*ಗೋಣಿಕೊಪ್ಪ, ಆ. ೩: ಕೊಡಗಿನ ಗಡಿ ಭಾಗಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಜಿಲ್ಲೆಗೆ ಆಗಮಿಸುವವರನ್ನು ನಿರ್ದಾಕ್ಷಿಣ್ಯವಾಗಿ ತಪಾಸಣೆಗೆ ಒಳಪಡಿಸಿದಾಗ ಕೊರೊನಾ ಮೂರನೇ ಅಲೆಯ ಆತಂಕದಿAದ ಪಾರಾಗಬಹುದೆಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಕುಟ್ಟ ಗಡಿಭಾಗಕ್ಕೆ ಭೇಟಿ ನೀಡಿ ಕೇರಳ ಭಾಗದಿಂದ ಪ್ರವೇಶಿಸುವವರ ತಪಾಸಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ತಾವೇ ಸ್ವತಃ ಕೇರಳದಿಂದ ಕೊಡಗಿಗೆ ಸಂಚಾರ ಕೈಗೊಂಡ ವಾಹನಗಳ ತಪಾಸಣೆ ನಡೆಸಿ ನೆಗೆಟಿವ್ ವರದಿಯನ್ನು ಪರಿಶೀಲಿಸಿ ನಂತರ ಮಾತನಾಡಿದರು.

ಕೇರಳ ರಾಜ್ಯದಲ್ಲಿ ಕೊರೊನಾ ಅಲೆ ವ್ಯಾಪಕವಾಗಿ ಹರಡಿಕೊಂಡು ಆತಂಕವನ್ನು ಸೃಷ್ಟಿಸುತ್ತಿದೆ. ಕೊಡಗು ಕೇರಳಕ್ಕೆ ಹೊಂದಿಕೊAಡಿರುವುದರಿAದ ಮತ್ತು ನಾಲ್ಕು ಗಡಿಭಾಗಗಳನ್ನು ಒಳಪಟ್ಟಿರುವ ಕಾರಣದಿಂದ ಕೇರಳಿಗರು ಮತ್ತು ಇತರ ಜಿಲ್ಲೆಯ ಪ್ರವಾಸಿಗರ ಆಗಮನ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಪ್ರಾಮಾಣಿಕ ಮತ್ತು ಶಿಸ್ತು ಬದ್ಧತೆ ಯಿಂದ ತಪಾಸಣೆಯನ್ನು ನಡೆಸಬೇಕು ಎಂದು ಸೂಚಿಸಿದರು.

ಕೇರಳ ರಾಜ್ಯದ ಮೂಲಕ ಪ್ರವೇಶಿಸುವವರು ೭೨ ಗಂಟೆಗಳೊಳಗೆ ಪಡೆದುಕೊಂಡ ಕೋವಿಡ್ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಯನ್ನು ಹೊಂದಿರುವ ಬಗ್ಗೆ ದೃಢ ಪಡಿಸಿಕೊಂಡು

(ಮೊದಲ ಪುಟದಿಂದ) ಕೊಡಗಿಗೆ ಪ್ರವೇಶಿಸಲು ಅನುಮತಿಯನ್ನು ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯನ್ನು ಎರಡು ಡೋಸ್ ಪಡೆದುಕೊಂಡಿದ್ದರೂ ಸಹ ನೆಗೆಟಿವ್ ವರದಿ ನೀಡುವುದು ಕಡ್ಡಾಯ. ಈ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಜಿಲ್ಲೆಯಲ್ಲಿ ಕೊರೊನಾ ಹರಡುವ ಆತಂಕದಿAದ ದೂರ ಉಳಿಯಲು ಸಾಧ್ಯವಿದೆ ಎಂದು ಹೇಳಿದರು.

