ಮಡಿಕೇರಿ, ಜು.೩೧: ಕರ್ನಾಟಕ ಸರ್ಕಾರದ ಆದೇಶದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಇ-ಕೈವೈಸಿ (ಜೀವ ಮಾಪಕ ಮರು ದೃಡೀಕರಣ) ಕಾರ್ಯವನ್ನು ಮತ್ತೆ ಪ್ರಾರಂಭಿಸಲಾಗಿದ್ದು, ಈ ಹಿಂದೆ ಇ-ಕೈವೈಸಿ ಮಾಡಿಸಿರದ ಅಂತ್ಯೋದಯ ಅನ್ನಯೋಜನೆ, ಬಿಪಿಎಲ್ ಮತ್ತು ಆದ್ಯತೇತರ ಪಡಿತರ ಚೀಟಿಗಳಲ್ಲಿ (ಎಪಿಎಲ್) ಸೇರ್ಪಡೆಗೊಂಡಿರುವ ಸದಸ್ಯರುಗಳು ಕೂಡಲೆ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೈವೈಸಿಯನ್ನು ಮಾಡಿಸಲು ಕೋರಿದೆ.
ಆಗಸ್ಟ್ ೧ ರಿಂದ ೧೦ ವರೆಗೆ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿ ಗಳಿಲ್ಲಿ ಇ-ಕೈವೈಸಿ ಮಾಡಿಸಬೇಕು. ಎಎವೈ, ಆದ್ಯತಾ, ಆದ್ಯತೆತರ ಪಡಿತರ ಚೀಟಿಗಳಲ್ಲಿ ಸೇರ್ಪಡೆ ಗೊಂಡಿರುವ
(ಮೊದಲ ಪುಟದಿಂದ) ಎಲ್ಲಾ ಸದಸ್ಯರು ಕಡ್ಡಾಯವಾಗಿ ಇ-ಕೈವೈಸಿ ಮಾಡಿಸುವುದು. ತಪ್ಪಿದ್ದಲ್ಲಿ ಮಾಡಿಸದ ಸದಸ್ಯರುಗಳಿಗೆ ಮುಂದಿನ ದಿನಗಳಲ್ಲಿ ಪಡಿತರ ಹಂಚಿಕೆ ಲಭ್ಯವಾಗುವುದಿಲ್ಲ.
ಇ-ಕೈವೈಸಿ (ಜೀವ ಮಾಪಕ ಮರು ದೃಢೀಕರಣ) ಕಾರ್ಯವನ್ನು ಕೇವಲ ಸಂಬAಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿಯೇ ಮಾಡಿಸಬೇಕು. ಬೆರಳಚ್ಚು ನೀಡಿ ಇ-ಕೈವೈಸಿ (ಜೀವ ಮಾಪಕ ಮರು ದೃಡೀಕರಣ) ಮಾಡಿಸಲು ಯಾವುದೇ ಶುಲ್ಕ ಇರುವುದಿಲ್ಲ. ಪಡಿತರ ಚೀಟಿದಾರರು ಯಾವುದೇ ಹಣ ನೀಡುವಂತಿಲ್ಲ. ಹಣ ತೆಗೆದುಕೊಂಡಲ್ಲಿ ತಾಲೂಕು ಆಹಾರ ಕಚೇರಿ/ ಉಪ ನಿರ್ದೇಶಕರ ಕಚೇರಿಗೆ ದೂರು ನೀಡಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಗೌರವ್ ಕುಮಾರ್ ಅವರು ಕೋರಿದ್ದಾರೆ.