ಮಡಿಕೇರಿ, ಆ. ೫: ನಗರದಲ್ಲಿರುವ ಬೀಡಾಡಿ ದನಗಳ ರಕ್ಷಣೆಗಾಗಿ ಗೋಮಾಳದಲ್ಲಿ ಗೋಶಾಲೆ ನಿರ್ಮಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತರು ನಗರಸಭೆ ಪೌರಾಯುಕ್ತ ರಾಮ್‌ದಾಸ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಡಿಕೇರಿ ನಗರದಲ್ಲಿ ಇತ್ತೀಚೆಗೆ ಎಲ್ಲೆಂದರಲ್ಲಿ ಬೀಡಾಡಿ ದನಗಳ ಮಡಿಕೇರಿ, ಆ. ೫: ನಗರದಲ್ಲಿರುವ ಬೀಡಾಡಿ ದನಗಳ ರಕ್ಷಣೆಗಾಗಿ ಗೋಮಾಳದಲ್ಲಿ ಗೋಶಾಲೆ ನಿರ್ಮಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತರು ನಗರಸಭೆ ಪೌರಾಯುಕ್ತ ರಾಮ್‌ದಾಸ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಡಿಕೇರಿ ನಗರದಲ್ಲಿ ಇತ್ತೀಚೆಗೆ ಎಲ್ಲೆಂದರಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನಗಳ ಸಂಚಾರಕ್ಕೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತಿದೆ. ಜೊತೆಗೆ ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಈ ಬೀಡಾಡಿ ದನಗಳಿಗೆ ಸ್ಥಳವಿಲ್ಲದೆ, ಆಹಾರವಿಲ್ಲದೆ ಸಿಕ್ಕಸಿಕ್ಕಲ್ಲೆಲ್ಲ ಓಡಾಡುತ್ತಿದ್ದು, ರಾತ್ರಿ ಸಮಯದಲ್ಲಿ ಮಂಜು ಮುಸುಕಿದಾಗ ಇವುಗಳ ಓಡಾಟದಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಅನೇಕ ಅಪಘಾತಗಳು ಸಂಭವಿಸುತ್ತಿದ್ದು, ಹಲವು ಹಸು - ಕರುಗಳು ಅಪಘಾತಕ್ಕೆ ಈಡಾಗಿ ಮರಣ ಹೊಂದುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಇವುಗಳ ರಕ್ಷಣೆಗಾಗಿ ಹಾಗೂ ವಾಹನ ಸವಾರರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಮೆಡಿಕಲ್ ಕಾಲೇಜು ಬಳಿ ಇರುವ ಗೋಮಾಳದಲ್ಲಿ ನಗರಸಭೆ ವತಿಯಿಂದ ಗೋಶಾಲೆ ನಿರ್ಮಿಸುವ ಸಲುವಾಗಿ ಕಾಯಕಲ್ಪ ನೀಡಿ ಇಂತಹ ಜಾನುವಾರುಗಳನ್ನು ಅಲ್ಲಿಗೆ ರವಾನಿಸುವ ಕೆಲಸ ಆಗಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭ ಉಮೇಶ್ ಗೌಡ, ಪ್ರದೀಪ್ ಕರ್ಕೇರ, ಶ್ರೀನಿವಾಸ್ ರೈ, ಅಜಿತ್ ಕೊಟ್ಟಕೇರಿಯನ, ಹರೀಶ್ ಅಣ್ವೇಕರ್ ಇದ್ದರು.