ಮಡಿಕೇರಿ, ಆ. ೪: ಕೇರಳ ಮತ್ತು ಮಹಾರಾಷ್ಟç ರಾಜ್ಯಗಳಲ್ಲಿ ಕೋವಿಡ್-೧೯ ಸೋಂಕು ಹೆಚ್ಚುತ್ತಿದ್ದು, ಈ ಜಿಲ್ಲೆಯಲ್ಲಿ ಕೋವಿಡ್-೧೯ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಿಶೇಷ ಸರ್ವೇಕ್ಷಣಾ ಮಾನದಂಡಗಳನ್ನು ಕೊಡಗು ಜಿಲ್ಲೆಯಾದ್ಯಂತ ತಾ. ೫ ರಿಂದ ತಾ. ೧೬ರ ಬೆಳಿಗ್ಗೆ ೬ ಗಂಟೆಯವರೆಗೆ ಜಾರಿಯಲ್ಲಿರುವಂತೆ ಹೊರಡಿಸಿದ್ದ ಆದೇಶವನ್ನು ಜಿಲ್ಲಾಧಿಕಾರಿಗಳು ಇಂದು ಹಿಂಪಡೆದಿದ್ದಾರೆ. ಇಂದು ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿಗಳು ತಾ. ೪ರಂದು ಹೊರಡಿಸಿದ್ದ ಆದೇಶವನ್ನು ಕಾರಣಾಂತರಗಳಿAದ ಹಿಂಪಡೆದಿರುವುದಾಗಿ ತಿಳಿಸಿದ್ದಾರೆ.
ಅಂತರ ರಾಜ್ಯಗಳಿಂದ ಕೊಡಗು ಜಿಲ್ಲೆಗೆ ಬಸ್ ಅಥವಾ ವೈಯಕ್ತಿಕ ಸಾರಿಗೆ ಮೂಲಕ ಪ್ರವೇಶ ಪಡೆಯುವವರಿಗೆ ಕೋವಿಡ್ ೨ನೇ ಡೋಸ್ ಲಸಿಕೆಯನ್ನು ಪಡೆದಿದ್ದರೂ, ಸಹ ೭೨ ಗಂಟೆಗಳ ಒಳಗೆ ಮಾಡಿಸಿದ ಆರ್ಟಿಪಿಸಿಆರ್ ಪರೀಕ್ಷಾ ನೆಗೆಟಿವ್ ಪ್ರಮಾಣ ಪತ್ರವನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದ್ದ ಆದೇಶ ಹಿಂಪಡೆಯಲಾಗಿದೆ.
(ಮೊದಲ ಪುಟದಿಂದ) ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲಾ ಹೊಟೇಲ್, ಲಾಡ್ಜ್, ರೆಸಾರ್ಟ್, ಹೋಂ ಸ್ಟೇ, ಅರಣ್ಯ ಇಲಾಖೆಗಳ ವಸತಿ ಗೃಹ ಇತ್ಯಾದಿಗಳಲ್ಲಿ ತಂಗಲಿರುವವರು ಬುಕಿಂಗ್ ಸಮಯದಲ್ಲಿ ಪ್ರವಾಸಿಗಳು ಚೆಕ್ಇನ್ ದಿನದಿಂದ ಹಿಂದಿನ ೭೨ ಗಂಟೆಗಳೊಳಗಾಗಿ ಮಾಡಿಸಿದ ನೆಗೆಟಿವ್ ಪರೀಕ್ಷಾ ಪ್ರಮಾಣ ಪತ್ರವನ್ನು ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದ್ದ ಆದೇಶ ಹಿಂಪಡೆಯಲಾಗಿದೆ.
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು ಹಾಗೂ ಇನ್ನಿತರ ಪ್ರೇಕ್ಷಣೀಯ ಸ್ಥಳಗಳಾದ ರಾಜಾಸೀಟ್, ಅಬ್ಬಿಫಾಲ್ಸ್, ಮಾಂದಲ್ಪಟ್ಟಿ, ದುಬಾರೆ, ನಿಸರ್ಗಧಾಮ, ಹಾರಂಗಿ ಡ್ಯಾಂ, ಚಿಕ್ಲಿಹೊಳೆ ಡ್ಯಾಂ, ಮಲ್ಲಳ್ಳಿ ಫಾಲ್ಸ್, ಇರ್ಪುಫಾಲ್ಸ್, ಚೇಲಾವರ ಫಾಲ್ಸ್ ಇತ್ಯಾದಿಗಳು ಮತ್ತು ಪ್ರವಾಸೋದ್ಯಮ, ಅರಣ್ಯ ಇಲಾಖೆ, ಪ್ರಾಚ್ಯ ವಸ್ತು, ಪುರಾತತ್ವ ಇಲಾಖೆಗಳ ಪ್ರವಾಸಿ ತಾಣಗಳು ಮತ್ತು ಇನ್ನಿತರ ಪ್ರೇಕ್ಷಣೀಯ ಸ್ಥಳಗಳಿಗೆ ಆಗಮಿಸುವ ಪ್ರವಾಸಿಗಳು ಹಾಗೂ ಸಾರ್ವಜನಿಕರಿಗೆ ಹಿಂದಿನ ೭೨ ಗಂಟೆಗಳೊಳಗಾಗಿ ಮಾಡಿಸಿದ ನೆಗೆಟಿವ್ ಪರೀಕ್ಷಾ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲಾಗಿದ್ದ ಆದೇಶ ಹಿಂಪಡೆಯಲಾಗಿದೆ.
ಆದರೆ, ಈ ಆದೇಶಕ್ಕಿಂತ ಮೊದಲು ನೀಡಿದ್ದ ಕೇರಳ ಮತ್ತು ಮಹಾರಾಷ್ಟçದಿಂದ ಕೊಡಗಿಗೆ ಆಗಮಿಸುವ ವ್ಯಕ್ತಿಗಳು ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರಲೇಬೇಕೆAಬ ಆದೇಶ ಹಾಲಿ ಜಾರಿಯಲ್ಲಿರುತ್ತದೆ. ಈ ಆದೇಶವನ್ನು ಕೇರಳ ಮಹಾರಾಷ್ಟçಗಳಿಂದ ಬರುವ ಪ್ರವಾಸಿಗರು, ವ್ಯಕ್ತಿಗಳು ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದು ಇಂದು ಹೊರಡಿಸಿರುವ ಆದೇಶದಲ್ಲಿ ಸೂಚಿಸಿದ್ದಾರೆ.
ವಿಶೇಷ ಸರ್ವೇಕ್ಷಣಾ ಮಾನದಂಡ ಜಾರಿ ಆದೇಶ ಹಿಂಪಡೆದ ಜಿಲ್ಲಾಧಿಕಾರಿ