ಮಡಿಕೇರಿ, ಜು. ೩೦: ಮಡಿಕೇರಿ ಇನ್ನರ್ ವೀಲ್ ಅಧ್ಯಕ್ಷೆಯಾಗಿ ಶಫಾಲಿ ರೈ, ಕಾರ್ಯದರ್ಶಿಯಾಗಿ ಶಮ್ಮಿ ಪ್ರಭು ಅಧಿಕಾರ ಸ್ವೀಕರಿಸಿದರು.
ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಸರಳ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷೆಯಾಗಿ ಶಫಾಲಿ ರೈ ಕಾರ್ಯದರ್ಶಿಯಾಗಿ ಶಮ್ಮಿ ಪ್ರಭು ಅವರಿಗೆ ಪದಗ್ರಹಣ ಅಧಿಕಾರಿ ಪೂರ್ಣಿಮಾ ರವಿ ಪ್ರತಿಜ್ಞಾವಿಧಿ ಬೋಧಿಸಿದರು. ಮಡಿಕೇರಿ ಇನ್ನರ್ವೀಲ್ನಿಂದ ಈ ವರ್ಷದಲ್ಲಿ ಸಾಕಷ್ಟು ಕಾರ್ಯಯೋಜನೆ ಆಯೋಜಿಸ ಲಾಗಿದೆ. ಆರೋಗ್ಯ, ಶಿಕ್ಷಣ, ಪರಿಸರ ಮತ್ತಿತರ ರಂಗಗಳಲ್ಲಿ ಇನ್ನರ್ ವೀಲ್ ಕೇಂದ್ರೀಕೃತ ಯೋಜನೆ ಹಮ್ಮಿಕೊಳ್ಳಲಿದೆ, ಇನ್ನರ್ ವೀಲ್ ಅಂರ್ರಾಷ್ಟಿçÃಯ ಅಧ್ಯಕ್ಷೆಯ ಧ್ಯೇಯದಂತೆ ಕಾರ್ಯನಿರ್ವಹಿಸುವೆ ಎಂದು ನೂತನ ಅಧ್ಯಕ್ಷೆ ಶಫಾಲಿ ರೈ ಹೇಳಿದರು.
ಇನ್ನರ್ ವೀಲ್ ವಾರ್ತಾ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಮಡಿಕೇರಿ ರೋಟರಿ ಅಧ್ಯಕ್ಷ ನಡಿಕೇರಿ ಯಂಡ ಅಚ್ಚಯ್ಯ, ಲಾಕ್ಡೌನ್ ಅನೇಕರಿಗೆ ಸಮಸ್ಯೆಯಾಗಿದೆ. ಹೀಗಿದ್ದರೂ ಸಾಮಾಜಿಕ ಸೇವಾ ಸಂಸ್ಥೆಗಳು ಜನೋಪಯೋಗಿ ಕಾರ್ಯಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಡಾ. ಜಯಲಕ್ಷಿö್ಮ ಪಾಟ್ಕರ್, ನಿರ್ಗಮಿತ ಅಧ್ಯಕ್ಷೆ ದಿವ್ಯ ಮುತ್ತಣ್ಣ, ಶ್ವೇತಾ, ವೇದಿಕೆಯಲ್ಲಿದ್ದರು.
ನೂತನ ಉಪಾಧ್ಯಕ್ಷೆಯಾಗಿ ಡಾ. ರೇಣುಕಾ, ಜಂಟಿಕಾರ್ಯದರ್ಶಿ ಪವಿತ್ರನೆವಿನ್, ಖಚಾಂಚಿಯಾಗಿ ಪ್ರಿಯಾಪ್ರಶಾಂತ್, ವಾರ್ತಾ ಸಂಚಿಕೆ ಸಂಪಾದಕಿಯಾಗಿ ರೂಪಾಸುಮಂತ್, ಐಎಸ್ಓ ಯೋಜನಾ ನಿರ್ದೇಶಕಿಯಾಗಿ ಲತಾರಾಜೇಶ್, ಯೋಜನಾ ನಿರ್ದೇಶಕಿಯಾಗಿ ನಮಿತಾ ರೈ ನೇಮಕಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮೇಕೇರಿಯ ಆಶಾಕಾರ್ಯಕರ್ತೆ ಮಮತಾ ಅವರನ್ನು ಸನ್ಮಾನಿಸಿ ಅವರ ಸೇವಾ ಕಾರ್ಯವನ್ನು ಗೌರವಿಸಲಾಯಿತು.
ಅಂತೆಯೇ ವೈದ್ಯಕೀಯ ರಂಗದ ಸೇವೆಗಾಗಿ ಇನ್ನರ್ ವೀಲ್ ಸದಸ್ಯೆಯರಾದ ಡಾ. ಶುಭಾ, ಡಾ. ಜಯಲಕ್ಷಿö್ಮ ಪಾಟ್ಕರ್, ಡಾ. ರೇಣುಕಾ ಸುಧಾಕರ್ ಅವರನ್ನು ಸನ್ಮಾನಿಸಲಾಯಿತು.