ವೀರಾಜಪೇಟೆ, ಆ. ೮: ಬೋಯಿಕೇರಿಯಲ್ಲಿ ಸೈನಿಕನ ಮೇಲೆ ನಡೆದ ಅಪಘಾತ ಪ್ರಕರಣವನ್ನು ಬಿಜೆಪಿ ಹಾಗೂ ಅದರ ಸಂಘಟನೆಗಳು ರಾಜಕಾರಣ ಮಾಡುತ್ತಿದ್ದಾರೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ್ ಅವರ ಹೇಳಿಕೆಯನ್ನು ಮಾಜಿ ಸೈನಿಕರ ಸಹಕಾರ ಸಂಘ ತೀವ್ರವಾಗಿ ಖಂಡಿಸುತ್ತದೆ. ಜವಾಬ್ದಾರಿ ಸ್ಥಾನದಲ್ಲಿರುವ ನಾಯಕರುಗಳು ಸಾರ್ವಜನಿಕ ಹೇಳಿಕೆಗಳನ್ನು ನೀಡುವಾಗ ಪರಾಮರ್ಶೆ ನಡೆಸಿ ನೀಡುವುದು ಉತ್ತಮ ಎಂದು ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚೇಂದ್ರಿಮಾಡ ಗಣೇಶ್ ನಂಜಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈನಿಕನ ಮೇಲೆ ಹಲ್ಲೆ ನಡೆದ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸದೆ ಸೆಕ್ಷನ್ಗಳನ್ನು ಹಾಕಿರುವುದರಿಂದ ಆರೋಪಿಗಳಿಗೆ ಜಾಮೀನು ಸಿಗಲು ಕಾರಣವಾಯಿತು. ಇದನ್ನು ಅರಿತ ಜಿಲ್ಲಾ ಮಾಜಿ ಸೈನಿಕರುಗಳ ಸಂಘಗಳು ಕರ್ನಾಟಕ ರಾಜ್ಯ ಮಾಜಿ ಸೈನಿಕರ ಸಂಘಕ್ಕೆ ಮಾಹಿತಿ ನೀಡಿ ಅವರ ಬೆಂಬಲದೊAದಿಗೆ ರಾಜಕೀಯ ರಹಿತವಾಗಿ ಎಲ್ಲಾ ರಾಜಕೀಯ ಪಕ್ಷಗಳನ್ನು ಆಹ್ವಾನಿಸಿ ಜುಲೈ ೩೦ ರಂದು ಪ್ರತಿಭಟನೆ ನಡೆಸಲಾಯಿತು.
ನಮ್ಮ ಆಹ್ವಾನವನ್ನು ಪರಿಗಣಿಸಿ ಬಿ.ಜೆ.ಪಿ ಹಾಗೂ ಇತರ ಸಂಘ ಸಂಸ್ಥೆಗಳು ರಾಜಕೀಯ ರಹಿತವಾಗಿ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಇದು ಕೇವಲ ಸೇವಾನಿರತ ಸೈನಿಕ ಹಾಗೂ ಆತನ ಕುಟುಂಬದವರ ಮೇಲಿನ ಹಲ್ಲೆ ವಿರುದ್ಧವಾಗಿತ್ತೇ ವಿನಃ ಯಾವುದೇ ಜಾತಿ ಜನಾಂಗ ಧರ್ಮದ ವಿರುದ್ಧ ನಡೆಸಿಲ್ಲ. ಆದರೆ ಕೆಲವು ರಾಷ್ಟಿçÃಯ ಹಾಗೂ ಪ್ರಾದೇಶಿಕ ಪಕ್ಷದ ಮುಖಂಡರುಗಳು ಮನ ಬಂದAತೆ ಹೇಳಿಕೆಗಳನ್ನು ನೀಡುತ್ತಿರುವುದು ಅವರ ರಾಜಕೀಯ ಪ್ರವೃತಿಯನ್ನು ತೋರಿಸುತ್ತದೆ. ಇನ್ನಾದರು ಜಾತಿ ರಾಜಕಾರಣ ಹಾಗೂ ಸಮಾಜದ ಸ್ವಾಸ್ಥö್ಯಗಳನ್ನು ಹಾಳು ಮಾಡದೆ ಪೊಲೀಸರಿಗೆ ನ್ಯಾಯ ಸಮ್ಮತವಾಗಿ ತನಿಖೆ ಮಾಡಲು ಬಿಡಿ. ಇದು ಸಮಸ್ತ ಮಾಜಿ ಸೈನಿಕರ ಕೋರಿಕೆಯಾಗಿದೆ. ಹಲ್ಲೆಗೊಳಗಾದ ಸೈನಿಕ ಕೊಡವ ಜನಾಂಗಕ್ಕೆ ಹಾಗೂ ಹಾಲಿ ಸೈನಿಕನಾಗಿರುವ ಕಾರಣ ವಿಧಾನಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಅವರು ಯೋಗಕ್ಷೇಮವನ್ನು ಅರಿಯಲು ಆಸ್ಪತ್ರೆಗೆ ತೆರಳಿರುವುದನ್ನು ಹಲವು ಮುಖಂಡರು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿದರು.
ಮಾಜಿ ಸೈನಿಕರ ಸಹಕಾರ ಸಂಘದ ಉಪಾಧ್ಯಕ್ಷ ಚಪ್ಪಂಡ ಹರೀಶ್ ಮಾತನಾಡಿ ಸೈನಿಕರ ವಿಚಾರದಲ್ಲಿ ಮಳೆಯ ನಡುವೆಯು ಮೂರು ಗಂಟೆಗೆ ಅಧಿಕ ಕಾಲ ಪ್ರತಿಭಟನೆ ನಡೆಸಿದರೂ ಇದು ರಾಜ್ಯಮಟ್ಟದಲ್ಲಿ ಸುದ್ದಿಯಾಗದಿರುವುದು ವಿಷಾದನೀಯ ಎಂದರು.
ಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷರುಗಳಾದ ಕಾವಡಿಚಂಡ ಯು ಗಣಪತಿ, ಪುಗ್ಗೆರ ಎಸ್ ನಂದ, ಮಾಜಿ ಉಪಾಧ್ಯಕ್ಷ ಪಟ್ರಪಂಡ ಕರುಂಬಯ್ಯ, ನೆಲ್ಲಮಕ್ಕಡ ಪೂವಯ್ಯ, ಮೇಕತಂಡ ಟೀಶಾ ಬೋಪಯ್ಯ ಉಪಸ್ಥಿತರಿದ್ದರು.