ಮಡಿಕೇರಿ, ಆ. ೯: ಸಾಮಾನ್ಯವಾಗಿ ಹಿರಿಯರಿಂದ ಕಿರಿಯರಿಗೆ ಆಸ್ತಿ ಹಸ್ತಾಂತರವಾಗುತ್ತದೆ. ಹಿರಿಯ ತಲೆಮಾರಿನ ಅತೀವ ಸಂಪತ್ತಿನಿAದ ಕಿರಿಯ ತಲೆಮಾರಿನವರಿಗೆ ಅಹಂಕಾರ ಉತ್ಪತ್ತಿಯಾಗುತ್ತದೆ. ಆದರೆ ಇಲ್ಲೊಂದು ವಿಶೇಷವೆಂಬAತೆ ತಲೆಮಾರಿನಿಂದ ತಲೆಮಾರಿಗೆ ಸಾಹಿತ್ಯದ ಪ್ರತಿಭೆ ಹಸ್ತಾಂತರಗೊAಡಿದ್ದು, ಬಹುಶಃ ಜಗತ್ತಿನಲ್ಲೇ ಪ್ರಥಮ ಎಂಬAತೆ ೩ ತಲೆಮಾರಿನ ೩ ಪುಸ್ತಕಗಳು ಬಿಡುಗಡೆ ಯಾಗುತ್ತಿವೆ ಎಂದು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಹೇಳಿದರು.

ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಪುತ್ರ ಅನಂತ ಶಯನ ಹಾಗೂ ಮೊಮ್ಮಗಳು ಅಂಜಲಿ ಈ ಮೂರು ತಲೆಮಾರಿನ ಪುಸ್ತಕಗಳನ್ನು ಸೋಮವಾರ ಲೋಕಾರ್ಪಣೆ ಮಾಡಲಾಯಿತು. ಇಂದು ನಗರದ ಹೊರವಲಯದ ಅಹಾನ್ ಹಿಲ್ಸ್ ಹೋಮ್‌ಸ್ಟೇಯಲ್ಲಿ ೩ ತಲೆಮಾರಿನ ೩ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರ ರಚನೆಯ ‘ಹಾÊಕು ಮತ್ತು ಕವನ ಸಂಗಮ’ ಪುಸ್ತಕ ಬಿಡುಗಡೆ

(ಮೊದಲ ಪುಟದಿಂದ) ಮಾಡಿದ ನಂತರ ಮಾತನಾಡಿದ ಅವರು ಈ ರಚನೆಯು ಅಂತರAಗದ ಅರಿವಿನ ಬಗ್ಗೆ ಮಾಹಿತಿ ನೀಡುತ್ತದೆ. ಮಾನವನು ಕೇವಲ ಬಾಹ್ಯದ ಆಡಂಬರಗಳ ಪ್ರದರ್ಶನದಲ್ಲಿ ತೊಡಗಿಸಿ ಬೀಗಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಮಾನವನ ಅಂತರAಗವನ್ನು ಅರಿಯಲು ಈ ಪುಸ್ತಕ ಸಹಕಾರಿಯಾಗುತ್ತದೆ ಎಂದರು. ಪುಸ್ತಕವು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿದೆ ಎಂದ ಸ್ವಾಮೀಜಿ ಈ ಪುಸ್ತಕವನ್ನು ಓದುವುದು ಎನ್ನುವುದಕ್ಕಿಂತ ಅನುಭವಿಸಬೇಕೆಂದು ರಚನೆಯನ್ನು ಶ್ಲಾಘಿಸಿದರು.

ಕಲಿಯುವ ಛಲ ಎಲ್ಲರಲ್ಲೂ ಸದಾ ಇರಬೇಕೆಂದು ಗ್ರೀಕ್ ವಿದ್ವಾಂಸ ಸಾಕ್ರೆಟಿಸ್‌ನ ನೈಜ ಜೀವನದ ಉದಾ ಹರಣೆಯ ಮೂಲಕ ವಿವರಿಸಿದರು.

