ಚೆಯ್ಯಂಡಾಣೆ, ಆ.೨: ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮಿಯಾಲ್, ದೇವಣಗೇರಿ ಗ್ರಾಮದ ಕೆ.ಎ.ಹಂಝ, ಪಾಲೇಕಂಡ ಕುಮಾರ, ರವಿ, ಮೂಕೊಂಡ ಉಮೇಶ್, ನಿಜಾಮುದ್ದಿನ್ ಅವರ ತೋಟಕ್ಕೆ ಕಾಡಾನೆ ದಾಳಿ ಮಾಡಿದ್ದು ಕಾಫಿ, ಬಾಳೆ, ಅಡಿಕೆ, ತೆಂಗಿನ ಮರಕ್ಕೆ ಹಾನಿ ಮಾಡಿವೆ. ಸುಮಾರು ೬೦ ರಷ್ಟು ಕಾಫಿ ಗಿಡವನ್ನು ಕಾಡಾನೆ ತುಳಿದು ನಷ್ಟ ಪಡಿಸಿದ್ದು, ಅರಣ್ಯ ಇಲಾಖೆ ಕೂಡಲೇ ಸ್ವಂದಿಸಿ ನಷ್ಟ ಅನುಭವಿಸಿದ ಗ್ರಾಮಸ್ಥರಿಗೆ ಕೂಡಲೇ ಪರಿಹಾರ ಒದಗಿಸಿ ಗ್ರಾಮಕ್ಕೆ ಕಾಡಾನೆ ನುಸುಳದ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.