ಬೆಂಗಳೂರಿನಲ್ಲಿ ರೂ. ೬ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ
ಬೆಂಗಳೂರು, ಆ. ೬: ಬೆಂಗಳೂರಿನ ಸೆಂಟ್ರಲ್ ಕ್ರೆöÊಂ ಬ್ರಾಂಚ್ ಶುಕ್ರವಾರ ನೈಜೀರಿಯನ್ ಪ್ರಜೆ ಸೇರಿದಂತೆ ಐವರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದು, ಆರೋಪಿಗಳಿಂದ ರೂ. ೬ ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ನಗರದ ಹೆಣ್ಣೂರಿನಲ್ಲಿರುವ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿ ಮಾದಕ ದ್ರವ್ಯ ಮಾರಾಟಗಾರರನ್ನು ಹಿಡಿದು ಅವರ ಬಳಿಯಿದ್ದ ಹಾಶಿಶ್ ಎಣ್ಣೆ, ಗಾಂಜಾ, ಚರಸ್ ಮತ್ತು ಹೈಡ್ರೋ ಸಸಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಬಳಿ ಇದ್ದ ಕಾರು, ಬೈಕ್ ಮತ್ತು ಮೊಬೈಲ್ ಫೋನ್ಗಳನ್ನು ಸಹ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರ ಪ್ರಕಾರ, ಬಂಧಿತರಲ್ಲಿ ಒಬ್ಬನಾದ ನಬರನ್ ಚಕ್ಮಾ ಅಸ್ಸಾಂ ಮೂಲದವನಾಗಿದ್ದು, ಕಳೆದ ಮೂರು ವರ್ಷಗಳಿಂದ ನಗರದ ಪ್ರಮುಖ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮತ್ತು ಸಾಫ್ಟ್ವೇರ್ ಇಂಜಿನಿಯರ್ಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಕಳೆದ ವರ್ಷ, ನಗರದ ರಾಮಮೂರ್ತಿನಗರದ ಮನೆಯ ಮೇಲೆ ಪೊಲೀಸರು ದಾಳಿ ಮಾಡಿದಾಗ, ಚಕ್ಮಾ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಆದರೆ ಆತನ ಸಹಚರ ಸಿಂಟೋ ಥಾಮಸ್ನನ್ನು ಬಂಧಿಸಲಾಗಿತ್ತು. ಕಳೆದ ಒಂದು ವರ್ಷದಲ್ಲಿ ಚಕ್ಮಾ ತನ್ನ ಡ್ರಗ್ಸ್ ರಾಕೆಟ್ ಅನ್ನು ಹೆಚ್ಚಿಸಿಕೊಂಡಿದ್ದಾನೆ ಮತ್ತು ಆತನ ಸಹಚರರ ಮೂಲಕ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾನೆಂಬುದು ನಮಗೆ ತಿಳಿದಿತ್ತು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನೊಂದು ಕಾರ್ಯಾಚರಣೆಯಲ್ಲಿ, ನೈಜೀರಿಯಾದ ಅಬೂಜಾದ ಒನ್ಯೇಕಾ ಎಮ್ಯಾನುಯೆಲ್ ಜೇಮ್ಸ್ (೩೧)ನನ್ನು ಬಂಧಿಸಲಾಗಿದ್ದು, ಆತನಿಂದ ಎಕ್ಟಾಸಿ ಮಾತ್ರೆಗಳು, ಎಲ್ಎಸ್ಡಿ ಸ್ಟಿçಪ್ ಮತ್ತು ಎಂಡಿಎAಎ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂತರರಾಜ್ಯ ಗಡಿ ವಿವಾದಗಳನ್ನು ಪರಿಹರಿಸಲು ಸಮಿತಿ ಸ್ಥಾಪನೆ
