ಸುAಟಿಕೊಪ್ಪ, ಆ. ೨ : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಸುಂಟಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಸೇರಿದಂತೆ ಕಾರ್ಯಕರ್ತರು ಬುಧವಾರ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕನ್ನಡ ವೃತ್ತದಲ್ಲಿ ನೇರೆದ ಬಿಜೆಪಿ ಕಾರ್ಯಕರ್ತರು ಪಕ್ಷ ಹಾಗೂ ನೂತನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಿಗೆ ಜೈಕಾರ ಕೂಗುತ್ತ ಸಂತೋಷಪಟ್ಟರು. ಈ ಸಂದರ್ಭ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ಬಿ.ಕೆ.ಪ್ರಶಾಂತ್, ವಾಸುದೇವ್, ಯುವ ಮೋರ್ಚಾ ಅಧ್ಯಕ್ಷ ವಿಘ್ನೇಶ್, ಪ್ರಮುಖರಾದ ಸುನಿಲ್ ಕುಮಾರ್, ಶಶಿ, ರಾಜ, ವಿನೋದ್ ಸೇರಿದಂತೆ ಇತರರು ಇದ್ದರು.