ಮಡಿಕೇರಿ: ಕೋವಿಡ್ನಿಂದ ಗುಣಮುಖರಾಗಿ ಬಂದ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಸದಸ್ಯರಿಗೆ ಹಾಗೂ ತುಳು ಬಾಂಧವರಿಗೆ ಸಂಘದ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು.
ಗರ್ವಾಲೆ, ಮಾದಾಪುರ, ಬಿಳಿಗೇರಿ, ಹರದೂರು, ಗ್ರಾಮಗಳಿಗೆ ತೆರಳಿ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಹಾಗೂ ಗೌರವಾಧ್ಯಕ್ಷ ಬಾಬು ದಿನಸಿ ಕಿಟ್ ವಿತರಿಸಿದರು.
ಈ ಸಂದರ್ಭ ಸಂಘದ ಸದಸ್ಯ ಹೆಚ್.ಎಂ. ಕೃಷ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಹೆಚ್. ಎಸ್. ಮಧು, ಸೂರಿಗಾಗಿ ಸಮಿತಿ ತಾಲೂಕು ಅಧ್ಯಕ್ಷ ಅಣ್ಣಪ್ಪ, ಸದಸ್ಯ ಎ. ಉಮೇಶ್ ಸೂರ್ಯ ಹಾಜರಿದ್ದರು.ನಾಪೋಕ್ಲು: ಕರ್ನಾಟಕ ಸರಕಾರ, ಕಾರ್ಮಿಕ ಇಲಾಖೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ನಾಪೋಕ್ಲು ವಲಯದ ಟೈಲರಿಂಗ್ ಅಸೋಸಿಯೇಶನ್ ಸದಸ್ಯರಿಗೆ ಆಹಾರ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಲಯ ಸಮಿತಿ ಅಧ್ಯಕ್ಷ ಎ.ಕೆ. ಚಂದ್ರನ್, ಕ್ಷೇತ್ರ ಸಮಿತಿ ಉಪಾಧ್ಯಕ್ಷ ಹಾಗೂ ವಲಯ ಸಮಿತಿ ಸಲಹೆಗಾರ ಎನ್.ಇ. ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ಸುಶೀಲಾ ಸೇರಿದಂತೆ ಸಮಿತಿ ಸದಸ್ಯರು ಇದ್ದರು.ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಸ್ಕೆಎಸ್ಎಸ್ಎಫ್ ಕೊಡ್ಲಿಪೇಟೆ ಶಾಖೆ ಹಾಗೂ ಕಸಾಪ ಹೋಬಳಿ ಘಟಕದ ವತಿಯಿಂದ ೧೦ ಪ್ಲಾಸ್ಟಿಕ್ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಎಸ್ಕೆಎಸ್ಎಸ್ಎಫ್ ಶಾಖಾ ಅಧ್ಯಕ್ಷ ಇಬ್ರಾಹಿಂ ಮಲ್ಲಳ್ಳಿ, ಜಿಲ್ಲಾ ಸದಸ್ಯರಾದ ಅಬ್ದುಲ್ರೆಹಮಾನ್, ಅಬ್ದುಲ್ ರೌಫ್, ಕಲಂದರ್ ಶಾಫಿ, ಆರೋಗ್ಯ ಕೇಂದ್ರದ ಡಾ. ಪವಿತ್ರ, ಡಾ. ಆದಿರಾ, ಆರೋಗ್ಯ ನಿರೀಕ್ಷಕಿ ದುಂಬಿತಾ, ಸಿಬ್ಬಂದಿ ಕಸಾಪ ಹೋಬಳಿ ಅಧ್ಯಕ್ಷ ಅಬ್ದುಲ್ ರಬ್, ಸದಸ್ಯರು, ಪ್ರಮುಖ ಜಿ.ಆರ್. ಸುಬ್ರಮಣಿ ಹಾಜರಿದ್ದರು.ಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಂಡುಬAದಿರುವ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಭೇಟಿ ನೀಡಿ ಸೋಂಕಿತರ ಮನೆಗೆ ಆಹಾರ ಕಿಟ್ಗಳನ್ನು ವಿತರಿಸಿದರು. ನೆಲ್ಲಿಹುದಿಕೇರಿ ವ್ಯಾಪ್ತಿಯ ೪೮ ಮನೆಗಳು ಸೀಲ್ ಡೌನ್ ಆಗಿದ್ದು, ಸುಮಾರು ೬೦ ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು ಗ್ರಾ.ಪಂ. ಸದಸ್ಯರು ಹಾಗೂ ನೆಲ್ಯಹುದಿಕೇರಿ ಬಿಜೆಪಿ ಶಕ್ತಿ ಕೇಂದ್ರದ ಮನವಿಯ ಮೇರೆಗೆ ಶಾಸಕರು ಆಗಮಿಸಿ ಗ್ರಾಮದ ಎಲ್ಲಾ ವಾರ್ಡ್ಗಳಿಗೆ ತೆರಳಿ ಸೋಂಕಿತರಿಗೆ ಕಿಟ್ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರಿದ್ದು ಗ್ರಾಮಸ್ಥರು ಅನಾವಶ್ಯಕವಾಗಿ ಗುಂಪುಗೂಡಬಾರದು. ಮಾಸ್ಕ್ ಧರಿಸದೆ ಹೊರ ಹೋಗಬಾರದು ಎಂದರು. ಏರಿಯಾ ಸೀಲ್ಡೌನ್ ಕುರಿತು ಗ್ರಾಮಸ್ಥರು ವ್ಯಾಪಕ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಶಾಸಕರು ಕಂದಾಯ ಅಧಿಕಾರಿಗಳಿಗೆ ಕರೆ ಮಾಡಿ ವ್ಯಾಪ್ತಿಯ ಸೋಂಕಿತರ ಮನೆಗಳನ್ನು ಮಾತ್ರ ಸೀಲ್ ಡೌನ್ ಮಾಡುವಂತೆ ಆದೇಶಿಸಿದರು.
ಈ ಸಂದರ್ಭ ನೆಲ್ಲಿಹುದಿಕೇರಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಕಡೀರ ಬೆಳ್ಳಿಯಪ್ಪ, ಗ್ರಾ.ಪಂ. ಅಧ್ಯಕ್ಷ ಸಾಬು ವರ್ಗಿಸ್, ಉಪಾಧ್ಯಕ್ಷೆ ದಮಯಂತಿ, ಸದಸ್ಯರಾದ ಶಿವದಾಸ್, ಸುಜಾತ, ದಮಯಂತಿ ಹಾಗೂ ಪಕ್ಷದ ಪ್ರಮುಖರಾದ ಪಿ.ಸಿ. ಅಚ್ಚಯ್ಯ, ಧರ್ಮ, ನಿತಿನ್, ಅನೀಶ್, ಶ್ರೀನಿವಾಸ್, ಅಕ್ಷಯ್ ಇನ್ನಿತರರು ಹಾಜರಿದ್ದರು.ಶನಿವಾರಸಂತೆ: ಶನಿವಾರಸಂತೆ ಸುಪ್ರಜಾ ಗುರುಕುಲ ವಿದ್ಯಾಸಂಸ್ಥೆಯ ಗ್ರಂಥಾಲಯಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು ೫೭೦ ಕನ್ನಡ ಹಾಗೂ ಆಂಗ್ಲ ಭಾಷೆಯ ಉಪಯುಕ್ತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.