ನಾಗರಹೊಳೆ ವೀಕ್ಷಣೆಗೆ ಬರುವ ಪ್ರವಾಸಿಗರು ಕಡ್ಡಾಯವಾಗಿ ನೆಗೆಟಿವ್ ವರದಿಗಳನ್ನು ಹೊಂದಿರತಕ್ಕದ್ದು. ಈ ಬಗ್ಗೆ ತಪಾಸಣೆ ನಡೆಸಲು ನಾಗರಹೊಳೆ ವನ್ಯ ಜೀವಿ ವಲಯ ಅರಣ್ಯಾಧಿಕಾರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಆದೇಶಿಸಿದರು. ಕುಟ್ಟ, ಸಿಂಕೋನ ಕಾಲೋನಿಯಲ್ಲಿ ಕಾರ್ಮಿಕರಾಗಿ ಕೇರಳ ರಾಜ್ಯದಿಂದ ಆಗಮಿಸುವವರ ಮೇಲೆ ಗಮನ ಹರಿಸಿ ಕೊರೊನಾ ಪರೀಕ್ಷೆಗೆ ಒಳಪಡಿಸುವಂತೆ ಮತ್ತು ತೋಟದ ಮಾಲೀಕರು ಕೇರಳದಿಂದ ಕಾರ್ಮಿಕರನ್ನು ಕರೆತರುವ ವ್ಯವಸ್ಥೆಯನ್ನು ಕೆಲ ದಿನಗಳ ಮಟ್ಟಿಗೆ ಕ್ರಮಕೈಗೊಳ್ಳುವಂತೆ ಸಲಹೆ ನೀಡಿದರು.

ಕೊಡಗಿಗೆ ಶನಿವಾರ ಮತ್ತು ಭಾನುವಾರದ ದಿನಗಳಲ್ಲಿ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಿದ್ದು, ಈ ಕಾರಣವನ್ನು ಮುಂದಿಟ್ಟು ಮತ್ತು ಕೊಡಗಿನ ಸುರಕ್ಷತೆಯ ದೃಷ್ಟಿಯಿಂದ ವೀಕೆಂಡ್ ಕರ್ಫ್ಯೂ ಜಾರಿ ಮಾಡುವುದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ.

ಕೊಡಗಿನ ಮಾಕುಟ್ಟ, ಕುಟ್ಟ, ಕರಿಕೆ, ಸಂಪಾಜೆ ಗಡಿಪ್ರದೇಶಗಳಲ್ಲಿ ತೀವ್ರ ತಪಾಸಣೆ ನಡೆಸಿ ದಿನದ ೨೪ ಗಂಟೆಗಳಲ್ಲೂ ನಿಗಾವಹಿಸಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದರೆ ಕೊಡಗಿನಲ್ಲಿ ಕೊರೊನಾ ಹರಡು ವುದನ್ನು ನಿಯಂತ್ರಿಸಬಹುದಾಗಿದೆ. ಇದಕ್ಕೆ ಅಧಿಕಾರಿಗಳೊಂದಿಗೆ ಜನರ ಸಹಕಾರವು ಬಹುಮುಖ್ಯ ಎಂದರು.

ಈ ಸಂದರ್ಭ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕೆÀ್ಷ ಚೋಡುಮಾಡ ಶರಿನ್‌ಸುಬ್ಬಯ್ಯ, ಗ್ರಾ.ಪಂ. ಉಪಾಧ್ಯಕ್ಷೆ ದಿವ್ಯಮನೋಜ್, ಸದಸ್ಯರುಗಳಾದ ತೀತಿರ ತೀರ್ಥ, ವೈ. ಕಲಾ, ಮಣಿ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಹೊಟ್ಟೆಂಗಡ ರಮೇಶ್, ಕುಟ್ಟ ಶಕ್ತಿ ಕೇಂದ್ರ ಪ್ರಮುಖ್ ತೀತಿರ ಮಂಜುನಾಥ್, ಕೆ.ಬಾಡಗ ಶಕ್ತಿ ಕೇಂದ್ರ ಪ್ರಮುಖ್ ಪೆಮ್ಮಣಮಾಡ ನವೀನ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮದುದೇವಯ್ಯ, ವೈದ್ಯಾಧಿಕಾರಿ ಡಾ. ಸತೀಶ್, ಕುಟ್ಟ ವೃತ್ತನಿರೀಕ್ಷಕ ಮಂಜಪ್ಪ ಸಿ.ಐ, ಉಪನಿರೀಕ್ಷಕ ಚಂದ್ರಪ್ಪ ಹಾಗೂ ಆರೋಗ್ಯ ಸಿಬ್ಬಂದಿ ಹಾಜರಿದ್ದರು.

