ಮಡಿಕೇರಿ, ಆ.೭: ಕೊಡಗು ಜಿಲ್ಲೆಯಾದ್ಯಂತ ವಾಹನಗಳ ನೋಂದಣಿ ತೂಕ ೧೬,೨೦೦ ಕೆ.ಜಿ.ಗೂ ಅಧಿಕ ಭಾರದ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ತಾ. ೧೬ ರವರೆಗೆ ಈಗಾಗಲೇ ನಿಷೇಧಿಸಲಾಗಿದ್ದು, ಈ ನಿರ್ಬಂಧದಿAದ ವಿನಾಯಿತಿ ನೀಡಿದ ವಾಹನಗಳ ಸಾಲಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆ ವಾಹನಗಳನ್ನು ಸೇರ್ಪಡೆಗೊಳಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿದ್ದುಪಡಿ ಮಾಡಿ ಆದೇಶ ಹೊರಡಿಸಿದ್ದಾರೆ.