ಟೋಕಿಯೋ, ಆ. ೭: ಟೋಕಿಯೋ ಒಲಂಪಿಕ್ಸ್ ಕ್ರೀಡಾ ಕೂಟದ ಪುರುಷರ ೬೫ ಕೆ.ಜಿ ವಿಭಾಗದ ಫ್ರೀ ಸ್ಟೆöÊಲ್ ಕುಸ್ತಿ ಪಂದ್ಯದ ಕಂಚಿನ ಪದಕದ ಕಾದಾಟದಲ್ಲಿ ಭಾರತದ ಕುಸ್ತಿಪಟು ಭಜರಂಗ್ ಪೂನಿಯಾ ಕಜಾಕಿಸ್ತಾನದ ದೌಲೆತ್ ನಿಯಾಜ್‌ಬೆಕೌ ಎದುರು ೮-೦ ಅಂಕಗಳ ಗೆಲುವು ದಾಖಲಿಸುವ ಮೂಲಕ ಕಂಚಿನ ಪದಕ ಜಯಿಸಿದ್ದಾರೆ.

ಈ ಮೂಲಕ ತಮ್ಮ ಮೊದಲನೆಯ ಒಲಂಪಿಕ್ ಪದಕ ಪಡೆದುಕೊಂಡಿದ್ದಾರೆ. ಸೆಮಿಫೈನಲ್‌ನಲ್ಲಿ ಅಜರ್‌ಬೈಜಾನ್ ದೇಶದ ಹಾಜಿ ಆಲಿಯೇವ್ ವಿರುದ್ಧ ಸೋತ ಪೂನಿಯ ಚಿನ್ನ, ಬೆಳ್ಳಿ ಪಡೆಯುವ ಅವಕಾಶದಿಂದ ವಂಚಿತರಾದರು. ಆದರೆ ಕಂಚಿನ ಪದಕದ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಭಾರತಕ್ಕೆ ಈ ಬಾರಿಯ ೪ನೇ ಕಂಚು ಪಡೆದುಕೊಂಡರು. ಹರಿಯಾಣ ಸರಕಾರ ರೂ. ೨.೫ ಕೋಟಿ ಬಹುಮಾನವನ್ನು ಇವರಿಗೆ ಘೋಷಿಸಿದೆ.