‘ಶಕ್ತಿ’ ಸ್ಥಾಪಕ ಸಂಪಾದಕ ದಿ. ಬಿ.ಎಸ್ ಗೋಪಾಲಕೃಷ್ಣ ಅಧ್ಯಾತ್ಮದಲ್ಲಿ ಸಾಧನೆ ಮಾಡಿದ್ದು ಅದ್ಭುತ ಕೃತಿ ರಚಿಸಿದ್ದಾರೆ. ಅವರ ಪುತ್ರ ಅನಂತಶಯನ ಅವರು ತಂದೆಯ ಮಾರ್ಗದರ್ಶನದಲ್ಲಿ ಅತ್ಯುತ್ತಮ ರಚನೆ ಮಾಡಿದ್ದಾರೆ. ಅನಂತಶಯನ ಅವರ ಪುತ್ರಿ ಅಂಜಲಿ ಚಿಕ್ಕ ವಯಸ್ಸಿನಲ್ಲಿಯೇ ಕವನ ರಚಿಸಿರುವುದು ಅವರ ಆಲೋಚನಾ ಶಕ್ತಿಯನ್ನು ಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಮಡಿಕೇರಿಯ ಹಿರಿಯ ದಂತ ವೈದ್ಯ ಡಾ.ಅನಿಲ್ ಚಂಗಪ್ಪ ಅವರು ಬಿ.ಎಸ್ ಗೋಪಾಲಕೃಷ್ಣ ಅವರ ‘ಖಿhe Woಡಿಟಜ Is ಂ ಓಚಿughಣ’ ಪುಸ್ತಕವನ್ನು ಬಿಡುಗಡೆ ಮಾಡಿದರು. ೫೧ ವರ್ಷಗಳ ಹಿಂದೆ ತಾವು ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದಾಗ ಗೋಪಾಲಕೃಷ್ಣ ಅವರು ತಮಗೆ ನೀಡಿದ ಸಹಕಾರವನ್ನು ಸಭೆಯಲ್ಲಿ ನೆನಪಿಸಿಕೊಂಡರು. ಅವರು ಪಾಲಿಸುತ್ತಿದ್ದ ಪತ್ರಿಕಾ ಧರ್ಮ, ನೀತಿ ಸಂಹಿತೆಯನ್ನು ಸ್ಮರಿಸಿಕೊಂಡರು.

ಬಿ.ಜಿ. ಅನಂತ ಶಯನ ಅವರ ಪುತ್ರಿ ಅಂಜಲಿ ಅವರ ‘ಇmಠಿಥಿಡಿeಚಿಟ ಒusiಟಿgs’ ಪುಸ್ತಕ ಬಿಡುಗಡೆ ಮಾಡಿದ ವೀರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲೆ ಡಾ.ಪುಷ್ಪಾ ಮುತ್ತಣ್ಣ ಇಂದಿನ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಒಂದು ಸಾಹಿತ್ಯಿಕ ಹಬ್ಬ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಅಂಜಲಿ ರಚನೆಯ ಕವನ ಸಂಕಲನ ಕವನ ಪ್ರಿಯರಿಗೆ ಕೊಡುಗೆಯಾಗಿದೆ ಎಂದು ಹೇಳಿದರು. ಎಲ್ಲಾ ಕವನಗಳನ್ನು ತಾವು ಓದಿದ್ದು, ಈ ಕಿರಿಯ ವಯಸ್ಸಿನಲ್ಲಿ ಅದ್ಭುತವಾಗಿ ಕವನ ರಚಿಸಿರುವುದಾಗಿ ಸಂತೋಷ ವ್ಯಕ್ತಪಡಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ‘ಶಕ್ತಿ’ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಯಾಂತ್ರಿಕ ಜೀವನವನ್ನು ನಡೆಸುತ್ತಿರುವ ನಾವು ಅಂತರಾತ್ಮದ ಚಿಂತನೆ ನಡೆಸಲು ಮರೆತುಬಿಡುತ್ತೇವೆ. ಅಂತರಾತ್ಮ ಅರಿಯಲು ಅಧ್ಯಾತ್ಮ ಚಿಂತನೆ ಅತ್ಯಗತ್ಯ. ೩ ಪುಸ್ತಕಗಳೂ ಈ ನಿಟ್ಟಿನಲ್ಲಿ ಸಹಕಾರಿಯಾಗಿವೆ. ಚಿಕ್ಕ ವಯಸ್ಸಿನಲ್ಲಿಯೇ ಅಂಜಲಿ ಅವರ ರಚನೆಯ ಕವನಗಳು ಅಧ್ಯಾತ್ಮದ ಹಾದಿಯತ್ತ ಓದುಗರನ್ನು ಕೊಂಡೊಯ್ಯುವುದಾಗಿ ಅವರು ಅಭಿಪ್ರಾಯಿಸಿದರು.

