ಮಡಿಕೇರಿ, ಆ. ೪: ಯಾವುದೇ ಜನಾಂಗ ಅಭಿವೃದ್ಧಿಯಾಗಬೇಕಾದರೆ ಮೊದಲು ಆ ಜನಾಂಗದ ಭಾಷೆ ಬೆಳವಣಿಗೆಯಾಗಬೇಕೆಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅಭಿಪ್ರಾಯಪಟ್ಟರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಸಿದ್ಧ ಚಿತ್ರಕಲಾವಿದ, ರಂಗ ನಿರ್ದೇಶಕ ಮೋಹನ್ ಸೋನ ಅವರ ಕುರಿತಾದ ಸಾಕ್ಷö್ಯ ಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತ ನಾಡಿದರು. ಭಾಷೆ ಬಳಕೆ ಕಡಿಮೆಯಾದಲ್ಲಿ ಜನಾಂಗವೂ ವಿನಾಶದತ್ತ ಸಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾಷೆಯನ್ನು ಹೆಚ್ಚಾಗಿ ಬಳಸುವ ಮೂಲಕ ಅದನ್ನು ಬೆಳೆಸುವುದರೊಂದಿಗೆ ಜನಾಂಗದ ಏಳಿಗೆ ಸಾಧ್ಯ ಎಂದು ಕಾರ್ಯಪ್ಪ ಹೇಳಿದರು. ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಗಳು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆರೋಗ್ಯಕರ ಪೈಪೋಟಿಯೊಂದಿಗೆ ಭಾಷೆ - ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದ ಕಾರ್ಯಪ್ಪ ಅವರು, ಹೆಚ್ಚಾಗಿ ರಂಗಮAದಿರಗಳು, ಕಲಾ ಶಾಲೆಗಳು ನಿರ್ಮಾಣವಾಗುವಂತಾಗಬೇಕೆAದು ಆಶಯ ವ್ಯಕ್ತಪಡಿಸಿದರು.

ಮತ್ತೋರ್ವ ಅತಿಥಿಯಾಗಿದ್ದ ಕರ್ನಾಟಕ ಜಾನಪದ ಪರಿಷತ್‌ನ ಕೊಡಗು ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು ಮಾತನಾಡಿ, ಕಲೆಯ ಮೇಲಿದ್ದ ಅಭಿಮಾನ ಹಾಗೂ ಪ್ರೀತಿ ಮೋಹನ್ ಸೋನ ಅವರನ್ನು ಎತ್ತರಕ್ಕೆ

(ಮೊದಲ ಪುಟದಿಂದ) ಕೊಂಡೊಯ್ದಿದ್ದು, ಕಲೆಯನ್ನು ಬೆಳೆಸುವಲ್ಲಿ ಮೋಹನ್ ಸೋನ ಅವರ ಪರಿಕಲ್ಪನೆ ಅನುಕರಣೀಯ ಎಂದು ಹೇಳಿದರು.

ಇನ್ನೋರ್ವ ಅತಿಥಿ ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ ಅವರು ಮಾತನಾಡಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಕ್ಷö್ಯಚಿತ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ಮಾತನಾಡಿ, ಒಬ್ಬ ಕಲಾವಿದನಿಗೆ ಆತನ ಕಲೆಯೆ ಶಕ್ತಿಯಾಗಿರುತ್ತದೆ. ಕಲಾವಿದನಲ್ಲಿ ಶಕ್ತಿ ಇರುವಾಗಲೇ ಆತನ ಸಾಧನೆಯನ್ನು ಗುರುತಿಸುವಂತಾಗಬೇಕೆAದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮನಾರಾಯಣ ಕಜೆಗದ್ದೆ ಅವರು ಮಾತನಾಡಿ, ಮೋಹನ್ ಸೋನ ಅವರನ್ನು ಎಲ್ಲೆಡೆ ಪರಿಚಯಿಸುವ ಕೆಲಸವನ್ನು ಸಮುದಾಯ ಮಾಡಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದರಲ್ಲದೆ, ಕಲಾವಿದರ ಸಾಧನೆಯನ್ನು ಗುರುತಿಸುವ ಕಾರ್ಯವನ್ನು ಅಕಾಡೆಮಿ ಮುಂದುವರೆಸಲಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಅಕಾಡೆಮಿ ಸದಸ್ಯರುಗಳು ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಧನಂಜಯ ಅಗೋಳಿಕಜೆ ನಿರೂಪಿಸಿ, ರಿಜಿಸ್ಟಾçರ್ ಚಿನ್ನಸ್ವಾಮಿ ಸ್ವಾಗತಿಸಿದರು. ಡಾ. ಕೆ.ಸಿ. ದಯಾನಂದ್ ವಂದಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಪ್ರದರ್ಶನಗೊಂಡ ಕಲಾವಿದ ಮೋಹನ್ ಸೋನ ಅವರ ಕುರಿತಾದ ಸಾಕ್ಷö್ಯಚಿತ್ರ ಮೋಹನ್ ಸೋನರ ಬದುಕು, ಸಾಧನೆ ಬಗ್ಗೆ ಬೆಳಕು ಚೆಲ್ಲುವುದರೊಂದಿಗೆ ನೆರೆದಿದ್ದವರ ಗಮನ ಸೆಳೆಯಿತು.