ಮಡಿಕೇರಿ, ಜು. ೩೦: ಕಳೆದ ತಾ. ೨೫ರಂದು ರಾತ್ರಿ ಮಡಿಕೇರಿ ಹೊರವಲಯದ ಬೋಯಿಕೇರಿ ಬಳಿ ಕಾರು ಅಪಘಾತವಾದ ಸಂದರ್ಭ ಸೇನೆಯಲ್ಲಿ ಸೇವೆಯಲ್ಲಿರುವ ಯೋಧ ಅಶೋಕ್ಕುಮಾರ್ ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಕರಣದ ಮರು ತನಿಖೆ ನಡೆಸಿ, ಭಾಗಿಯಾಗಿರುವ ಎಲ್ಲ ೨೦ಕ್ಕೂ ಅಧಿಕ ಮಂದಿ ಆರೋಪಿಗಳನ್ನು ಬಂಧಿಸಿ ಆರೋಪಿಗಳ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಮಾಜಿ ಸೈನಿಕರು ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು. ಮುಂದಿನ ಒಂದು ವಾರದೊಳಗಡೆ ಕ್ರಮ ಕೈಗೊಳ್ಳುವಂತೆ ಗಡುವು ನೀಡಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಮಾಜಿ ಸೈನಿಕರು, ಹಿಂದೂ ಜಾಗರಣಾ ವೇದಿಕೆ, ಕೊಡವ ಹಾಗೂ ಗೌಡ ಸಮಾಜಗಳ ವಿವಿಧ ಸಂಘಟನೆಗಳು, ಹಿಂದೂ ಮಲಯಾಳಿ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಯೋಧ ಹಾಗೂ ಅವರ ಕುಟುಂಬದ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಲಾಯಿತು. ಸುಮಾರು ೨೦ಕ್ಕೂ ಅಧಿಕ ಮಂದಿ ಸೇರಿ ಯೋಧ, ಅವರ ಪತ್ನಿ, ಮಗು, ವಯಸ್ಸಾದ ತಂದೆ ತಾಯಿಯರ ಮೇಲೆ ಗುಂಪು ಹಲ್ಲೆ ಮಾಡಿದ್ದರೂ ಪೊಲೀಸರು ಐವರನ್ನು ಮಾತ್ರ ಬಂಧಿಸಿದ್ದಾರೆ. ಹತ್ಯೆಯತ್ನ ಸೆಕ್ಷನ್ನಡಿ ಮೊಕದ್ದಮೆ ದಾಖಲಿಸದೆ ಅನ್ಯಾಯವೆಸಗಿದ್ದು, ಇದರಿಂದಾಗಿ ಆರೋಪಿಗಳು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಕೂಡಲೇ ಮರು ತನಿಖೆ ಮಾಡಿ ಉಳಿದ ಎಲ್ಲ ಆರೋಪಿಗಳನ್ನು ಬಂಧನಕ್ಕೊಳಪಡಿಸಿ ಕೊಲೆಯತ್ನ ಮೊಕದ್ದಮೆ ದಾಖಲಿಸಿ ದೇಶ ಕಾಯುವ ಯೋಧರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅಖಿಲ ಕರ್ನಾಟಕ ಮಾಜಿ ಸೈನಿಕರ ಒಕ್ಕೂಟದ (ಮೊದಲ ಪುಟದಿಂದ) ಅಧ್ಯಕ್ಷ, ಬೆಂಗಳೂರಿನ ಡಾ. ಶಿವಣ್ಣ ಅವರು, ದೇಶ ಸೇವೆಯಲ್ಲಿದ್ದು, ರಜೆಯಲ್ಲಿ ಬಂದಿರುವ ಯೋಧ ಹಾಗೂ ಅವರ ಕುಟುಂಬದ ಮೇಲಿನ ಹಲ್ಲೆ ಖಂಡನೀಯ. ಇದು ದೇಶಕ್ಕೆ ಮಾಡಿದ ಅಪಮಾನ, ಇದನ್ನು ವಿರೋಧಿಸಿ ಇಂದು ಮಡಿಕೇರಿಯಲ್ಲಿ ಪ್ರತಿಭಟನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಆಯಾ ಜಿಲ್ಲಾ ಮಾಜಿಸೈನಿಕರ ಸಂಘಗಳ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು. ಯೋಧರ ಮೇಲೆ ಹಲ್ಲೆ ಮಾಡುವ ಮುನ್ನ ಎಲ್ಲರೂ ಯೋಚನೆ ಮಾಡಬೇಕಾದ ಸಂದೇಶ ಸಾರಲಾಗುವದೆಂದು ಎಚ್ಚರಿಸಿದರು. ಪೊಲೀಸರು ಕೂಡ ಸರಿಯಾದ ರೀತಿಯಲ್ಲಿ ತನಿಖೆ ಮಾಡದೆ ಸಣ್ಣ ಪುಟ್ಟ ಸೆಕ್ಷನ್ ಹಾಕಿ ಆರೋಪಿಗಳು ಜಾಮೀನಿನಲ್ಲಿ ಬರುವಂತೆ ಮಾಡಿದ್ದಾರೆ. ಅವರಂತೆಯೇ ಯೋಧರು ಕೂಡ ಸಮವಸ್ತç ಧರಿಸಿ ದೇಶ ಸೇವೆ ಮಾಡುವವರೆಂದು ಪೊಲೀಸರು ಯೋಚಿಸಬೇಕಿತ್ತು ಎಂದರು.
