ಮಡಿಕೇರಿ, ಆ. ೨: ಯೋಧನ ವಾಹನಕ್ಕೆ ಅಪಘಾತ ಘಟನೆಯಲ್ಲಿ ಆದ ಗಲಾಟೆಯನ್ನು ಭಾರತೀಯ ಜನತಾ ಪಕ್ಷ ಹಾಗೂ ಹಿಂದೂಪರ ಸಂಘಟನೆಗಳು ರಾಜಕಾರಣಗೊಳಿಸಿ, ಕೊಡಗು ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸುತ್ತಿವೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಆರೋಪಿಸಿದ್ದು, ಉಭಯ ಕುಟುಂಬದವರನ್ನು ಕರೆಸಿ ಸಂಧಾನ ಮಾಡುವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಯೋಧ ಹಾಗೂ ಅವರ ಕುಟುಂಬದ ಮೇಲೆ ಆಗಿರುವ ಹಲ್ಲೆ ಪ್ರಕರಣಕ್ಕೆ ಬಿಜೆಪಿ ಕೋಮು ಬಣ್ಣ ಬಳೆದು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಇದರಿಂದ ಶಾಂತಿಪ್ರಿಯ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸಿ ಉದ್ವಿಗ್ನತೆಯನ್ನು ಉಂಟು ಮಾಡುವ ಹುನ್ನಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಜಾತ್ಯತೀತ ತತ್ವವನ್ನು ಪ್ರತಿಪಾದಿಸುತ್ತದೆ. ಅದರಂತೆ ಉಭಯ ಕುಟುಂಬಗಳನ್ನು ಒಂದುಗೂಡಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸಲು ಕಾಂಗ್ರೆಸ್ ಪ್ರಯತ್ನಿಸುತ್ತದೆ. ಈಗಾಗಲೇ ಎರಡು ಕುಟುಂಬಗಳೊAದಿಗೆ ಮಾತನಾಡಿದ್ದು, ಅವರು ಇದೊಂದು ಆಕಸ್ಮಿಕ ಘಟನೆ ಎಂದು ತÀಮ್ಮೊಂದಿಗೆ ಹೇಳಿಕೊಂಡಿದ್ದಾರೆ. ಘಟನೆ ವೇಳೆ ಚಿನ್ನಾಭರಣ ಕಳವಾಗಿರುವುದು ಸುಳ್ಳು. ವಾಗ್ವಾದದ ಸಂದರ್ಭ ಚಿನ್ನ ಬಿದ್ದುಹೋಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ರಫೀಕ್ ಹಾಗೂ ಇಸಾಕ್ ಕುಟುಂಬ ಕಳ್ಳತನ ಮಾಡಿ ಬದುಕಬೇಕಾದ ಸ್ಥಿತಿಯಲ್ಲಿಲ್ಲ. ಅವರು ಆರ್ಥಿಕವಾಗಿ ಸದೃಢರಾಗಿ ದ್ದಾರೆ. ದರೋಡೆ ಪ್ರಕರಣ ದಾಖಲಿಸಿ ಪ್ರಕರಣವನ್ನು ತಿರುಚುವ ಪ್ರಯತ್ನ ನಿಜಕ್ಕೂ ಖಂಡನೀಯ ಎಂದರು.
ಸಂಸದ ಪ್ರತಾಪ್ ಸಿಂಹ ಅವರು ಕೊಡಗಿನ ಸಮಸ್ಯೆಯ ಬಗ್ಗೆ ಚಿಂತಿಸುತ್ತಿಲ್ಲ. ಬದಲಾಗಿ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು. ಅದಲ್ಲದೆ ಈ ಘಟನೆ ಪೂರ್ವನಿಯೋಜಿತ ಎಂಬ ಹೇಳಿಕೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ನೀಡಿರುವುದು ಅವರೊಂದು ಕೋಮುಗಲಭೆಯ ಪ್ರೇರಕ ಎಂಬುದನ್ನು ಸಾಬೀತು ಪಡಿಸಿದೆ ಎಂದು ಕಿಡಿಕಾರಿದರು.
ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಅಲ್ಪಸಂಖ್ಯಾತರು ವಾಗ್ವಾದ ನಡೆಸಿದ ವಿಚಾರ ಪಕ್ಷದ ವೇದಿಕೆಯಲ್ಲಿ ಸರಿಯಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ, ಅಪಘಾತ ಪ್ರಕರಣಕ್ಕೆ ಸಂಬAಧಿಸಿದAತೆ ಸಾಮಾಜಿಕ ಜಾಲತಾಣದಲ್ಲಿ ಹಳೆಯ ಸುದ್ದಿಗೋಷ್ಠಿಯ ಚಿತ್ರವನ್ನು ಬಳಸಿ ಸಾಮರಸ್ಯ ಕದಡುವ ಸಂದೇಶಗಳು ಹರಿದಾಡುತ್ತಿದ್ದು, ಇದು ಸುಳ್ಳಾಗಿವೆೆ. ಈ ಬಗ್ಗೆ ಕಾನೂನು ಕ್ರಮಕೈಗೊಳ್ಳ ಲಾಗುವುದು ಎಂದು ತಿಳಿಸಿದ ಅವರು, ಘಟನೆ ನಡೆದ ದಿನದಂದು ತಾನು ಯೋಧನ ಕುಟುಂಬವನ್ನು ಮಾತನಾಡಿಸಿದ್ದೆ ಆ ವಿಚಾರದಲ್ಲಿ ತೇಜೋವಧೆ ಮಾಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಧರ್ಮದ ಹೆಸರಿನಲ್ಲಿ ರಾಜಕಾರಣ ಬೇಡ ಎಂದು ತಿಳಿಸಿದರು. ಪಕ್ಷದ ಮುಖಂಡ ಮುನೀರ್ ಅಹ್ಮದ್ ಮಾತನಾಡಿ, ಪ್ರಕರಣ ಸಂಬAಧ ಪೊಲೀಸರ ಮೇಲೆ ಒತ್ತಡ ಇದೆ. ರೆಕ್ಕೆಪುಕ್ಕ ಕಟ್ಟಿ ಜಿಲ್ಲೆಯಲ್ಲಿ ಅಶಾಂತಿ ಮೂಡಿಸುವ ಯತ್ನ ವಿಷಾದನೀಯ. ರೌಡಿಶೀಟರ್ ಪಟ್ಟಿಗೆ ಸೇರಿಸುವ ಕ್ರಮವನ್ನು ಖಂಡಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಮಡಿಕೇರಿ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಂಸ, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಸೂರಜ್ ಹೊಸೂರು ಇದ್ದರು.