ಟೋಕಿಯೋ, ಆ. ೫: ಒಲಂಪಿಕ್ಸ್ನಲ್ಲಿ ಭಾರತಕ್ಕೆ ಇಂದು ಸಂಭ್ರಮದ ದಿನ. ೪೧ ವರ್ಷಗಳ ಸುದೀರ್ಘ ಅವಧಿಯ ನಂತರ ಹಾಕಿಯಲ್ಲಿ ಭಾರತಕ್ಕೆ ಪದಕವೊಂದು ಲಭ್ಯವಾಗಿದ್ದು, ದೇಶಾದ್ಯಂತ ಸಂತಸದ ಅಲೆ ಸೃಷ್ಟಿಯಾಗಿದೆ. ೧೯೮೦ರ ಮಾಸ್ಕೋ ಒಲಂಪಿಕ್ಸ್ನಲ್ಲಿ ಭಾರತ ಚಿನ್ನದ ಪದಕಗಳಿಸಿತ್ತು. ಆನಂತರದಲ್ಲಿ ನಾಲ್ಕು ದಶಕಗಳೇ ಕಳೆದರೂ ಭಾರತ ಪದಕ ಸಾಧನೆ ಮಾಡಲಾಗಿರಲಿಲ್ಲ. ಇದೀಗ ಈ ಬಾರಿಯ ಪಂದ್ಯಾವಳಿಯಲ್ಲಿ ಭಾರತ ಟೋಕಿಯೋ, ಆ. ೫: ಒಲಂಪಿಕ್ಸ್ನಲ್ಲಿ ಭಾರತಕ್ಕೆ ಇಂದು ಸಂಭ್ರಮದ ದಿನ. ೪೧ ವರ್ಷಗಳ ಸುದೀರ್ಘ ಅವಧಿಯ ನಂತರ ಹಾಕಿಯಲ್ಲಿ ಭಾರತಕ್ಕೆ ಪದಕವೊಂದು ಲಭ್ಯವಾಗಿದ್ದು, ದೇಶಾದ್ಯಂತ ಸಂತಸದ ಅಲೆ ಸೃಷ್ಟಿಯಾಗಿದೆ. ೧೯೮೦ರ ಮಾಸ್ಕೋ ಒಲಂಪಿಕ್ಸ್ನಲ್ಲಿ ಭಾರತ ಚಿನ್ನದ ಪದಕಗಳಿಸಿತ್ತು. ಆನಂತರದಲ್ಲಿ ನಾಲ್ಕು ದಶಕಗಳೇ ಕಳೆದರೂ ಭಾರತ ಪದಕ ಸಾಧನೆ ಮಾಡಲಾಗಿರಲಿಲ್ಲ. ಇದೀಗ ಈ ಬಾರಿಯ ಪಂದ್ಯಾವಳಿಯಲ್ಲಿ ಭಾರತ ಒಲಂಪಿಕ್ ಹಾಕಿಯಲ್ಲಿ ಭಾರತ ಒಟ್ಟು ೮ ಚಿನ್ನದ ಪದಕ, ಒಂದು ಬೆಳ್ಳಿ ಹಾಗೂ ೩ ಕಂಚುಗಳನ್ನು ಪಡೆದಂತಾಗಿದೆ.
ರೋಮಾಂಚಕ ಪಂದ್ಯ
ಇAದು ನಡೆದ ಕಂಚಿನ ಪದಕದ ಪಂದ್ಯದಲ್ಲಿ ಜರ್ಮನಿ ಮೊದಲ ೨ ನಿಮಿಷಗಳಲ್ಲಿಯೇ ಗೋಲು ಭಾರಿಸಿ ಮುನ್ನಡೆ ಸಾಧಿಸಿತು. ಪಂದ್ಯದ ೨೫ ನಿಮಿಷಗಳು ಪೂರ್ಣಗೊಂಡ ನಂತರ ಜರ್ಮನಿ ೩-೧ ಗೋಲುಗಳಿಂದ ಮುನ್ನಡೆ ಸಾಧಿಸಿ ಭಾರತದ ಕಂಚಿನ ಪದಕದ ಕನಸಿಗೆ ಧಕ್ಕೆ ತರುವ ಎಲ್ಲಾ ಲಕ್ಷಣಗಳು ತೋರುತ್ತಿತ್ತು. ಆದರೆ, ಪಂದ್ಯದ ೨೭ ಹಾಗೂ ೨೯ ನಿಮಿಷಗಳಲ್ಲಿ ತಲಾ ೨ ಗೋಲುಗಳನ್ನು ಭಾರಿಸಿದ ಭಾರತ ಸ್ಕೋರ್ ಅನ್ನು ೩-೩ ಸಮಬಲಕ್ಕೆ ತಂದಿತು. ಇದಾದ ಬಳಿಕ ೩೧ನೇ ನಿಮಿಷದಲ್ಲಿ ಹಾಗೂ ೩೪ನೇ ನಿಮಿಷದಲ್ಲಿ ಮತ್ತೆ ೨ ಗೋಲುಗಳನ್ನು ಭಾರಿಸಿ ೫-೩ ಗೋಲುಗಳಿಂದ ಮುನ್ನಡೆ ಪಡೆಯಿತು. ಬಳಿಕ ಜರ್ಮನಿ ಮತ್ತೊಂದು ಗೋಲು ಭಾರಿಸಿತಾದರೂ ಜಯಗಳಿಸಲು ಶಕ್ತವಾಗಲಿಲ್ಲ. ಭಾರತದ ಪಾಳಯದಲ್ಲಿ ಈ ಅಭೂತಪೂರ್ವ ಜಯ ಭಾರೀ ಸಂಭ್ರಮವನ್ನು ಸೃಷ್ಟಿಸಿದೆ.
ಶ್ರೀಜೇಶ್ ಅತ್ಯುತ್ತಮ ರಕ್ಷಣಾತ್ಮಕ ಆಟ
ಈ ಬಾರಿಯ ಒಲಂಪಿಕ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಗೋಲ್ಕೀಪರ್ ಶ್ರೀಜೇಶ್ಗೆ ಇಂದಿನ ಪಂದ್ಯದ ಕೊನೆಯ ೬ ಸೆಕೆಂಡ್ಗಳಲ್ಲಿ ಸವಾಲೊಂದು ಎದುರಾಯಿತು. ಜರ್ಮನಿಗೆ ಪೆನಾಲ್ಟಿ ಕಾರ್ನರ್ ದೊರೆತಿದ್ದು, ಗೋಲಾಗಿ ಪರಿವರ್ತಿಸಿದ್ದರೆ ಪೆನಾಲ್ಟಿ ಶೂಟೌಟ್ ಮೂಲಕ ವಿಜೇತರನ್ನು ನಿರ್ಧರಿಸ ಲಾಗುತ್ತಿತ್ತು. ಆದರೆ ಶ್ರೀಜೇಶ್ ಅತ್ಯುತ್ತಮ