ಕುಶಾಲನಗರ, ಆ.೫: ಕೊರೊನಾ ಸೋಂಕಿನ ೩ನೇಯ ಅಲೆಯ ಪ್ರಾರಂಭದಲ್ಲೇ ಕಳೆದ ಒಂದು ತಿಂಗಳ ಅವಧಿಯಲ್ಲಿ ಸೋಮವಾರಪೇಟೆ ತಾಲೂಕಿನ ೩೭ ಮಕ್ಕಳಿಗೆ ಸೋಂಕು ದೃಢಪಟ್ಟಿರುವ ವರದಿ ಹೊರಬಿದ್ದಿದೆ.

ಜುಲೈ ೧ ರಿಂದ ಇದುವರೆಗೆ ೧೦ ರಿಂದ ೧೮ರ ವಯಸ್ಸಿನ ೩೭ ಮಕ್ಕಳು ಸೋಂಕಿತರಾಗಿದ್ದು, ಇವರಲ್ಲಿ ೧೪ ಮಂದಿ ಮಕ್ಕಳು ಕೂಡಿಗೆ ಕಾಳಜಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. -ಚಂದ್ರ ಮೋಹನ್