ಗುವಾಹಟಿ, ಆ. ೬: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮೇಘಾಲಯದ ಸಿಎಂ ಕಾನ್ರಾಡ್ ಕೆ. ಸಂಗ್ಮಾ ಅವರು ತಮ್ಮ ಗಡಿ ವಿವಾದಗಳನ್ನು ಪರಿಹರಿಸಲು ಎರಡು ರಾಜ್ಯಗಳ ಸಮಿತಿಗಳನ್ನು ರಚಿಸುವುದಾಗಿ ಹೇಳಿದ್ದಾರೆ. ಉಭಯ ರಾಜ್ಯಗಳು ತಮ್ಮ ಸಂಪುಟ ಸಚಿವರ ನೇತೃತ್ವದಲ್ಲಿ ಎರಡು ಸಮಿತಿಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. ಸಮಿತಿ ಮೂಲಕ ಆರಂಭದಲ್ಲಿ ೧೨ ವಿವಾದಿತ ಪ್ರದೇಶಗಳನ್ನು ಆರು ಹಂತಗಳಲ್ಲಿ ಗಡಿ ವಿವಾದಗಳನ್ನು ಪರಿಹರಿಸುವ ಗುರಿಯನ್ನು ಹೊಂದಿವೆ ಎಂದು ಮುಖ್ಯಮಂತ್ರಿಗಳು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪ್ರತಿ ಸಮಿತಿಯು ಐದು ಸದಸ್ಯರನ್ನು ಹೊಂದಿರುತ್ತದೆ. ಇದರಲ್ಲಿ ಪ್ರತಿ ರಾಜ್ಯದ ಸಂಪುಟದ ಮಂತ್ರಿ ಸೇರಿದಂತೆ ಅಧಿಕಾರಿಗಳು, ಸ್ಥಳೀಯ ಪ್ರತಿನಿಧಿಗಳು ಸಮಿತಿಯ ಭಾಗವಾಗಿರಬಹುದು ಎಂದು ಶರ್ಮಾ ಹೇಳಿದರು. ಎರಡೂ ಸಮಿತಿಯ ಸದಸ್ಯರು ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ನಾಗರಿಕ ಸಮಾಜದ ಸದಸ್ಯರೊಂದಿಗೆ ಸಂವಹನ ನಡೆಸುತ್ತಾರೆ. ಅಲ್ಲದೆ ೩೦ ದಿನಗಳಲ್ಲಿ ಚರ್ಚೆಗಳನ್ನು ಪೂರ್ಣಗೊಳಿಸುತ್ತಾರೆ ಎಂದು ಹೇಳಿದರು. ಐತಿಹಾಸಿಕ ಪುರಾವೆಗಳು, ಜನಾಂಗೀಯತೆ, ಆಡಳಿತಾತ್ಮಕ ಅನುಕೂಲತೆ, ಸಂಬAಧಿತ ಜನರ ಮನಸ್ಥಿತಿ ಮತ್ತು ಭಾವನೆಗಳು ಮತ್ತು ಭೂಮಿಯ ಅನ್ಯೋನ್ಯತೆ ಈ ಐದು ಅಂಶಗಳ ಆಧಾರದ ಮೇಲೆ ವಿವಾದಗಳನ್ನು ಪರಿಹರಿಸಿಕೊಳ್ಳಲು ಯತ್ನಿಸುತ್ತೇವೆ ಎಂದು ಸಂಗ್ಮಾ ಹೇಳಿದರು. ಮೊದಲ ಹಂತದಲ್ಲಿ ತಾರಾಬಾರಿ, ಗಿಜಾಂಗ್, ಫಾಲಿಯಾ, ಬಕ್ಲಪರಾ, ಪಿಲಿಂಗ್ಕಟಾ ಮತ್ತು ಖಾನಾಪರ ಈ ಆರು ಪ್ರದೇಶಗಳ ಗಡಿ ಸಮಸ್ಯೆಯನ್ನು ತಾತ್ವಿಕವಾಗಿ ಪರಿಹರಿಸಿಕೊಳ್ಳಲಾಗುವುದು ಎಂದರು.
ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಚಟುವಟಿಕೆ ಅತ್ಯಾಚಾರ
ಕೊಚ್ಚಿ, ಆ. ೬: ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಚಟುವಟಿಕೆ ನಡೆಸುವುದೂ ಕೂಡ ಅತ್ಯಾಚಾರವೇ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅತ್ಯಾಚಾರಕ್ಕೆ ಸಂಬAಧಪಟ್ಟು ಇರುವ ಕಾನೂನಿನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಒಂದು ಮಹತ್ವದ ತೀರ್ಪನ್ನು ಕೇರಳ ಹೈಕೋರ್ಟ್ ನೀಡಿದ್ದು, ಪತಿಯು ತನ್ನ ಪತ್ನಿಯ ದೇಹವು ಅವನಿಗೆ ಋಣಿಯಾಗಿರಬೇಕು ಎಂಬ ಕಲ್ಪನೆಯಲ್ಲಿದ್ದಾಗ ವೈವಾಹಿಕ ಅತ್ಯಾಚಾರ ಸಂಭವಿಸುತ್ತದೆ ಎಂದು ಹೇಳಿದೆ. ಈ ಸಂದರ್ಭದಲ್ಲಿ, ಗಂಡನ ಸಂಪತ್ತು ಮತ್ತು ಲೈಂಗಿಕತೆಯ ಬಗೆಗಿನ ಇನ್ನಿಲ್ಲದ ಪ್ರಚೋದನೆಯು ಹೆಂಡತಿಯನ್ನು ವಿಚ್ಛೇದನಕ್ಕೆ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತದೆ. ಸಂಗಾತಿಯ ಸಂಪತ್ತು ಮತ್ತು ಲೈಂಗಿಕತೆಯ ಬಗೆಗಿನ ಅತೃಪ್ತ ಪ್ರಚೋದನೆಯು ಕ್ರೌರ್ಯಕ್ಕೆ ಸಮಾನವಾಗಿರುತ್ತದೆ ಎಂದು ನ್ಯಾಯಮೂರ್ತಿ ಎ. ಮೊಹಮ್ಮದ್ ಮುಸ್ತಾಕ್ ಮತ್ತು ಕೌಸರ್ ಎಡಪ್ಪಗತ್ ಅವರನ್ನೊಳಗೊಂಡ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ವಿಚ್ಛೇದನಕ್ಕಾಗಿ ಪತ್ನಿಯ ಮನವಿಯನ್ನು ಅನುಮತಿಸುವ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕ್ರೌರ್ಯದ ಆಧಾರದ ಮೇಲೆ ಗಂಡನ ಮನವಿಯನ್ನು ಪೀಠ ವಜಾಗೊಳಿಸಿದೆ. ನೆರೆ ಮನೆಯ ಬಾಲಕಿಯ ಮೇಲೆ ದುರುದ್ದೇಶಪೂರಿತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಜಿಯಾದ್ ರೆಹಮಾನ್ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ ಪ್ರತಿವಾದಿಗಳು ಸಂತಸ್ತೆಯು ಬಾಲಕಿ ಎಂಬುದಕ್ಕೆ ಪೂರಕವಾಗಿ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದಾರೆ. ಹಾಗಾಗಿ ಈ ಪ್ರಕರಣ ಪೋಕ್ಸೊ ಕಾಯ್ದೆಯಡಿ ಬರುವುದಿಲ್ಲ ಎಂದು ಪೀಠ ತಿಳಿಸಿದೆ. ಅದಾಗ್ಯೂ, ಅರ್ಜಿದಾರ ನಡೆಸಿರುವ ಲೈಂಗಿಕ ಕೃತ್ಯಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೭೬ (೧), ೩೭೫ (ಸಿ) ವ್ಯಾಪ್ತಿಗೆ ಬರುವ ಅಪರಾಧಗಳಾಗಿವೆ ಎಂದು ಪೀಠ ಹೇಳಿದೆ. ಸಂತ್ರಸ್ತೆಯೊAದಿಗೆ ಆರೋಪಿ ಸಂಭೋಗ ನಡೆಸಿದರಷ್ಟೇ ಅತ್ಯಾಚಾರ ಎನ್ನಿಸಿಕೊಳ್ಳುವುದಿಲ್ಲ. ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಚಟುವಟಿಕೆ ನಡೆಸುವುದೂ ಕೂಡ ಅತ್ಯಾಚಾರವೇ ಎಂದು ಕೇರಳ ಹೈಕೋರ್ಟ್ ಹೇಳಿತ್ತು.
ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನೆ
ಶ್ರೀನಗರ, ಆ. ೬: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ಮುಂದುವರೆದಿದ್ದು, ಇಂದು ನಡೆದ ಸೇನಾ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಾಶ್ಮೀರದ ರಜೌರಿ ಜಿಲ್ಲೆಯ ತನ್ಮಾಂಡಿ ಪ್ರದೇಶದಲ್ಲಿ ಉಗ್ರರ ಇರುವಿಕೆ ಪತ್ತೆ ಮಾಡಿದ್ದ ಸೇನಾಪಡೆಗಳು ಆ ಪ್ರದೇಶವನ್ನು ಸುತ್ತುವರೆದಿದೆ. ಆದರೆ ಸೈನಿಕರ ಆಗಮನದ ಬೆನ್ನಲ್ಲೇ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದರು. ಈ ವೇಳೆ ಸೈನಿಕರು ಕೂಡ ಪ್ರತಿದಾಳಿ ನಡೆಸಿದರು. ನಿನ್ನೆ ರಾತ್ರಿಯಿಂದಲೇ ಗುಂಡಿನ ಚಕಮಕಿ ನಡೆಯುತ್ತಿದ್ದು, ೧೬ ಕಾರ್ಪ್ ಕಮಾಂಡೋಗಳು ನಡೆಸಿದ ಈ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.