ಸುಂಟಿಕೊಪ್ಪ, ಆ. ೭: ಕೊಡಗು ಜಿಲ್ಲಾ ಲಾರಿ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ಸಮ್ಮದ್ ಪುನರ್ ಆಯ್ಕೆಗೊಂಡಿದ್ದಾರೆ. ೭ನೇ ಹೊಸಕೋಟೆ ಶಾದಿ ಮಹಲ್‌ನಲ್ಲಿ ನಡೆದ ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ಮಹಾಸಭೆಯಲ್ಲಿ ನೂತನ ಪದಾಧಿಕಾರಿ ಆಯ್ಕೆ ನಡೆಯಿತು. ನೂತನ ಆಡಳಿತ ಮಂಡಳಿ ಪದಾಧಿಕಾರಿಗಳಾಗಿ ರಫೀಕ್, ಸಂತೋಷ್, ಮನು, ವಿಜಯ್, ರಮೇಶ್, ಬೋಪಣ್ಣ, ಸೂರಜ್, ಶಂಶು, ಅಬ್ಬಾಸ್, ಟೋನಿ, ಸಂತೋಷ್, ಮುರುಳಿ ಮತ್ತಿತರರನ್ನು ನೇಮಕಗೊಳಿಸಲಾಯಿತು.

ಲಾಕ್‌ಡೌನ್ ಸಂದರ್ಭದಲ್ಲಿ ೭ನೇ ಹೊಸಕೋಟೆಯ ಹಸಿದವರ ಹಸಿವು ನೀಗಿಸುವ ತಂಡದವರು ಹಸಿದವರಿಗೆ ಊಟ ನೀಡುವ ಕಾರ್ಯಕ್ರಮವನ್ನು ಶ್ಲಾಘಿಸಿ ಅವರುಗಳನ್ನು ಸನ್ಮಾನಿಸಲಾಯಿತು. ಹಸಿವು ನೀಗಿಸುವ ತಂಡದ ಮುರುಗೇಶ್, ರವಿಚಂದ್ರ, ಸುಗು, ರಫೀಕ್, ನಾಸೀರ್, ಹಂಸ, ದೀಪು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿಜು ಮಹೇಶ್, ರಜಾಕ್, ಮುರುಗೇಶ್, ಮಹೇಶ್, ಮಡಿಕೇರಿ ತಾಲೂಕು ಲಾರಿ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಮನು, ರಿವರ್ ಸೈಡ್ ಬೋಪಣ್ಣ, ಸಿದ್ದಾಪುರದ ಶಿಬುಸಾಲ್ಸಾ ಹಾಗೂ ಮಹಮದ್ ಉಸ್ಥಿತರಿದ್ದರು.