ಕೂಡಿಗೆ, ಆ. ೨: ಕುಶಾಲನಗರ ತಾಲೂಕು ಕಚೇರಿಯು ಈಗಿನ ನಾಡ ಕಚೇರಿಯ ಸಮೀಪ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
ನಾಡು ಕಚೇರಿಯ ಕಟ್ಟಡದಲ್ಲಿ ಒಂದು ಭಾಗವನ್ನು ನವೀಕರಣ ಮಾಡಿ ಒಂದು ಭಾಗದಲ್ಲಿ ತಾಲೂಕು ತಹಶೀಲ್ದಾರರ ಕಚೇರಿ ಮತ್ತು ಇನ್ನೊಂದು ಭಾಗದಲ್ಲಿ ಶಿರಸ್ತೇದಾರ್, ಎಫ್ಡಿಎ ೨, ಎಸ್ಡಿಎ ೩ ಸೇರಿದಂತೆ ಡಿ ದರ್ಜೆಯ ಒಬ್ಬರು ನೌಕರರ ನೇಮಕಗೊಂಡು ಈಗಾಗಲೇ ಕುಶಾಲನಗರ ತಾಲೂಕು ವ್ಯಾಪ್ತಿಯ ಗ್ರಾಮಗಳ ಹೊಸ ಅರ್ಜಿಗಳನ್ನು ಸ್ವೀಕರಿಸುವ ಕಾರ್ಯಗಳು ಪ್ರಾರಂಭವಾಗಿವೆ. ಮುಂದಿನ ೧೫ ದಿನಗಳ ನಂತರ ಸೋಮವಾರಪೇಟೆಯಲ್ಲಿರುವ ಕುಶಾಲನಗರ ತಾಲೂಕಿನ ಎಲ್ಲಾ ಕಡತಗಳನ್ನು ತರುವುದರ ಮೂಲಕ ಮುಂದಿನ ತಾಲೂಕು ಕಚೇರಿಯ ಎಲ್ಲಾ ವ್ಯವಸ್ಥೆ ಕುಶಾಲನಗರದಲ್ಲಿ ನಡೆಯಲ್ಲಿದೆ ಎಂದು ಶಿರಸ್ತೇದಾರ್ ವಿನು ತಿಳಿಸಿದ್ದಾರೆ.
-ಕೆ.ಕೆ.ಎನ್.