(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಆ. ೪: ಒಂದೊಮ್ಮೆ ಸಮೃದ್ಧವಾಗಿ ಪ್ರತ್ಯೇಕವಾಗಿದ್ದ ‘ಸಿ’ ರಾಜ್ಯ ಓರ್ವ ಮುಖ್ಯಮಂತ್ರಿ, ಗೃಹಮಂತ್ರಿ, ವಿಧಾನಸಭಾ ಅಧ್ಯಕ್ಷರು ೨೪ ಶಾಸಕರು ಇದ್ದಂತಹ ಕೊಡಗಿನ ಕಥೆ ಪ್ರಸ್ತುತ ಕಲ್ಪನಾತೀತವಾದದ್ದು.. ಆಗಿನ ಇತಿಹಾಸವೆಲ್ಲಿ...? ಈಗಿನ ವಾಸ್ತವವೆಲ್ಲಿ...? ಈಗಿನ ತಲೆಮಾರಿನವರಿಗೆ ಹೇಳಿದರೆ ಇದು ಕನಸು ಎಂಬ ಭಾವನೆ ಮೂಡುವದು ಸಹಜ...
೧೯೫೬ಕ್ಕೆ ಮುಂಚೆ ಕೊಡಗು ಪ್ರತ್ಯೇಕ ‘ಸಿ’ ರಾಜ್ಯವಾಗಿ ತನ್ನದೇ ಆದ ಆಡಳಿತವನ್ನು ಹೊಂದಿತ್ತು. ಅದರ ನಂತರದಲ್ಲಿ ಘಟಿಸಿರುವ ಎಲ್ಲಾ ಬೆಳವಣಿಗೆಗಳು ಕೊಡಗಿನ ಬಗ್ಗೆ ಅತೀವ ನಿರ್ಲಕ್ಷö್ಯವನ್ನೇ ಕಂಡಿವೆ. ರಾಜ್ಯವಾಗಿದ್ದ ಕೊಡಗು ವಿಶಾಲ ಕರ್ನಾಟಕದೊಂದಿಗೆ ವಿಲೀನವಾಯಿತು. ವಿಲೀನದ ಬಳಿಕ ಕರ್ನಾಟಕ ಸರಕಾರದಲ್ಲಿ ಜಿಲ್ಲೆ ಹಲವು ವರ್ಷಗಳ ಕಾಲ ಮೂರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿತ್ತು. ಜಿಲ್ಲೆಯ ಮೂರು ತಾಲೂಕುಗಳಾಗಿದ್ದ ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ಈ ಮೂರೂ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿದ್ದವು.
ಆ ನಂತರದಲ್ಲಿ ಮತ್ತೊಮ್ಮೆ ಕ್ಷೇತ್ರ ಪುನರ್ವಿಂಗಡಣೆ ಎಂಬ ನಿಯಮ ಬಂದಿತು. ಜನಸಂಖ್ಯೆ ಆಧಾರಿತವಾಗಿ ಮೂರಿದ್ದ ವಿಧಾನಸಭಾ ಕ್ಷೇತ್ರಗಳು ಎರಡಕ್ಕೆ ಕುಸಿಯಿತು. ಇದನ್ನು ವಿರೋಧಿಸಿ ಭಾರೀ ಪ್ರತಿಭಟನೆಗಳು ಬಂದ್ ನಡೆದವು. ಆದರೆ ಯಾವದೂ ಲೆಕ್ಕಕ್ಕೆ ಬಾರಲಿಲ್ಲ. ಕ್ಷೇತ್ರ ಪುನರ್ವಿಂಗಡಣೆಯAತೆ, ಮಡಿಕೇರಿ ಹಾಗೂ ವೀರಾಜಪೇಟೆ ಈ ಎರಡು ವಿಧಾನಸಭಾ ಕ್ಷೇತ್ರವಾಗಿ ಒಂದು ವಿಧಾನಸಭಾ ಕ್ಷೇತ್ರ (ಸೋಮವಾರಪೇಟೆ) ಕೈತಪ್ಪಿತು. ಇದರ ಬೆನ್ನಲ್ಲೇ ತ್ವರಿತವಾಗಿ ಚುನಾವಣೆಯೂ ಎದುರಾಯಿತು. ಎಲ್ಲರೂ ಹೊಸ ವ್ಯವಸ್ಥೆಗೆ ಒಗ್ಗಿಕೊಂಡರು. ಇದು ಪ್ರಸ್ತುತದ ಕೊಡಗಾಗಿದೆ.
ಮುಖ್ಯಮಂತ್ರಿಗಳೂ ಆಗಿದ್ದರು
ಈ ಹಿಂದೊಮ್ಮೆ ಕೊಡಗಿನಿಂದ ಚುನಾಯಿತರಾಗಿದ್ದ ಆರ್. ಗುಂಡೂರಾವ್ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು ಎಂಬದು ಒಂದು ಇತಿಹಾಸವಾಗಿದೆ.
