ವೀರಾಜಪೇಟೆ, ಜು. ೩೦: ಮಡಿಕೇರಿಯ ಬೋಯಿಕೇರಿಯಲ್ಲಿ ನಡೆದ ವಾಹನ ಡಿಕ್ಕಿ ಆಕಸ್ಮಿಕ, ದುರುದ್ದೇಶದಿಂದ ಕೂಡಿಲ್ಲ. ಇದಕ್ಕೆ ಕೆಲವು ಸಂಘಟನೆಗಳು, ಬಿಜೆಪಿ ರಾಜಕೀಯ ಬಣ್ಣ ಹಚ್ಚಿ ಪ್ರತಿಭಟನೆಗೆ ಇಳಿದಿರುವುದು ಸರಿಯಲ್ಲ. ಪೊಲೀಸರು ಎರಡು ಗುಂಪುಗಳ ನಡುವೆ ಪರಸ್ಪರ ಹಲ್ಲೆ ನಡೆದಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಇದಕ್ಕೆ ಕೆಲವು ಸಂಘಟನೆಗಳು, ಬಿಜೆಪಿ ರಾಜಕೀಯ ಬಣ್ಣ ಹಚ್ಚಿ ಪ್ರತಿಭಟನೆಗೆ ಇಳಿದಿರುವುದು ಸರಿಯಲ್ಲ ಎಂದು ಜನತಾ ದಳ ಪಕ್ಷದ ತಾಲೂಕು ಅಧ್ಯಕ್ಷ ಪಿ.ಎ. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.
ವೀರಾಜಪೇಟೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಕಸ್ಮಿಕ ವಾಹನ ಅಪಘಾತವನ್ನು ಮುಂದಿಟ್ಟುಕೊAಡು ಶಾಂತಿ ನೆಮ್ಮದಿಯ ವಾತಾವರಣದಲ್ಲಿದ್ದ ಕೊಡಗಿನಲ್ಲಿ ಅನಾವಶ್ಯಕವಾಗಿ ಅಶಾಂತಿ ಮೂಡಿಸುವುದು ಸರಿಯಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂವಿಧಾನದ ಅಡಿಯಲ್ಲಿ ಬರುವ ಕಾನೂನು ಚೌಕಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವುದಿಲ್ಲವೇ, ಸರಕಾರ ಹಾಗೂ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇಲ್ಲದಂತೆ ವರ್ತಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಗೋಷ್ಠಿಯಲ್ಲಿ ಪಕ್ಷದ ನಗರ ಸಮಿತಿ ಅಧ್ಯಕ್ಷ ಯೋಗೀಶ್ ನಾಯ್ಡು, ಮುಖಂಡರುಗಳಾದ ಆಯೂಬ್ ಹಾಗೂ ಗಫೂರ್ ಹಾಗೂ ಇತರರು ಹಾಜರಿದ್ದರು.