ಸೋಮವಾರಪೇಟೆ, ಆ. ೭: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ಕಂದಾಯ ಇಲಾಖಾ ಸಂಬAಧಿತ ಕೆಲಸ ಕಾರ್ಯಗಳಿಗೆ ನಿರ್ಮಿತಿ ಕೇಂದ್ರದಿAದ ನೂತನ ಕಚೇರಿ ಕಟ್ಟಡ ನಿರ್ಮಾಣ ವಾಗಿದ್ದರೂ ಇನ್ನೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ.
ಕಳೆದ ಆರೇಳು ವರ್ಷಗಳಿಂದ ಸಹಕಾರ ಸಂಘದ ಕಟ್ಟಡದಲ್ಲಿ ಮಾಸಿಕ ೬ ಸಾವಿರ ಬಾಡಿಗೆ ಆಧಾರದಲ್ಲಿ ಶಾಂತಳ್ಳಿ ನಾಡ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ನೂತನವಾಗಿ ರೂ. ೧೮ ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದ್ದರೂ, ಇಂದಿಗೂ ಕಂದಾಯ ಇಲಾಖೆಗೆ ವರ್ಗಾವಣೆಗೊಂಡಿಲ್ಲ.
ಪರಿಣಾಮ ಸ್ವಂತ ಕಟ್ಟಡವಿದ್ದರೂ ಬಾಡಿಗೆ ಕಟ್ಟಡದಲ್ಲಿಯೇ ಸರ್ಕಾರಿ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಮಾಸಿಕ ಬಾಡಿಗೆ ಹಣ ಪಾವತಿಸುತ್ತಿದೆ. ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ಸೋಮವಾರಪೇಟೆ, ಆ. ೭: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ಕಂದಾಯ ಇಲಾಖಾ ಸಂಬAಧಿತ ಕೆಲಸ ಕಾರ್ಯಗಳಿಗೆ ನಿರ್ಮಿತಿ ಕೇಂದ್ರದಿAದ ನೂತನ ಕಚೇರಿ ಕಟ್ಟಡ ನಿರ್ಮಾಣ ವಾಗಿದ್ದರೂ ಇನ್ನೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ.
ಕಳೆದ ಆರೇಳು ವರ್ಷಗಳಿಂದ ಸಹಕಾರ ಸಂಘದ ಕಟ್ಟಡದಲ್ಲಿ ಮಾಸಿಕ ೬ ಸಾವಿರ ಬಾಡಿಗೆ ಆಧಾರದಲ್ಲಿ ಶಾಂತಳ್ಳಿ ನಾಡ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ನೂತನವಾಗಿ ರೂ. ೧೮ ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿದ್ದರೂ, ಇಂದಿಗೂ ಕಂದಾಯ ಇಲಾಖೆಗೆ ವರ್ಗಾವಣೆಗೊಂಡಿಲ್ಲ.
ಪರಿಣಾಮ ಸ್ವಂತ ಕಟ್ಟಡವಿದ್ದರೂ ಬಾಡಿಗೆ ಕಟ್ಟಡದಲ್ಲಿಯೇ ಸರ್ಕಾರಿ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಮಾಸಿಕ ಬಾಡಿಗೆ ಹಣ ಪಾವತಿಸುತ್ತಿದೆ. ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ಹಿಂದೇಟು ಹಾಕಿರುವ ಪರಿಣಾಮ ಇಂದಿಗೂ ನಾಡಕಚೇರಿ ಸಹಕಾರ ಸಂಘದ ಕಟ್ಟಡದಲ್ಲಿಯೇ ಕೆಲಸ ನಿರ್ವಹಿಸುತ್ತಿದೆ. ಶಾಂತಳ್ಳಿ ಹೋಬಳಿ ನಾಡಕಚೇರಿಯಲ್ಲಿ ಓರ್ವ ಡೆಪ್ಯೂಟಿ ತಹಶೀಲ್ದಾರ್, ಕಂದಾಯ ನಿರೀಕ್ಷಕ, ಮೂವರು ಗ್ರಾಮ ಲೆಕ್ಕಿಗರು, ನಾಲ್ವರು ಗ್ರಾಮ ಸಹಾಯಕರು, ಓರ್ವ ಕಂಪ್ಯೂಟರ್ ಆಪರೇಟರ್ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗುಡ್ಡಗಾಡು ಪ್ರದೇಶವನ್ನೇ ಹೊಂದಿರುವ ಹೋಬಳಿ ವ್ಯಾಪ್ತಿಯಿಂದ ದಿನಂಪ್ರತಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ನಾಡ ಕಚೇರಿಗೆ ಬರುತ್ತಿರುತ್ತಾರೆ. ನೂತನ ಕಟ್ಟಡ ನಿರ್ಮಾಣವಾಗಿರುವ ಹಿನ್ನೆಲೆ ತಕ್ಷಣ ಕಚೇರಿಯನ್ನು ಸ್ಥಳಾಂತರಿಸಿ ಸಾರ್ವಜನಿಕ ಸೇವೆಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಲೂಕು ತಹಶೀಲ್ದಾರ್ ಗೋವಿಂದ ರಾಜು, ನೂತನ ಕಚೇರಿ ಕಟ್ಟಡದ ಮುಂಭಾಗ ಹಳೆಯ ಕಟ್ಟಡವಿದ್ದು, ಅದನ್ನು ತೆರವುಗೊಳಿಸುವಂತೆ ನಿರ್ಮಿತಿ ಕೇಂದ್ರಕ್ಕೆ ತಿಳಿಸಲಾಗಿದೆ. ಹಳೆಯ ಕಟ್ಟಡ ತೆರವುಗೊಂಡ ತಕ್ಷಣ ನಾಡ ಕಚೇರಿಯನ್ನು ಸ್ಥಳಾಂತರಿಸ ಲಾಗುವುದು.
ಈ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೂ ಗಮನ ಸೆಳೆಯಲಾಗಿದೆ ಎಂದು ತಿಳಿಸಿದ್ದಾರೆ.
- ವಿಜಯ್