ಜಿಲ್ಲೆಯ ಪ್ರತಿನಿಧಿಗಳು ಶಾಸಕರು ಮಾತ್ರ..!
೧೯೮೦ರ ನಂತರದಲ್ಲಿ ಬಿ.ಎ. ಜೀವಿಜಯ, ಎ.ಎಂ. ಬೆಳ್ಳಿಯಪ್ಪ. ಡಿ.ಎ. ಚಿಣ್ಣಪ್ಪ ಅವರುಗಳು ಕೊಡಗಿನಿಂದ ಸಚಿವರಾಗಿದ್ದರು. ೧೯೯೦ರ ದಶಕದಿಂದ ಈಚೆಗೆ ೧೯೯೪ರ ಅವಧಿಯಲ್ಲಿ ಜನತಾದಳ ಸರಕಾರ ಅಧಿಕಾರದಲ್ಲಿದ್ದಾಗ ಯಂ.ಸಿ. ನಾಣಯ್ಯ ಅವರು ಕೊಡಗಿನಿಂದ ಸಚಿವರಾಗಿದ್ದರು. ಬಳಿಕ ೨೦೦೪ರ ಅವಧಿಯಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಕೊಡಗಿನ ಮೂವರು ಸಚಿವರುಗಳಾಗಿದ್ದು, ಇದೀಗ ನೆನಪು ಮಾತ್ರ. ಇಲ್ಲಿ ಗಮನಿಸ ಬೇಕಾದ ವಿಚಾರವೆಂದರೆ ಕೊಡಗಿನ ಕೋಟಾದಲ್ಲಿ ಸಚಿವರಾಗಿದ್ದು, ಎಂ.ಎA. ನಾಣಯ್ಯ ಅವರು ಮಾತ್ರ. ಟಿ.ಜಾನ್ ಅವರು ಅಲ್ಪಸಂಖ್ಯಾತ ಆಧಾರದಲ್ಲಿ ಹಾಗೂ ಸುಮಾವಸಂತ್ ಅವರು ಪರಿಶಿಷ್ಟ ಪಂಗಡ ಮಹಿಳಾ ಕೋಟಾದಲ್ಲಿ ಸಚಿವರಾಗುವ ಅವಕಾಶ ಪಡೆದಿದ್ದರು. ಆದರೆ ಅದೃಷ್ಟವೆಂಬAತೆ ಈ ಮೂವರು ಕೊಡಗಿನವರಾಗಿದ್ದರು. ಇದಾದ ಬಳಿಕ ಜಿಲ್ಲೆಯಿಂದ ಚುನಾಯಿತರಾಗುವವರು ಕೇವಲ ಶಾಸಕರು ಮಾತ್ರ ಎಂಬAತಾಗಿದೆ.
ನAತರದಲ್ಲಿ ಕೊಡಗಿಗೆ ‘ಚಿಪ್ಪು’
ಇದೀಗ ಸರಿಸುಮಾರು ಎರಡು ದಶಕಗಳು ಕಳೆಯುತ್ತಾ ಬಂದಿವೆ. ಯಾವುದೇ ಸರಕಾರಗಳು ಬಂದರೂ ಕೊಡಗಿನವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನಮಾನಗಳು ಮಾತ್ರ ಸಿಗುತ್ತಿಲ್ಲ.
ಕೊಡಗಿನವರು ಇದ್ದರೇನು... ಇಲ್ಲದಿದ್ದರೇನು ಎಂಬ ರೀತಿಯಲ್ಲಿ ಜಿಲ್ಲೆ ಕಡೆಗಣಿಸಲ್ಪಡುತ್ತಿದೆ. ೨೦೦೮ರ ಅವಧಿಯ ಬಿಜೆಪಿ
(ಮೊದಲ ಪುಟದಿಂದ) ಸರಕಾರದಲ್ಲಿ ವೀರಾಜಪೇಟೆ ಶಾಸಕರಾದ ಕೆ.ಜಿ. ಬೋಪಯ್ಯ ಅವರು ಉಪಸಭಾಧ್ಯಕ್ಷರು ನಂತರ ಸಭಾಧ್ಯಕ್ಷರಾಗಿದ್ದರು. ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ಅವರಿಗೆ ಕೊನೆಯ ೧೦ ತಿಂಗಳು ಮಾತ್ರ ಸಚಿವ ಸ್ಥಾನ ನೀಡಲಾಗಿತ್ತು. ಕೆ.ಜಿ. ಬೋಪಯ್ಯ ಅವರು ಉನ್ನತ ಸ್ಥಾನ ಅಲಂಕರಿಸಿದ್ದರಾದರೂ ಆ ಸಂದರ್ಭದಲ್ಲಿ ವಕೀಲರೂ ಆಗಿದ್ದ ಅವರನ್ನು ನೇಮಕ ಮಾಡುವದು ಬಿಜೆಪಿ ಸರಕಾರಕ್ಕೆ ಅದು ಅನಿವಾರ್ಯತೆಯ ಪರಿಸ್ಥಿತಿ ಎಂಬAತಾಗಿತ್ತು ಎಂಬದು ಇಲ್ಲಿ ಉಲ್ಲೇಖನೀಯ.
