ನಾಪೋಕ್ಲು, ಜು. ೭: ನಾಪೋಕ್ಲು ಕೊಡವ ಸಮಾಜ ಹಾಗೂ ಸಮಾಜದ ಪೊಮ್ಮಕಡ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಕಕ್ಕಡ ೧೮ ಅನ್ನು ನಾಪೋಕ್ಲು ಕೊಡವ ಸಮಾಜದಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಡವಾಮೆರ ಗಾಂಭೀರ್ಯ, ಪದ್ಧತಿ-ಪರಂಪರೆ, ಉಡುಗೆ-ತೊಡುಗೆಯ ಬಗ್ಗೆ ಪೊಮಕ್ಕಡ ಪರಿಷತ್ ಅಧ್ಯಕ್ಷೆ ಮೂವೇರ ರೇಖಾ ಪ್ರಕಾಶ್ ಹಾಗೂ ಪರಿಷತ್ ನಿರ್ದೇಶಕಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ನೇತೃತ್ವದಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.
ಕಕ್ಕಡ ೧೮ರ ಪ್ರಾಮುಖ್ಯತೆ ಕುರಿತು ಪರಿಷತ್ನ ನಿರ್ದೇಶಕಿ ಬಿದ್ದಂಡ ಉಷಾ ದೇವಮ್ಮ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಕ್ಕಡ ೧೮ರಂದು ಉಪಯೋಗಿಸುವ ಮದ್ದುಸೊಪ್ಪು ಸೇರಿದಂತೆ ಎಲ್ಲಾ ವಸ್ತುಗಳಿಂದ ಖಾದ್ಯ ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ನಾಪೋಕ್ಲು ಕೊಡವ ಸಮಾಜದ ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ ವಹಿಸಿದ್ದರು.
ಈ ಸಂದರ್ಭದಲ್ಲಿ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಪೊಮ್ಮಕಡ ಪರಿಷತ್ನ ನಾಟೋಳಂಡ ಕಸ್ತೂರಿ, ಕುಲ್ಲೇಟಿರ ಹೇಮಾ ಅರುಣ್, ಕುಂಡ್ಯೋಳAಡ ಕವಿತಾ ಮುತ್ತಣ್ಣ, ಅಜ್ಜೆಟ್ಟಿರ ರಾಣಿ, ಕೊಡವ ಸಮಾಜದ ಆಡಳಿತ ಮಂಡಳಿ ನಿರ್ದೇಶಕರು, ಮತ್ತಿತರರು ಉಪಸ್ಥಿತರಿದ್ದರು.