ಮಡಿಕೇರಿ, ಜು. ೨೯: ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಬೆಳೆಗಾರರು ತಮ್ಮ ಕೃಷಿ ಚಟುವಟಿಕೆಗಳಿಗೆ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ವಾಣಿಜ್ಯ ಬ್ಯಾಂಕ್‌ಗಳಿAದ ಸಾಲ ಪಡೆದಿರುತ್ತಾರೆ. ಈ ಸಾಲವನ್ನು ಮರುಪಾವತಿ ಮಾಡಿದ ಬಳಿಕ ಸಾಲದ ಕುರಿತಾಗಿ ಆರ್.ಟಿ.ಸಿ.ಯಲ್ಲಿ ಮಾಡಿರುವ ಸಾಲದ ದಾಖಲೆಯನ್ನು ತಿದ್ದುಪಡಿ ಮಾಡುವಂತೆ ಹಾಗೂ ಇದಕ್ಕೆ ಮತ್ತೆ ಸಾಕ್ಷಿದಾರರನ್ನು ಕರೆತರುವಂತೆ ಒತ್ತಾಯ ಮಾಡುವುದನ್ನು ಕೈಬಿಡುವಂತೆ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ. ಈ ಕುರಿತಾಗಿ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಹಾಗೂ ಪದಾಧಿಕಾರಿಗಳು ಒತ್ತಾಯಿಸಿದ್ದು,

ಸಾಲ ಮರುಪಾವತಿ ಬಳಿಕ ಆರ್.ಟಿ.ಸಿ.ಯಲ್ಲಿ ತಿದ್ದುಪಡಿಗೆ ಮನವಿ

(ಮೊದಲ ಪುಟದಿಂದ) ಪೊನ್ನಂಪೇಟೆ ಉಪ ನೋಂದಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ಸಾಲವನ್ನು ಪಡೆಯುವಾಗ ಮರ‍್ಟ್ಗೇಜ್ ಮಾಡಿಸಲು ಉಪನೋಂದಣಿ ಅಧಿಕಾರಿಯವರ ಕಚೇರಿಯಲ್ಲಿ ಎರಡು ಜನರ ಸಾಕ್ಷಿಯನ್ನು ಪಡೆಯುತ್ತಾರೆ. ಸಾಲ ಮರುಪಾವತಿಯಾದ ನಂತರ ಯಾವ ಬ್ಯಾಂಕ್‌ನಿAದ ಸಾಲ ಪಡೆದಿರುತ್ತಾರೋ ಅವರು ತೀರುವಳಿ ಪತ್ರವನ್ನು ಕೊಡುತ್ತಾರೆ. ಅದನ್ನು ತಂದು ಉಪನೋಂದಣಿ ಅಧಿಕಾರಿಯವರಿಗೆ ಕೊಟ್ಟರೆ ಕಾನೂನಾತ್ಮಕವಾಗಿ ಸಂಬAಧಪಟ್ಟ ಆರ್.ಟಿ.ಸಿ.ಯಿಂದ ಸಾಲವನ್ನು ರದ್ದು ಮಾಡಬೇಕಾಗುತ್ತದೆ. ಆದರೆ ಸಾಲವನ್ನು ಮುಗಿಸಿ ಬ್ಯಾಂಕ್‌ನಿAದ ತೀರುವಳಿ ಪತ್ರವನ್ನು ತಂದುಕೊಟ್ಟರೂ ಉಪನೋಂದಣಾಧಿಕಾರಿಯವರು ಪುನಃ ಎರಡು ಸಾಕ್ಷಿಯನ್ನು ಕೇಳುತ್ತಾರೆ. ಬ್ಯಾಂಕ್‌ನಿAದ ತೀರುವಳಿ ಪತ್ರ ಸಿಕ್ಕಿದ ಮೇಲೆ ಪುನಃ ಎರಡು ಜನ ಸಾಕ್ಷಿಯವರನ್ನು ಒದಗಿಸುವ ಅವಶ್ಯಕತೆ ಇರುವುದಿಲ್ಲ. ಆದುದರಿಂದ ಇನ್ನು ಮುಂದೆ ಉಪನೋಂದಣಿ ಕಚೇರಿಯಲ್ಲಿ ಆರ್.ಟಿ.ಸಿ.ಯಿಂದ ಸಾಲವನ್ನು ರದ್ದು ಮಾಡಲು ಎರಡು ಸಾಕ್ಷಿಯನ್ನು ಕೇಳಬಾರದೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.