿಹಾಡಿ, ನಾಣಚ್ಚಿ ಗದ್ದೆಹಾಡಿ, ಬೊಮ್ಮಾಡು, ಬಾಳೆಕೋವು, ತುಂಡುಮುAಡಗೆ ಕೊಲ್ಲಿ ಹಾಡಿಗಳ ನಿವಾಸಿಗಳು ಆದಿವಾಸಿ ದಿನಾಚರಣೆಯನ್ನು ಸಂಸ್ಕöÈತಿ, ಆಚರಣೆಗಳಾದ ಹಾಡು, ಕುಣಿತಗಳೊಂದಿಗೆ ಸಂಭ್ರಮಿಸಿದರು.
ರಾಜ್ಯ ಆದಿವಾಸಿ ವೇದಿಕೆಯ ಉಪಾಧ್ಯಕ್ಷ ಜೆ.ಕೆ. ತಿಮ್ಮ ಅವರ ನೇತೃತ್ವದಲ್ಲಿ ಆಚರಿಸಿದ ಬುಡಕಟ್ಟು ಜನರು ತಮ್ಮ ಹಕ್ಕಿಗಾಗಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಸರ್ಕಾರ ಬುಡಕಟ್ಟು ಜನರ ಮೇಲೆ ದೃಷ್ಟಿ ತೆರೆಯಬೇಕೆಂದು ಘೋಷಣೆಗಳನ್ನು ಕೂಗಿದರು.
೨೦೦೬ರ ಸಮುದಾಯದ ಒಡೆತನದ ಹಕ್ಕುವಿನ ಬಗ್ಗೆ, ಸಮುದಾಯದ ಹಕ್ಕು, ಅರಣ್ಯ ಪ್ರದೇಶದ ಸಂಪೂರ್ಣ ಅಧಿಕಾರ ಮತ್ತು ನಿರ್ವಹಣೆಯ ಹಕ್ಕು, ಆದಿವಾಸಿಗಳ ಅರಣ್ಯ ಹಕ್ಕುಗಳನ್ನು ಗ್ರಾಮಸಭೆಗೆ ವಹಿಸಬೇಕೆಂದು ಒತ್ತಾಯಿಸಿದರು.
೧೯೯೬ರ ಬುಡಕಟ್ಟು ಪಂಚಾಯಿತಿ ಕಾಯ್ದೆಯನ್ನು ರಾಜ್ಯಾದ್ಯಂತ ವಾಸಿಸುತ್ತಿರುವ ಆದಿವಾಸಿಗಳ ಪ್ರದೇಶದಲ್ಲಿ ಅನುಷ್ಠಾನಗೊಳಿಸಿ ಬುಡಕಟ್ಟು ಪ್ರದೇಶ ಎಂದು ಘೋಷಿಸಬೇಕೆಂದು ಬುಡಕಟ್ಟು ಕೃಷಿಕರ ಸಂಘದ ತಾಲೂಕು ಸಂಚಾಲಕ ಜೆ.ಎಂ. ಸೋಮಯ್ಯ ಆಗ್ರಹಿಸಿದರು.
ಬೇಗೂರು ಪಾರೆ ನಾಣಚ್ಚಿ ಗದ್ದೆ ಹಾಡಿಯಿಂದ ಅರಣ್ಯ ಹಕ್ಕು ಸಮಿತಿಯ ಕಾರ್ಯದರ್ಶಿ ಗಣೇಶ.ಜೆ.ಎಲ್, ಬಾಳೆಕೋವು ಹಾಡಿಯ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಬಿ.ಸಿ. ಕಾಳ, ಕಾರ್ಯದರ್ಶಿ ಬಿ.ಕೆ. ಕಾಂತು, ಗೋಣಿಗದ್ದೆ ಹಾಡಿಯ ಮುಖಂಡ ಜೆ.ಎ ಪುಟ್ಟಸ್ವಾಮಿ, ತುಂಡುಮುAಡಗೆ ಕೊಲ್ಲಿ ಗದ್ದೆಹಾಡಿಯ ಯಜಮಾನ ಜೆ.ಕೆ. ಸಣ್ಣಪ್ಪ, ಕಾರ್ಯದರ್ಶಿ ವಿನೋದ್, ಕರಡಿಕಲ್ಲು ಅತ್ತೂರು ಕೊಲ್ಲಿ ಹಾಡಿಯ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಜೆ.ಎ. ಶಿವು, ಅಮ್ಮಾಳೆ ಅಮ್ಮಾ ಕಲಾ ತಂಡದ ಉದಯ, ಸುದೀಪ್, ಲೇಖ ಸೇರಿದಂತೆ ಆದಿವಾಸಿ ಮುಖಂಡರು, ಮಹಿಳೆಯರು, ಮಕ್ಕಳು ಹಾಜರಿದ್ದರು.