ಚೆಟ್ಟಳ್ಳಿ, ಆ. ೪: ಇತ್ತೀಚೆಗೆ ಸುರಿದ ಭಾರೀ-ಗಾಳಿ ಮಳೆಗೆ ಸೋಮವಾರಪೇಟೆ ತಾಲೂಕಿನ ಕಾಂಡನಕೊಲ್ಲಿ ಹಾಲೇರಿ ಗ್ರಾಮದ ಕಡಂದಾಳು ಎಂಬಲ್ಲಿ ಮನೆಯೊಂದು ಸಂಪೂರ್ಣ ಕುಸಿದು ಹಾನಿ ಯುಂಟಾಗಿದೆ.
ಮನೆಯಲ್ಲಿ ವಡ್ಡಚೆಟ್ಟಿರ ಚೋಂದಕ್ಕಿ ಎಂಬ ವಯಸ್ಸಾದ ವಿಧವೆ ಮಹಿಳೆ ತನ್ನ ಮಗಳೊಂದಿಗೆ ವಾಸವಾಗಿದ್ದರು.
ಮಳೆಯ ತೀವ್ರತೆಗೆ ಹೆದರಿ ಒಂದು ದಿವಸ ಹಿಂದೆ ಮುಕ್ಕೋಡ್ಲುವಿನ ತಮ್ಮ ಬಂಧುಗಳ ಮನೆಗೆ ತೆರಳಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.