ಮಡಿಕೇರಿ, ಆ. ೯: ಕಾಡಾನೆಗಳ ಹಿಂಡಿನೊAದಿಗಿದ್ದ ಆನೆಮರಿಯೊಂದು ಆಕಸ್ಮಿಕವಾಗಿ ಕೆರೆಯಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಮರಂದೋಡ ಗ್ರಾಮದಲ್ಲಿ ನಡೆದಿದೆ. ಮರಂದೋಡದ ಬೆಳೆಗಾರರಾದ ಎಂ.ಎಸ್. ನಯನಕುಮಾರ್ ಹಾಗೂ ಸಹೋದರ ಹೈಕೋರ್ಟ್ ವಕೀಲರಾಗಿರುವ ಎಂ.ಎಸ್. ಪ್ರಕಾಶ್ ಅವರಿಗೆ ಸೇರಿದ ಕೆರೆಗೆ ಕಳೆದ ರಾತ್ರಿ ಆನೆಮರಿ ಆಕಸ್ಮಿಕವಾಗಿ ಬಿದ್ದಿದೆ. ಇದು ಸುಮಾರು ೯ ತಿಂಗಳ ಗಂಡಾನೆ ಮರಿಯಾಗಿದ್ದು, ತನ್ನ ತಾಯಿ ಹಾಗೂ ಇತರ ಆನೆಗಳ ಹಿಂಡಿನೊAದಿಗೆ ತಿರುಗಾಡುತ್ತಿದ್ದ ಸಂದರ್ಭ ಕೆರೆಗೆ ಬಿದ್ದಿದೆ. ತೋಟದೊಳಗಿನ ಬೃಹತ್ ಕೆರೆ ಇದಾಗಿದ್ದು, ಈ ವಿಭಾಗದಲ್ಲಿ ಕಾಡಾನೆಗಳ ತಿರುಗಾಟ ನಿರಂತರವಾಗಿದೆ.

ಇAದು ಬೆಳಿಗ್ಗೆ ಆನೆ ಮರಿ ಮೃತಪಟ್ಟಿರುವುದು ತಿಳಿದು ಬಂದಿದ್ದು, ನಯನ್ ಕುಮಾರ್ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯವರಿತು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಹಗ್ಗದ ಸಹಾಯದಿಂದ ಮೃತಪಟ್ಟಿದ್ದ ಆನೆ ಮರಿಯನ್ನು ಕೆರೆಯಿಂದ ಮೇಲಕ್ಕೆ ಎಳೆದಿದ್ದಾರೆ. ಈ ಮರಿಯಾನೆಯ ತಾಯಿ ಸೇರಿದಂತೆ ಇತರ ಆನೆಗಳು ಸನಿಹದಲ್ಲೇ ಬೀಡುಬಿಟ್ಟಿದ್ದರಿಂದ ಮುನ್ನೆಚ್ಚರಿಕೆಯಾಗಿ ಪಟಾಕಿಗಳನ್ನು ಸಿಡಿಸುವ ಮೂಲಕ ಮತ್ತೆ ಆನೆಗಳು ದಾಳಿಯಿಡದಂತೆ ತಡೆಯುವ ಪ್ರಯತ್ನ ನಡೆಸಲಾಯಿತು.

(ಮೊದಲ ಪುಟದಿಂದ) ವಿಷಯ ತಿಳಿದ ಸ್ಥಳೀಯ ವ್ಯಾಪ್ತಿಯ ಹಲವಾರು ಜನರು ಗ್ರಾ.ಪಂ. ಪ್ರಮುಖ ಚೋಯಮಾಡಂಡ ಹರೀಶ್ ಹಾಗೂ ಇತರರು ಸ್ಥಳಕ್ಕೆ ಆಗಮಿಸಿ ಇಲಾಖಾ ಸಿಬ್ಬಂದಿಗಳೊAದಿಗೆ ಕಾರ್ಯಾಚರಣೆಯಲ್ಲಿ ಭಾಗಿಗಳಾದರು. ಅಪರಾಹ್ನದ ವೇಳೆಗೆ ಮೃತ ಶರೀರವನ್ನು ಕೆರೆಯಿಂದ ಮೇಲಕ್ಕೆ ಎತ್ತಲಾಯಿತು.

ಅರಣ್ಯ ಇಲಾಖೆಯ ಪಶು ವೈದ್ಯರಾದ ಡಾ. ಚಿಟ್ಟಿಯಪ್ಪ ಅವರ ಮಾರ್ಗದರ್ಶನದಂತೆ ಕಡಂಗದ ಪಶು ವೈದ್ಯಾಧಿಕಾರಿ ರಾಕೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದರು. ಆಕಸ್ಮಿಕವಾಗಿ ನಡೆದ ಘಟನೆಯಂತೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು, ಬಳಿಕ ತೋಟ ಮಾಲೀಕರ ಅನುಮತಿಯಂತೆ ಸನಿಹದಲ್ಲಿ ಗುಂಡಿ ತೆಗೆದು ಮೃತ ಆನೆಮರಿಯನ್ನು ಮಣ್ಣು ಮಾಡಲಾಯಿತು.

ಈ ಸಂದರ್ಭ ಸ್ಥಳೀಯ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಡಿಎಫ್‌ಓ ಚಕ್ರ‍್ರಪಾಣಿ, ಎಸಿಎಫ್ ರೋಶಿನಿ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಎಂ. ದೇವಯ್ಯ, ಮೋನಿಷ, ಸಂಜಿತ್ ಸೋಮಯ್ಯ, ಅಕ್ಕಮ್ಮ, ಆರ್‌ಆರ್‌ಟಿ ತಂಡದ ಮಧು, ಲಾರೆನ್ಸ್, ಸುರೇಶ್, ಅಚ್ಚಯ್ಯ, ಅಶ್ವತ್ಥ್, ವಿಲಾಸ್, ಲತೇಶ್, ನಾಣಯ್ಯ, ಡಿ.ಆರ್. ಸುರೇಶ್, ಭರತ್, ಮಹೇಶ್, ಪ್ರಶಾಂತ್, ಅಶೋಕ್ ಪಾಲ್ಗೊಂಡಿದ್ದರು.