ಅಧಿಕಾರಿಗಳ ಸಭೆ

ವೀರಾಜಪೇಟೆ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಹಿನ್ನೆಲೆಯಲ್ಲಿ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಮಂಗಳವಾರ ವೀರಾಜಪೇಟೆ ತಾಲೂಕು ಅಧಿಕಾರಿಗಳ ಸಭೆ ನಡೆಸಿದರು.

ತಾಲೂಕು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಮಾಕುಟ್ಟ ಹಾಗೂ ಕುಟ್ಟ ಚೆಕ್‌ಪೋಸ್ಟ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಚೆಕ್‌ಪೋಸ್ಟ್ನಲ್ಲಿ ಇರುವ ಸಿಬ್ಬಂದಿಗೆ ಸರಿಯಾದ ಮಾಹಿತಿ ನೀಡಿ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯ ಲೋಪ ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು. ಕೇರಳ ರಾಜ್ಯದಿಂದ ಕಾಲ್ನಡಿಗೆಯಲ್ಲಿ ತೋಟ ಕಾರ್ಮಿಕರು ಬರುತ್ತಿದ್ದು ಅವರುಗಳನ್ನು ತಡೆಹಿಡಿಯುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ಮಾತನಾಡಿ ತಾಲೂಕಿನಲ್ಲಿ ಕಳೆದ ೧೦ ದಿನಗಳಿಂದ ೨೨೦ ಪಾಸಿಟಿವ್ ಪ್ರಕರಣ ವರದಿ ಯಾಗಿದೆ. ೮೩೦೦ ಆರ್‌ಟಿಪಿಸಿಆರ್ ಟೆಸ್ಟ್ ನಡೆಸಲಾಗಿದೆ. ಅಮ್ಮತ್ತಿ, ಮಾಲ್ದಾg,ೆ ಚೆನ್ನಯ್ಯನಕೋಟೆ, ಪಾಲಿಬೆಟ್ಟಗಳ ತೋಟ ಕಾರ್ಮಿಕರಲ್ಲಿ ಹೆಚ್ಚಾಗಿ ಸೋಂಕು ಕಂಡು ಬರುತ್ತಿದೆ. ಪ್ರತಿ ಪಂಚಾಯಿತಿ ಮಟ್ಟದಲ್ಲಿ ಪರೀಕ್ಷೆ ನಡೆಸುವುದು ಉತ್ತಮ. ಮಾರುಕಟ್ಟೆ ಪ್ರದೇಶಗಳಲ್ಲಿ ವರ್ತಕರಿಗೆ ೭ ದಿನಗಳಿಗೆ ಆರ್‌ಟಿಪಿಸಿಆರ್ ಟೆಸ್ಟ್ ನಡೆಸುವಂತೆ ಸಲಹೆ ನೀಡಿದರು.

ತಹಶೀಲ್ದಾರ್ ಯೋಗಾನಂದ್ ಮಾತನಾಡಿ ಕೋವಿಡ್ ವಿಚಾರದಲ್ಲಿ ಯಾವುದೇ ನಿರ್ಲಕ್ಷö್ಯ ವಹಿಸಬಾರದು. ಮಾಕುಟ್ಟ ಚೆಕ್‌ಪೊಸ್ಟ್ನಲ್ಲಿ ಹಣ ಪಡೆದುಕೊಂಡು ಬಿಡುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಎಲ್ಲದಕ್ಕೂ ಕಡಿವಾಣ ಹಾಕಲಾಗಿದೆ. ಕುಟ್ಟ ಭಾಗದಲ್ಲಿ ಅತಿ ಹೆಚ್ಚಾಗಿ ಸೋಂಕು ಕಂಡು ಬಂದಿರುವುದರಿAದ ಅಲ್ಲಿನ ಮದ್ಯದ ಅಂಗಡಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಪಟ್ಟಣ ತಾಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಬಿಇಒ ಶ್ರೀಶೈಲಾ ಬೀಳಗಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕುಮಾರ್, ವೃತ್ತ ನಿರೀಕ್ಷಕ ಶ್ರೀಧರ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.