ಈ ಅವಧಿ ಮುಗಿದ ಬಳಿಕ ಬೋಪಯ್ಯ ಹಾಗೂ ರಂಜನ್ ನಿರಂತರವಾಗಿ ಶಾಸಕರುಗಳಾಗಿ ಆಯ್ಕೆಯಾಗುತ್ತಲೇ ಬಂದಿದ್ದಾರೆ. ಇವರ ಮೂಲಕ ಜಿಲ್ಲೆ ಬಹುತೇಕ ಬಿಜೆಪಿಯ ಗೂಡಾಗಿದೆ. ಆದರೆ ೨೦೦೮ರ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದರೂ ಕೂಡ ಈ ತನಕವೂ ಇವರನ್ನು ಮತ್ತೆ ರಾಜ್ಯ ಸಚಿವ ಸಂಪುಟಕ್ಕೆ ಪರಿಗಣಿಸದಿರುವುದು ಕೊಡಗಿಗೆ ಹಾಗೂ ಕೊಡಗಿನ ಜನತೆಗೆ ನಿಜವಾಗಿಯೂ ಆಗಿರುವ ಅನ್ಯಾಯ ಎಂಬದು ಜನತೆಯ ಅಭಿಪ್ರಾಯ. ಜತೆಗೆ ವಿಪಕ್ಷಗಳು ಕೂಡ ಇದನ್ನು ಒಪ್ಪಿಕೊಳ್ಳುತ್ತವೆ.
ಹುಸಿಯಾದ ಭಾರೀ ನಿರೀಕ್ಷೆ
ಜಿಲ್ಲೆಯಲ್ಲಿ ಅಪ್ಪಚ್ಚುರಂಜನ್ ಐದು ಬಾರಿ ಹಾಗೂ ಕೆ.ಜಿ. ಬೋಪಯ್ಯ ನಾಲ್ಕು ಬಾರಿ ಶಾಸಕರಾದವರು. ಪ್ರಸ್ತುತ ರಾಜ್ಯ ಬಿಜೆಪಿ ಸರಕಾರದಲ್ಲಿ ಒಂದಷ್ಟು ಅನಿರೀಕ್ಷಿತ ಬೆಳವಣಿಗೆಗಳು ನಡೆದಿದ್ದು, ಈ ಬಾರಿಯಾದರೂ ಇವರಿಬ್ಬರಲ್ಲಿ ಯಾರಿಗಾದರೊಬ್ಬರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ಭಾರೀ ಆಶಾಭಾವನೆ ಜಿಲ್ಲೆಯಲ್ಲಿ ಕಂಡು ಬಂದಿತ್ತು. ಆದರೆ ಈ ಸಲವೂ ಕೊಡಗು ಮತ್ತೆ ನಿರ್ಲಕ್ಷö್ಯಕ್ಕೆ ತುತ್ತಾಗಿದೆ.
ಪ್ರಸ್ತುತದ ಸನ್ನಿವೇಶದಲ್ಲಿ ಎಲ್ಲವೂ ಪ್ರಬಲ ಜಾತೀಯ ಆಧಾರದಲ್ಲೇ ನಡೆಯುತ್ತದೆ ಎಂಬದು ಮತ್ತೊಮ್ಮೆ ಸಾಬೀತಾಗಿದೆ. ನೂತನ ಮುಖ್ಯಮಂತ್ರಿಯವರೇ ಪತ್ರಕರ್ತರೊಂದಿಗೆ ಇಂದು ಮಾತನಾಡುತ್ತಾ ಜಾತೀವಾರು ಸ್ಥಾನಗಳ ಕುರಿತು ವಿವರಿಸಿದುದೇ ಇದಕ್ಕೆ ಸಾಕ್ಷಿಯಾಗಿದೆ. ಹೊಸ ಮಂತ್ರಿಮAಡಲ ರಚನೆಯ ಕಸರತ್ತು ಸದ್ಯಕ್ಕೆ ಅಂತಿಮಗೊAಡಿದ್ದು, ಜಿಲ್ಲೆಯ ಹಿರಿಯ ಶಾಸಕರಿಬ್ಬರನ್ನೂ ಕಡೆಗಣಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊಡಗು ಏನೇನೂ ಅಲ್ಲ ಕೇವಲ ಲೆಕ್ಕಕ್ಕುಂಟು... ಆಟಕ್ಕಿಲ್ಲ ಎಂಬದು ರುಜುವಾದಂತಾಗಿದೆ. ನಿಜಕ್ಕೂ ಇದು ಕೊಡಗಿನ ದೌರ್ಭಾಗ್ಯವಲ್ಲವೇ...?