ಮಡಿಕೇರಿ, ಆ. ೮ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ರಾಜೀವ್‌ಗಾಂಧಿ ಖೇಲ್‌ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿಯನ್ನಾಗಿ ಬದಲಾಯಿಸಿದ ಬೆನ್ನಲ್ಲೇ ನಾಗರಹೊಳೆಯ ರಾಜೀವ್‌ಗಾಂಧಿ ರಾಷ್ಟಿçÃಯ ಉದ್ಯಾನವನದ ಹೆಸರನ್ನು ಬದಲಾಯಿಸಬೇಕೆಂಬ ಕೂಗು ಎದ್ದಿದೆ.

ಈಗಾಗಲೇ ಕೊಡಗಿನ ಕೆಲವು ಯುವಕರು ಚೇಂಜ್ ಡಾಟ್ ಆರ್ಗ್ನಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ಈಗ ಸಾಮಾಜಿಕ ಜಾಲ ತಾಣಗಳಲ್ಲೂ ಈ ಕುರಿತ ಚರ್ಚೆ ಆರಂಭಗೊAಡಿದೆ.

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈಗಾಗಲೇ ಅಭಿಯಾನ ಆರಂಭಿಸಿರುವ ನವೀನ್ ಮಾದಪ್ಪ ಮತ್ತು ಕಾಯಪಂಡ ವಿನಯ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಅರಣ್ಯ ಸಚಿವ ಭೂಪೇಂದರ್ ಯಾದವ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ರಾಜೀವ್‌ಗಾಂಧಿ ರಾಷ್ಟಿçÃಯ ಉದ್ಯಾನವನಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅಥವಾ ಜನರಲ್ ತಿಮ್ಮಯ್ಯ ರಾಷ್ಟಿçÃಯ ಉದ್ಯಾನವನ ಎಂಬ ಹೆಸರಿಡಬಹುದು ಎಂದು ಇವರುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- ಕೋವರ್ ಕೊಲ್ಲಿ ಇಂದ್ರೇಶ್