ಸುಂಟಿಕೊಪ್ಪ, ಆ. ೭: ಜಿಲ್ಲೆಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ೨೦೧೮ರಲ್ಲಿ ಭೂಕುಸಿತಗೊಂಡ ಪ್ರದೇಶಗಳಾದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲೇರಿಯ ತಾತಿಮನೆ ಪೈಸಾರಿಯಲ್ಲಿ ನೆಲೆಸಿರುವ ಮನೆಗಳಿಗೆ ಕುಶಾಲನಗರ ತಹಶೀಲ್ದಾರ್ ಪ್ರಕಾಶ್, ಸುಂಟಿಕೊಪ್ಪ ಕಂದಾಯ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಅಪಾಯದ ಸುಂಟಿಕೊಪ್ಪ, ಆ. ೭: ಜಿಲ್ಲೆಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ೨೦೧೮ರಲ್ಲಿ ಭೂಕುಸಿತಗೊಂಡ ಪ್ರದೇಶಗಳಾದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲೇರಿಯ ತಾತಿಮನೆ ಪೈಸಾರಿಯಲ್ಲಿ ನೆಲೆಸಿರುವ ಮನೆಗಳಿಗೆ ಕುಶಾಲನಗರ ತಹಶೀಲ್ದಾರ್ ಪ್ರಕಾಶ್, ಸುಂಟಿಕೊಪ್ಪ ಕಂದಾಯ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಅಪಾಯದ ಕುಟುಂಬಕ್ಕೆ ವಸತಿ ನೀಡಿ ಉಳಿದವರಿಗೆ ಜಿಲ್ಲಾಡಳಿತ ಮನೆ ನೀಡದೆ ಆದೇಶವನ್ನು ವಾಪಾಸು ಪಡೆದುಕೊಂಡಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.À
ಶುಕ್ರವಾರ ಬೆಳಿಗ್ಗೆ ಪರಿಶೀಲನೆ ಮತ್ತು ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದ ತಹಶೀಲ್ದಾರ್ ಜಿಲ್ಲಾಡಳಿತದ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಸುಂಟಿಕೊಪ್ಪ ಕಂದಾಯ ಪರಿವೀಕ್ಷಕ ಶಿವಪ್ಪ ಮಾತನಾಡಿ, ಈಗಾಗಲೇ ಕೆದಕಲ್ನಲ್ಲಿ ಪರಿಹಾರ ಕೇಂದ್ರಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳುತ್ತಿದ್ದಂತೆ ನಿವಾಸಿಗಳು ಆಕ್ರೋಶ ಅಸಮಾಧಾನ ವ್ಯಕ್ತ ಪಡಿಸಿದರು. ಕೊರೊನಾ ಸಂದರ್ಭ ಸಣ್ಣ ಮಕ್ಕಳು ಮತ್ತು ವಯೋವೃದ್ಧರನ್ನು ಕರೆದುಕೊಂಡು ಹೋಗಲು ಸಾಧÀ್ಯವಿಲ್ಲ ಎಂದರು.
ಇದೇ ಸಂದರ್ಭ ನೋಡಲ್ ಅಧಿಕಾರಿ ತೆಕ್ಕೆರ ದರ್ಶನ್, ಸುಂಟಿಕೊಪ್ಪ ನಾಡು ಕಚೇರಿ ಉಪ ತಹಶೀಲ್ದಾರ್ ಲೋಹಿತ್, ಗ್ರಾಮ ಲೆಕ್ಕಿಗರಾದ ಡಾಪ್ನ, ನಾಗೇಂದ್ರ, ಕೆದಕಲ್ ಪಿಡಿಒ ಎನ್.ಎಸ್. ರಾಜಶೇಖರ್, ಹಾಲೇರಿ ಗ್ರಾ.ಪಂ. ಸದಸ್ಯ ಬಿದ್ದಪ್ಪ ಸೇರಿದಂತೆ ಇತರರು ಇದ್ದರು.