ಮಡಿಕೇರಿ, ಆ.೫: ಗೋಣಿಕೊಪ್ಪಲು ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಗೋಣಿಕೊಪ್ಪಲು ಮತ್ತು ಹಾತೂರು ಫೀಡರ್‌ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ತಾ. ೬ ರಂದು (ಇಂದು) ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.

ಆದ್ದರಿಂದ ಗೋಣಿಕೊಪ್ಪ ಪಟ್ಟಣ, ಹರಿಶ್ಚಂದ್ರಪುರ, ಜೋಡುಬೀಟಿ, ಅರುವತ್ತೋಕ್ಲು, ಕೈಕೇರಿ, ಕಳತ್ಮಾಡು, ಕೊಳತ್ತೋಡು ಬೈಗೋಡು, ಹೊಸಕೋಟೆ, ಹಾತೂರು ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಅವರು ಕೋರಿದ್ದಾರೆ.