.jpg)
ಮಡಿಕೇರಿ, ಆ. ೮: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಜಿಲ್ಲೆಯಲ್ಲಿ ಆ. ೧೪ ರಂದು ಏರ್ಪಟ್ಟಿರುವ ಮೆಗಾ ಲೋಕ ಅದಾಲತ್ನಲ್ಲಿ ಪಾಲ್ಗೊಳ್ಳಲು ಈಗಾಗಲೇ ಜಿಲ್ಲೆಯಲ್ಲಿ ೭೧೮೯ ಅರ್ಜಿಗಳು ದೊರಕಿವೆ. ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಪೈಕಿ ೧೨,೨೩೪ ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ಇತ್ಯರ್ಥಗೊಳಿಸಿಕೊಳ್ಳುವÀ ಅವಕಾಶವಿರುವದನ್ನು ಗುರುತಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಜಿಲ್ಲಾ ವಿಭಾಗದ ಸದಸ್ಯ ಕಾರ್ಯದರ್ಶಿ ಎನ್. ಸುಬ್ರಮಣ್ಯ ಅವರು “ಶಕ್ತಿ”ಗೆ ಮಾಹಿತಿಯಿ ತ್ತಿದ್ದಾರೆ. ತಾ. ೧೪ ರ ವರೆಗೆ ಇನ್ನೂ ಕಾಲಾವ ಕಾಶವಿದ್ದು ಜಿಲ್ಲೆಯ ವ್ಯಾಜ್ಯ ಪರ ವಿರೋಧಿ ವ್ಯಕ್ತಿಗಳು ಶೀಘ್ರ ಅರ್ಜಿ ಸಲ್ಲ್ಲಿಸಿದರೆ ತಾ. ೧೪ ರಂದು ಈ ಎಲ್ಲವನ್ನೂ ಇತ್ಯರ್ಥಗೊಳಿಸುವÀ ಅವಕಾಶವಿದೆ . ರಾಜ್ಯದ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ಆಗಸ್ಟ್, ೧೪ ರಂದು ಇದನ್ನು ಆಯೋಜಿಸಲಾಗಿದ್ದು, ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲಾ ನ್ಯಾಯಾಲಯದಲ್ಲಿಯೂ ನಡೆಯಲಿದೆ. ಅಲ್ಲದೆ ಜಿಲ್ಲೆಯ ಇತರ ತಾಲೂಕುಗಳ ನ್ಯಾಯಾಲ ಗಳಲ್ಲಿಯೂ ಅಲ್ಲ್ಲಿನ ವ್ಯಾಜ್ಯಗಳ ಇತ್ಯರ್ಥಕ್ಕೆ ಅದೇ ದಿನ ಅವಕಾಶವಿದ್ದು ವ್ಯಾಜ್ಯಗಳಿರುವ ಜನರು ಅರ್ಜಿ ಸಲ್ಲಿಸುವಂತೆ ಅವರು ಸಲಹೆಯಿತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಮೆಗಾ ಲೋಕ ಅದಾಲತ್ ಏರ್ಪಡಿಸಲಾಗಿದೆ. ಆ ದಿಸೆಯಲ್ಲಿ ಈ ಅವಕಾಶವನ್ನು ಬಳಸಿಕೊಳ್ಳುವಂತಾಗಬೇಕು ಎಂದು ಕೋರಿದರು.
ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲು ಪಡುವ ಪ್ರಕರಣಗಳು ಸೇರಿದಂತೆ ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕ ವೇತನಕ್ಕೆ ಸಂಬAಧಿಸಿದ ಕ್ಲೇಮುಗಳು, ವಿದ್ಯುತ್ ಮತ್ತು ನೀರಿನ ಶುಲ್ಕಗಳು, ಮೈಂಟೆನೆನ್ಸ್ ಪ್ರಕರಣಗಳು ಹಾಗೆಯೇ ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿ ಆಗಬಲ್ಲ ಅಪರಾಧಿತ ಪ್ರಕರಣಗಳು, ಆರ್ಥಿಕ ವಸೂಲಾತಿ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ, ನ್ಯಾಯಾಧೀಕರಣ ಪ್ರಕರಣಗಳು, ವೇತನ ಹಾಗೂ ಭತ್ಯೆಗೆ ಸಂಬAಧಿಸಿದ ಸೇವಾ ಪ್ರಕರಣಗಳು, ಬಾಡಿಗೆ, ಅನುಭೊಗ ಹಕ್ಕುಗಳು ಹೀಗೆ ಹಲವು ರೀತಿಯ ಪ್ರಕರಣಗಳನ್ನು ಮೆಗಾ ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಅದಾಲತ್ನಲ್ಲಿ ಇತ್ಯರ್ಥವಾಗುವ ಪ್ರಕರಣಗಳಲ್ಲಿ ಮತ್ತೆ ನ್ಯಾಯಾಲಯದ ಮೆಟ್ಟಿಲೇರುವ ಪ್ರಕರಣಗಳು ಅಪರೂಪ. ಬಹುತೇಕ ಪ್ರಕರಣಗಳು ರಾಜಿ ಸಂಧಾನದ ಮೂಲಕ ಮುಕ್ತ್ತಾಯಗೊಳ್ಳುತ್ತವೆ. ಈ ಸಂಬAಧ ಪ್ರಾಧಿಕಾರದಿಂದ ಅರ್ಜಿದಾರರಿಗೆ ದೃಢೀಕರಣ ಪತ್ರ ನೀಡಲಾಗುತ್ತಿದೆ. ವಿಶೇಷವೇನೆಂದರೆ ಹೀಗೆ ಇತ್ಯರ್ಥಗೊಳ್ಳ್ಳುವ ಪ್ರಕರಣಗಳ ವಿರುದ್ಧ ಮತ್ತೆ ಉಚ್ಚ ನ್ಯಾಯಾಲಯಕ್ಕೆ ಅಪೀಲು ಹೋಗುವ ಕಾನೂನಾತ್ಮಕ ಅವಕಾಶ ವ್ಯಾಜ್ಯದಾರರಿಗಿರುವುದಿಲ್ಲ. ಆದರೆ, ಕೆಲವೊಂದು ಇತ್ಯರ್ಥ ಪ್ರಕರಣಗಳಲ್ಲಿ ಹಣದ ವ್ಯವಹಾರಕ್ಕೆ ಡಿಕ್ರಿ ಪ್ರಕರಣಕ್ಕೆ ಸಂಬAಧಿಸಿದAತೆ ಇತ್ಯರ್ಥದ ಬಳಿಕವೂ ಹಣ ನೀಡದೆ ಸತಾಯಿಸಿದರೆ ಅದರ ವಿರುದ್ಧ ನ್ಯಾಯಾಲಯದಲ್ಲಿ
(ಮೊದಲ ಪುಟದಿಂದ) ಸಿವಿಲ್ ಮೊಕದ್ದಮೆ ಹೂಡುವ ಅವಕಾಶವಿದೆ.
ತಾ. ೧೪ ರಂದು ವ್ಯಾಜ್ಯಕ್ಕೆ ಸಂಬAಧಿತ ಪರ ವಿರೋಧಿ ವ್ಯಕ್ತಿಗಳು ಅಥವಾ ಅವರ ಪರ ವಕೀಲರು ಹಾಜರಾಗಬೇಕು. ಸ್ಥಳದಲ್ಲಿಯೇ ಶೀಘ್ರ ನಿರ್ಧಾರ ಕೈಗೊಂಡು ಆಯಾ ನ್ಯಾಯಾಧೀಶರುಗಳು ಆದೇಶ ಹೊರಡಿಸುತ್ತಾರೆ ಎಂದು ಸುಬ್ರಮಣ್ಯ ಮಾಹಿತಿಯಿತ್ತರು, ಪೋಕ್ಸೋ ಕಾಯ್ದೆ, ಅತ್ಯಾಚಾರ, ವಿವಾಹವಿಚ್ಛೇದನ, ಕೊಲೆ ಪ್ರಕರಣ ಸೇರಿದಂತೆ ಕೆಲವೊಂದು ಗುರುತರ ಅಪರಾಧ ಪ್ರಕರಣಗಳನ್ನು ಅದಾಲತ್ನಲ್ಲಿ ಇತ್ಯರ್ಥಪಡಿಸಲಾಗುವುದಿಲ್ಲ, ಅಂತಹುಗಳು ನ್ಯಾಯಾಲಯದ ತೀರ್ಪಿನ ಮೂಲಕವೇ ಆಗಬೇಕಿದೆ, ಲೋಕ ಅದಾಲತ್ ಎಂದರೆ ಜನತಾ ನ್ಯಾಯಾಲಯ ಎಂದೇ ಕರೆಸಿಕೊಂಡಿದೆ ಎಂದು ತಿಳಿಸಿದರು.