ಸನ್ಮಾನ

ಸಮಾರಂಭದಲ್ಲಿ ಪುಸ್ತಕ ಪ್ರಕಟಣೆ ಮಾಡಿದ ಮೈಸೂರು ತಾರಾ ಪ್ರಕಾಶನದ ಶಶಿಧರ್, ಪುತ್ರ ಕಾರ್ತಿಕ್ ಹಾಗೂ ಕೊಡಗಿನಲ್ಲಿ ಹಾÊಕು ಬರೆಯಲು ಮೊದಲು ಪ್ರಾರಂಭಿಸಿದ ಕಿಗ್ಗಾಲು ಹರೀಶ್ ಅವರನ್ನು ಸನ್ಮಾನಿಸಲಾಯಿತು.

ಉಪನ್ಯಾಸಕಿ ಡಾ.ತೀತಿರ ರೇಖಾ ವಸಂತ್, ಕೆ.ಎಸ್ ಹೆಗ್ಡೆ ಇನ್ಸಿ÷್ಟಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರೊ.ಡಾ. ಆಶಾಲತಾ ಕೆ, ಶೋಭಾ ಸುಬ್ಬಯ್ಯ, ಕೆ.ಎಮ್ ಕರುಂಬಯ್ಯ, ರೇಖಾ ಕಾರ್ಯಪ್ಪ ಅವರುಗಳು ಮಾತನಾಡಿ ಪುಸ್ತಕಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕವಿಯಿತ್ರಿ ಅಂಜಲಿ ಪುಸ್ತಕ ರಚನೆಗೆ ಪ್ರೇರಣೆ ಕುರಿತು ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸಿ ರಾಜಲಕ್ಷಿö್ಮÃ ಗೋಪಾಲಕೃಷ್ಣ ಅವರು ನೆರವೇರಿಸಿದರು.

ಶಫಾಲಿ ರೈ ಹಾಗೂ ವಿಜಯಲಕ್ಷಿö್ಮÃ ಅವರುಗಳು ಕಾರ್ಯಕ್ರಮ ನಿರೂಪಣೆ ಮಾಡಿದರು. ಬಿ.ಜಿ ಅನಂತಶಯನ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಯಾಡಿದರು. ತಂದೆ ಗೋಪಾಲಕೃಷ್ಣ ಅವರ ಅಧ್ಯಾತ್ಮಿಕ ಹಾದಿಯ ಕುರಿತು ನೆನಪಿಸಿಕೊಂಡ ಅವರು, ಪುಸ್ತಕಗಳ ರಚನೆಗೆ ತನ್ನ ಗುರುಗಳಾಗಿದ್ದ ದಿ. ಬಿ.ಕೆ. ಸುಬ್ಬಯ್ಯ ಗುರೂಜಿ ಅವರ ನೆನಪಿನ ಮಾರ್ಗದರ್ಶನ ಶ್ರೀರಕ್ಷೆಯಾಗಿದೆ ಎಂದರು. ಚಿ.ನಾ. ಸೋಮೇಶ್ ವಂದಿಸಿದರು. ಚಿತ್ರಕಲಾವಿದ ಬಿ.ಆರ್ ಸತೀಶ್, ಗಾಯಕರಾದ ಮೋಹನ್ ಹಾಗೂ ಮಮತಾಮಾಯಿ, ಸಂಪತ್ ಕುಮಾರ್ ಅವರುಗಳಿಗೆ ಕಿರುಕಾಣಿಕೆ ನೀಡಿ ಗೌರವಿಸಲಾಯಿತು.