ಬೆಂಗಳೂರು, ಆ. ೯: ಕೊರೊನಾ ಸಂದಿಗ್ಧತೆ ನಡುವೆಯೂ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಶೇ. ೯೯.೯ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಪರೀಕ್ಷೆ ಬರೆದ ೬೯೮೧ ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್, ರಾಜ್ಯದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ೮,೭೧,೪೪೩ ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿನಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಓರ್ವ ವಿದ್ಯಾರ್ಥಿನಿ ಮಾತ್ರ ತನ್ನ ಬದಲಿಗೆ ಬೇರೆಯವರನ್ನು ಕಳುಹಿಸಿ ಪರೀಕ್ಷೆ ಬರೆಸಿದ್ದರಿಂದ ಆ ವಿದ್ಯಾರ್ಥಿನಿಯನ್ನು ಮಾತ್ರ ಅನುತ್ತೀರ್ಣ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ೧೫೭ ವಿದ್ಯಾರ್ಥಿಗಳು ೬೨೫ಕ್ಕೆ ೬೨೫ ಅಂಕ ಪಡೆದಿದ್ದಾರೆ. ೨೮೯ ವಿದ್ಯಾರ್ಥಿಗಳು ೬೨೩ ಅಂಕ ಪಡೆದಿದ್ದಾರೆ. ಇಬ್ಬರು ೬೨೨ ಅಂಕ ಗಳಿಸಿದ್ದು, ೪೪೯ ಮಂದಿ ೬೨೧ ಅಂಕ, ೨೦ ಮಂದಿ ೬೨೦ ಅಂಕಗಳನ್ನು ಪಡೆದಿದ್ದಾರೆ. ಪರೀಕ್ಷೆ ಬರೆದ ಒಟ್ಟು ೮,೭೧,೪೪೩ ವಿದ್ಯಾರ್ಥಿಗಳಲ್ಲಿ
೮.೭೧,೪೪೨ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಎಂದು ಸಚಿವರ
ಮಾಹಿತಿಯಿತ್ತರು.
(ಮೊದಲ ಪುಟದಿಂದ) ೧,೨೮,೯೩೧ ವಿದ್ಯಾರ್ಥಿಗಳು ‘ಂ+’ ಶ್ರೇಣಿ, ೨,೫೦,೩೧೭ ವಿದ್ಯಾರ್ಥಿಗಳು ‘ಂ’ ಶ್ರೇಣಿ, ೨,೮೭,೬೮೪ ವಿದ್ಯಾರ್ಥಿಗಳು ‘ಃ’ ಶ್ರೇಣಿ, ೧,೧೩,೬೧೦ ವಿದ್ಯಾರ್ಥಿಗಳು ‘ಅ’ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶೇ. ೯ ರಷ್ಟು ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಿ ಪಾಸ್ ಮಾಡಲಾಗಿದೆ ಎಂದು ಅವರು ತಿಳಿಸಿದರು.