ತಿಮಿಂಗಿಲ ತಿಂದು ಜೀರ್ಣವಾಗದೇ ಉಳಿದಿರುವ ವಸ್ತುಗಳನ್ನು ವಾಂತಿ ಮಾಡಿದ ಬಳಿಕ ಅದು ಘನ ಮೇಣದ ರೂಪಕ್ಕೆ ಮಾರ್ಪಾಡಾಗುತ್ತದೆ. ಇದನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಇದಕ್ಕೆ ಕೆಜಿ ಒಂದಕ್ಕೆ ರೂ. ಮೂರು ಕೋಟಿಗೂ ಅಧಿಕ ಬೆಲೆಯಿದೆ. ಉತ್ತಮ ಗುಣಮಟ್ಟದ ವಸ್ತುಗಳಿಗೆ ಇನ್ನಷ್ಟು ಹೆಚ್ಚಿನ ಬೆಲೆ ಇರುವದಾಗಿ ತಿಳಿದು ಬಂದಿದೆ. ಇದೀಗ ೮.೨೫೦ ಕೆಜಿ ತೂಕದ ವಸ್ತು ಸಿಕ್ಕಿದ್ದು, ಇದರ ಬೆಲೆ ಅಂದಾಜು ರೂ. ೨೪೭,೫೦೦,೦೦೦ರಷ್ಟಾಗಲಿದೆ. ಹಾಗಾಗಿ ಈ ಅಕ್ರಮ ಮಾರಾಟ ಪ್ರಕರಣದಲ್ಲಿ ಭಾರೀ ದೊಡ್ಡ ಜಾಲ ಇರುವ ಬಗ್ಗೆ ಶಂಖೆ ವ್ಯಕ್ತಗೊಂಡಿದ್ದು, ತನಿಖೆಯಿಂದ ವಿವರ ತಿಳಿಯಬೇಕಿದೆ.

ಪ್ರಥÀಮ ಪ್ರಕರಣ

ಸಮುದ್ರ ದಡದಲ್ಲಿ ಅಪರೂಪಕ್ಕೆ ಸಿಗುವ ಈ ವಸ್ತುವಿನ ಅಕ್ರಮ ಮಾರಾಟ ಪ್ರಕರಣ ಕೊಡಗು ಜಿಲ್ಲೆಯಲ್ಲಿ ಪ್ರಥಮ ಪ್ರಕರಣವಾಗಿದೆ. ಇದುವರೆಗೆ ಭಾರತ ದೇಶದಲ್ಲಿ ಈ ರೀತಿಯ ಹತ್ತು ಪ್ರಕರಣಗಳು ಪತ್ತೆಯಾಗಿವೆ.