ಮಡಿಕೇರಿ,ಜು.೩೧: ಕೊಡಗು ಜಿಲ್ಲಾ ಜನತಾದಳ(ಜಾತ್ಯತೀತ) ಪಕ್ಷಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ವಿವರ ನೀಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರು ಪದಾಧಿಕಾರಿಗಳನ್ನು ನೇಮಕ ಮಾಡಿದ್ದು, ಕಾರ್ಯಾಧ್ಯಕ್ಷರಾಗಿ ಮತೀನ್ ಹಾಗೂ ಬಿ.ಪಿ.ಪೂಣಚ್ಚ ಅವರುಗಳನ್ನು ನೇಮಿಸಲಾಗಿದೆ. ಉಪಾಧ್ಯಕ್ಷರುಗಳಾಗಿ ಶಿವದಾಸ್, ಪಾಣತ್ತಲೆ ವಿಶ್ವನಾಥ್, ಮೊಹಿನುದ್ದೀನ್, ಜೆ.ಸಿ.ತಮ್ಮಯ್ಯ, ಎಂ.ವೈ.ಯೂಸುಫ್, ಪ್ರಧಾನ ಕಾರ್ಯದರ್ಶಿಗಳಾಗಿ ಆದಿಲ್ ಪಾಷ, ಬಲ್ಲಚಂಡ ಗೌತಂ, ಬೆಂಬಳೂರು ದೇವಪ್ಪಗೌಡ, ಮುಳ್ಳುಸೋಗೆ ರಾಜೇಶ್, ಸೂದನ ಈರಪ್ಪ, ಸಂಘಟನಾ ಕಾರ್ಯದರ್ಶಿಗಳಾಗಿ ಪಾಪಣ್ಣ, ಪಂದ್ಯAಡ ರವಿ, ಮಹಮ್ಮದ್ ಹನೀಫ್, ಖಜಾಂಚಿಯಾಗಿ ಡೆನ್ನಿ ಬರೋಸ್, ಕಾರ್ಯದರ್ಶಿಗಳಾಗಿ ಎನ್.ಸಿ.ಸುನಿಲ್, ಇಬ್ರಾಹಿಂ, ಕೋಟಿ ರಾಮಣ್ಣ, ಎ.ಬಿ.ಶಾಂತಕುಮಾರ್, ಕರೀಂ, ಎಚ್.ಡಿ.ಪ್ರೇಮ್‌ಕುಮಾರ್, ಪುಷ್ಪ ನಾಗರಾಜ್, ಡಿ.ಎಸ್.ಚಂಗಪ್ಪ, ಜಯಣ್ಣ ಹೆಚ್.ಬಿ. ಅವರುಗಳನ್ನು ನೇಮಕ ಮಾಡಲಾಗಿದೆ. ಇದರೊಂದಿಗೆ ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ಬಿದ್ರುಪಣೆ ನಂದ, ಸೋಮವಾರಪೇಟೆ ಅಧ್ಯಕ್ಷರಾಗಿ ಸಿ.ಎಸ್.ನಾಗರಾಜ್, ಕುಶಾಲನಗರ ಅಧ್ಯಕ್ಷರಾಗಿ ಪಡ್ಡಂಬೈಲು ರವಿ, ವೀರಾಜಪೇಟೆ ಅಧ್ಯಕ್ಷರಾಗಿ ಪಿ.ಎ.ಮಂಜುನಾಥ್ ಅವರುಗಳನ್ನು ನೇಮಕ ಮಾಡಲಾಗಿದೆ. ಪೊನ್ನಂಪೇಟೆ ತಾಲೂಕಿಗೆ ಸಂಬAಧಿಸಿದAತೆ ಅಲ್ಲಿ ಸಭೆ ನಡೆಸಿ, ಚರ್ಚಿಸಿ ನೇಮಕ ಮಾಡಲಾಗುವದೆಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಹೋಬಳಿ ಹಾಗೂ ಬೂತ್ ಮಟ್ಟದ ಸಮಿತಿಗಳನ್ನು ರಚನೆ ಮಾಡಲಾಗು ವದು, ಮುಂದಿನ ಜಿ.ಪಂ.ಹಾಗೂ ತಾ.ಪಂ. ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವದರೊಂದಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವದು, ಈ ಸಂಬAಧ ಮುಂದಿನ ಅಕ್ಟೋಬರ್ ಕೊನೆಯ ವಾರದಲ್ಲಿ ಪಕ್ಷದ ರಾಷ್ಟಿçÃಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ, ಕಾರ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರುಗಳು ಜಿಲ್ಲೆಗೆ ಭೇಟಿ ನೀಡಲಿದ್ದಾರೆಂದು ಹೇಳಿದರು.

ಹಲ್ಲೆ ಪ್ರಕರಣ : ತಿಳಿಗೊಳಿಸಲು ಮನವಿ

ಮೊನ್ನೆ ನಡೆದ ಯೋಧನ ಮೇಲಿನ ಹಲ್ಲೆ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಂಡು ದೊಡ್ಡದು ಮಾಡದೆ ಎಲ್ಲರೂ ಒಂದಾಗಿ ಸರಿಪಡಿಸಿಕೊಂಡು ಇತಿಶ್ರೀ ಹಾಡುವಂತೆ ಗಣೇಶ್ ಮನವಿ ಮಾಡಿಕೊಂಡರು. ಅಪಘಾತ ವಾಗಿರುವದು ಒಂದು ಆಕಸ್ಮಿಕ, ನಂತರದಲ್ಲಿ ಹಲ್ಲೆ ನಡೆದಿದ್ದು, ಈ ಸಂಬAಧ ಉಭಯ ಕಡೆಗಳಿಂದಲೂ ದೂರು ದಾಖಲಾಗಿದ್ದು, ಮೊಕದ್ದಮೆ ಕೂಡ ದಾಖಲಾಗಿದೆ. ಐವರನ್ನು ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದೀಗ ಪ್ರಕರಣ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯ ತೀರ್ಪು ನೀಡಲಿದೆ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗಲೇಬೇಕು. ಆದರೆ, ಬಿಜೆಪಿ ಪಕ್ಷವು ಇದನ್ನು ತನ್ನ ರಾಜಕೀಯ ದಾಳವಾಗಿ ಬಳಸಿಕೊಳ್ಳು ತ್ತಿದ್ದು, ಮುಂದಿನ ಚುನಾವಣೆಯ ಅಸ್ತçವನ್ನಾಗಿ ಬಳಸಿಕೊಳ್ಳುತ್ತಿದೆ ಆರೋಪಿಸಿದರು.

ನಿನ್ನೆಯ ಪ್ರತಿಭಟನೆ ಸಂದರ್ಭ ಅನುಮತಿ ಪಡೆದುಕೊಳ್ಳದೆ ರಸ್ತೆ ತಡೆ ಮಾಡಲಾಗಿದೆ. ನಾಲ್ಕು ಗಂಟೆಗಳ ಕಾಲ ರಸ್ತೆ ತಡೆಯಿಂದಾಗಿ ಸಾಕಷ್ಟು ಬಡ ಮಂದಿಗೆ, ಅನಾರೋಗ್ಯ ಕ್ಕೀಡಾಗಿದ್ದ ವರಿಗೆ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಏನು ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನಿಸಿದರು. ಯೋಧರ ಮೇಲೆ ನಮಗೂ ಗೌರವವಿದೆ, ಆದರೆ ಪ್ರಕರಣವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಬಾರದು, ಇದನ್ನು ಇಲ್ಲಿಗೆ ಕೈಬಿಟ್ಟು ಎಲ್ಲರೂ ಒಂದಾಗಿ ಬದುಕಲು ದಾರಿ ಕಂಡುಕೊಳ್ಳುವAತಾಗಬೇಕೆAದು ಮನವಿ ಮಾಡಿದರು.ಗೋಷ್ಠಿಯಲ್ಲಿ ಪಕ್ಷದ ಉಪಾಧ್ಯಕ್ಷ ಪಾಣತ್ತಲೆ ವಿಶ್ವನಾಥ್, ಯೂಸುಪ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸಿ.ಎಸ್.ನಾಗರಾಜ್, ಮಡಿಕೇರಿ ತಾಲೂಕು ಅಧ್ಯಕ್ಷ ಬಿದ್ರುಪಣೆ ನಂದ, ಕುಶಾಲನಗರ ಅಧ್ಯಕ್ಷ ಪಡ್ಡಂಬೈಲು ರವಿ ಇದ್ದರು.