-ಹೆಚ್.ಜೆ. ರಾಕೇಶ್

ಮಡಿಕೇರಿ, ಆ. ೭: ಬೋಗಸ್ ಕಾರ್ಡ್ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ಇ-ಕೈವೈಸಿ (ಜೀವ ಮಾಪಕ ಮರು ದೃಢೀಕರಣ) ಪ್ರಕ್ರಿಯೆ ಆರಂಭಿಸಿತು. ಇದೀಗ ಮತ್ತೊಮ್ಮೆ ಪ್ರಕ್ರಿಯೆ ನಡೆಯುತ್ತಿದ್ದು, ಪಡಿತರ ಕಾರ್ಡ್ದಾರರು ಕಡ್ಡಾಯವಾಗಿ ತಾ. ೧೦ ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಪಡಿತರ ಕಾರ್ಡ್ಗಳು ರದ್ದಾಗುವ ಸಾಧ್ಯತೆಗಳಿವೆ.

ಜಿಲ್ಲೆಯಲ್ಲಿ ಒಟ್ಟು ೧,೪೧,೯೪೧ ಕಾರ್ಡ್ದಾರರಿದ್ದು, ಇನ್ನೂ ೫೦ ಸಾವಿರ ಕುಟುಂಬ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ. ಈ ಪ್ರಕ್ರಿಯೆಯಿಂದ ಕುಟುಂಬದಿAದ ಹೊರಹೋಗಿರುವ ಸದಸ್ಯರು ಹಾಗೂ ನಿಧನ ಹೊಂದಿದ್ದರು ಕಾರ್ಡ್ನಿಂದ ಹೆಸರು ತೆಗೆಯದ ವಿಚಾರಗಳು ಬೆಳಕಿಗೆ ಬರಲಿವೆೆ. ಆನಂತರ ಕಾರ್ಡ್ನಲ್ಲಿ ಅಂತವರಿದ್ದಲ್ಲಿ ಅವರ ಹೆಸರನ್ನು ತೆಗೆದು ಹಾಕಲಾಗುವುದು. ಇದರಿಂದ ಪಡಿತರ ಸೋರಿಕೆ ತಡೆಗಟ್ಟಬಹುದಾಗಿದೆ.

ಪ್ರಕ್ರಿಯೆ ಕಡ್ಡಾಯ: ಈಗಾಗಲೇ ಕರ್ನಾಟಕ ಸರ್ಕಾರದ ಆದೇಶದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಇ-ಕೈವೈಸಿ. ಪ್ರಕ್ರಿಯೆ ಆರಂಭವಾಗಿದೆ. ಈ ಹಿಂದೆ ಇ-ಕೆವೈಸಿ ಮಾಡಿಸಿರದ ಅಂತ್ಯೋದಯ, ಬಿಪಿಎಲ್ ಮತ್ತು ಆದ್ಯತೇತರ ಪಡಿತರ ಚೀಟಿಗಳಲ್ಲಿ (ಎಪಿಎಲ್) ಸೇರ್ಪಡೆಗೊಂಡಿರುವ ಸದಸ್ಯರುಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಬೆರಳಚ್ಚು ನೀಡಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ.

ಆಗಸ್ಟ್ ೧ ರಿಂದ ಪ್ರಕ್ರಿಯೆ ಆರಂಭಗೊAಡಿದೆ. ಎಲ್ಲಾ ರೀತಿಯ ಪಡಿತರ ಚೀಟಿಗಳಲ್ಲಿ ಸೇರ್ಪಡೆಗೊಂಡಿರುವ ಕುಟುಂಬದ ಎಲ್ಲಾ ಸದಸ್ಯರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸುವುದು. ತಪ್ಪಿದ್ದಲ್ಲಿ ಮಾಡಿಸದ ಸದಸ್ಯರುಗಳಿಗೆ ಮುಂದಿನ ದಿನಗಳಲ್ಲಿ ಪಡಿತರ ಹಂಚಿಕೆ ಲಭ್ಯವಾಗುವುದಿಲ್ಲ ಎಂದು ಈಗಾಗಲೇ ಆಹಾರ ಇಲಾಖೆ ಎಚ್ಚರಿಕೆ ನೀಡಿದೆ. ಇ-ಕೆವೈಸಿ ಕಾರ್ಯವನ್ನು ಕೇವಲ ಸಂಬAಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿಯೇ ಮಾಡಿಸಬೇಕು. ಬೆರಳಚ್ಚು ನೀಡಿ ಇ-ಕೆವೈಸಿ ಮಾಡಿಸಲು ಯಾವುದೇ ಶುಲ್ಕ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಭವಿಷ್ಯದಲ್ಲಿ ಕಾರ್ಡ್ ರದ್ದು

ಇ-ಕೆ.ವೈ.ಸಿ. ಪ್ರಕ್ರಿಯೆ ಪೂರ್ಣಗೊಳಿಸದಿದ್ದಲ್ಲಿ ಭವಿಷ್ಯದಲ್ಲಿ ಖಂಡಿತವಾಗಿಯೂ ಕಾರ್ಡ್ ರದ್ದಾಗುತ್ತದೆ ಎಂದು ಆಹಾರ ಇಲಾಖೆಯ ಉಪನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ‘ಶಕ್ತಿ’ಗೆ ತಿಳಿಸಿದ್ದಾರೆ.

ತಾ. ೧೦ರ ತನಕ ಬೆರಳಚ್ಚು ನೀಡಲು ಅವಕಾಶ ನೀಡಲಾಗಿದೆ. ಮುಂದಿನ ತಿಂಗಳು ಕೂಡ ಪ್ರಕ್ರಿಯೆ ಆರಂಭವಾಗಬಹುದು. ಆದರೆ, ಈ ತಿಂಗಳಿನಲ್ಲಿಯೇ ಬೆರಳಚ್ಚು ನೀಡಬೇಕು. ಯಾವಾಗ ಬೇಕಾದರೂ ಪಡಿತರ ಚೀಟಿ ರದ್ದಾಗಬಹುದು. ಆನಂತರ ಕಾರ್ಡ್ ಪಡೆಯುವುದು ಕಷ್ಟಕರವಾಗುತ್ತದೆ ಎಂದು ಹೇಳಿದ್ದಾರೆ.

ಬೆರಳಚ್ಚು ಮಾಸಿದವರಿಗೆ ಅವಕಾಶ

ವಯೋವೃದ್ಧರ ಬೆರಳಚ್ಚು ಮಾಸಿಹೋಗಿರುತ್ತದೆ. ಆದ್ದರಿಂದ ಪ್ರಕ್ರಿಯೆಗೆ ತೊಂದರೆಯಾಗುತ್ತಿರುವ ಹಿನ್ನೆಲೆ ಅಂತವರಿಗೆ ಪರ್ಯಾಯ ವ್ಯವಸ್ಥೆಯನ್ನು ಆಹಾರ ಇಲಾಖೆ ಮಾಡಿದೆ.

ಬೆರಳಚ್ಚು ಮಾಸಿದವರ ವಿವರವನ್ನು ಆಯಾ ನ್ಯಾಯಬೆಲೆ ಅಂಗಡಿಯವರು ತಾಲೂಕು ಆಹಾರ ನಿರೀಕ್ಷಕರಿಗೆ ಮಾಹಿತಿ ನೀಡಬೇಕು. ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿಸಿ, ತಂತ್ರಾAಶದ ಮೂಲಕ ಸರಿಪಡಿಸುತ್ತಾರೆ.