ಮಡಿಕೇರಿ, ಆ. ೭: ಪೊನ್ನಂಪೇಟೆಯ ಓರ್ವ ಮಹಿಳೆಯ ಬ್ಯಾಂಕ್ ಖಾತೆಯಿಂದ ರೂ.೧೨,೦೦೦ ಕಳುವಾದ ಘಟನೆ ನಡೆದಿದೆ. ಮಹಿಳೆಗೆ ಕೆ.ವೈ.ಸಿ (ಏಟಿoತಿ ಙouಡಿ ಅusಣomeಡಿ) ನೆಪದಲ್ಲಿ ಸಂದೇಶವೊAದು ಬಂದಿದ್ದು, ಅದರಲ್ಲಿ ತಮ್ಮ ಬಿ.ಎಸ್.ಎನ್.ಎಲ್ ಸಿಮ್ನ ಕೆ.ವೈ.ಸಿ ಮಾಡಿಸುವುದು ಅತ್ಯಗತ್ಯ. ಇದನ್ನು ಮಾಡಿಸಲು ೨೪ ಗಂಟೆಗಳೊಳಗಾಗಿ ೯೬೯೨೬೬೪೫೩೫ - ಈ ನಂಬರ್ಗೆ ಕರೆ ಮಾಡಿ ಎಂದು ಸೂಚಿಸಲಾಗಿತ್ತು. ಕರೆ ಮಾಡಿದಾಕ್ಷಣ ಕರೆ ಸ್ವೀಕರಿಸಿದ ವ್ಯಕ್ತಿ ರೂ.೧೦ ನ್ನು ಗೂಗಲ್ ಪೇ ಮೂಲಕ ಕಳುಹಿಸಲು ಕೋರಿದ್ದು, ಹಣ ಸಂದಾಯ ಮಾಡಿದ ತಕ್ಷಣ, ಮಹಿಳೆಯ ಖಾತೆ ಯಿಂದ ರೂ.೧೨,೦೦೦ ಕಳುವಾಗಿದೆ.
ಮಹಿಳೆ ವಿಷಯವನ್ನು ಬ್ಯಾಂಕಿನವರಿಗೆ ತಿಳಿಸಿದ್ದು, ಹಣ ಜಮಾ ಆದ ಖಾತೆ ಸದ್ಯಕ್ಕೆ ಬ್ಲಾಕ್ ಆಗಿದೆಯಾದರೂ ಕಳುವಾದ ತಮ್ಮ ಹಣ ವಾಪಸ್ಸಾಗುವುದು ಅಸಾಧ್ಯ; ಜಿಲ್ಲೆಯಲ್ಲಿ ಈ ರೀತಿ ಅನೇಕ ಪ್ರಕರಣಗಳು ಇತ್ತೀಚೆಗೆ ನಡೆಯುತ್ತಿದ್ದು, ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಯ ವಿವರ, ಆನ್ಲೈನ್ ಬ್ಯಾಂಕಿAಗ್ ಮಾಡುವ ಸಂದರ್ಭ ದೊರಕುವ ಒ.ಟಿ.ಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳದೇ ತಾವೇ ಮುನೆÀ್ನಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯವಾಗಿದೆ.