ಮಡಿಕೇರಿ, ಜು. ೨೯: ನಗರದ ಜನರಲ್ ತಿಮ್ಮಯ್ಯ ರಸ್ತೆಯ ಶಾಂತಿ ಚರ್ಚ್ ಬಳಿಯಲ್ಲಿ ಪಾದಚಾರಿಗಳು ಸಂಚರಿಸುವ ಮಾರ್ಗ ಸಂಪೂರ್ಣ ಕೆಸರುಮಯವಾಗಿದ್ದು, ಸೂಕ್ತ ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.

ನಗರಸಭೆಗೆ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿರುವ ಸ್ಥಳೀಯರು, ರಸ್ತೆ ಕಾಮಗಾರಿ ಸಂದರ್ಭ ಮಣ್ಣನ್ನು ರಸ್ತೆ ಬದಿಗೆ ಸುರಿದ ಪರಿಣಾಮ ಮಳೆಗಾಲದಲ್ಲಿ ರಸ್ತೆಯಲ್ಲಿ ಸಂಚರಿಸಲಾಗದೆ ಕೆಸರುಗದ್ದೆಯಂತೆ ಪರಿವರ್ತನೆಯಾಗಿದೆ. ಜೆ.ಸಿ.ಬಿ. ಕ್ರೇನ್, ಲಾರಿಯಂತರ ಭಾರೀ ವಾಹನ ಸಂಚರಿಸಿದ ಹಿನ್ನೆಲೆ ರಸ್ತೆ ಮತ್ತಷ್ಟು ಹಾಳಾಗಿದೆ. ಅದಲ್ಲದೆ ರಾತ್ರಿ ಇದೇ ರಸ್ತೆಯಲ್ಲಿ ಭಾರಿ ವಾಹನಗಳು ನಿಲುಗಡೆಯಾಗುವುದರಿಂದ ಸಮಸ್ಯೆಯಾಗಿವೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದು, ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆ ಮಾಡದಂತೆ ನಾಮಫಲಕಗಳನ್ನು ಅಳವಡಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.