ಮರು ತನಿಖೆಯಾಗಬೇಕು
ಹಿಂದೂ ಜಾಗರಣಾ ವೇದಿಕೆಯ ಪ್ರಮುಖ್ ಕೆ.ಟಿ.ಉಲ್ಲಾಸ್ ಮಾತನಾಡಿ, ರಾಷ್ಟçದಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಯೋಧರಿಗೆ ಗೌರವ ಕೊಡುತ್ತೇವೆ, ಅಂತಹ ಯೋಧರ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದವರು ಅಪರಾಧಿತ್ವ ಹಿನ್ನೆಲೆಯುಳ್ಳವರಾಗಿದ್ದು, ಈ ಬಗ್ಗೆ ಮರು ತನಿಖೆ ಮಾಡಿ, ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಹಿಂದೆ ಇದ್ದ ಜಿಲ್ಲಾಧಿಕಾರಿಯೋರ್ವರು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿ ಅಂದೂ ಕೂಡ ದಾಂಧಲೆ ನಡೆಸಿದ ದುಷ್ಕರ್ಮಿಗಳು ಕೊಡಗನ್ನು ಧ್ವಂಸ ಮಾಡುವ ಸಂದೇಶ ಸಾರಿದ್ದರು. ಇಂದು ಯೋಧನ ಮೇಲೆ ಹಲ್ಲೆ ಮಾಡುವ ಮೂಲಕ ಮತ್ತೊಂದು ಸಂದೇಶ ನೀಡಿದ್ದಾರೆ. ಆದರೆ, ಪೊಲೀಸರು ಏನೂ ಕ್ರಮ ಕೈಗೊಳ್ಳದೆ ಆರೋಪಿಗಳ ಪರವಾಗಿ ನಿಂತಿದ್ದಾರೆ ಎಂದು ಆರೋಪಿಸಿದರಲ್ಲದೆ, ಪೊಲೀಸರು ಹಾಗೂ ಸೈನಿಕರು ಸಂಬಳಕ್ಕಾಗಿ ಕೆಲಸ ಮಾಡುವವರಲ್ಲ, ದೇಶ ರಕ್ಷಣೆಯ ಕೆಲಸ ಮಾಡುವವರು, ಇದನ್ನು ಅರಿತುಕೊಂಡು ಯೋಧರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯ ಮಾಡಿದರು.
ಸಂಚು ಮಾಡಿ ದಾಳಿ
ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮನುಮುತ್ತಪ್ಪ ಮಾತನಾಡಿ, ಅಪಘಾತವಾದ ೨೦ ನಿಮಿಷಗಳ ಅವಧಿಯೊಳಗಡೆ ೨೦ಕ್ಕೂ ಅಧಿಕ ಮಂದಿ ವಾಹನಗಳಲ್ಲಿ ಬಂದು ಹಲ್ಲೆ ಮಾಡಿದ್ದಾರೆಂದರೆ ಇದು ಸಂಚು ಹೂಡಿ ಮಾಡಿರುವ ಕೃತ್ಯವಾಗಿದೆ. ಎಲ್ಲಿಂದಲೊ ಬಂದವರು, ದೇಶದ ಮೇಲೆ ಅಭಿಮಾನ ಇಲ್ಲದವರು ಇಂತಹ ದುಷ್ಕೃತ್ಯಗಳನ್ನು ಎಸಗುತ್ತಿರುವದು ಖಂಡನೀಯವೆAದರು. ಹಲ್ಲೆ ಮಾಡಿದವರು ೨೪ ಗಂಟೆಯೊಳಗಡೆ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆಂದರೆ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ನಾಚಿಕೆಯಾಗುತ್ತದೆ ಎಂದರು.
ತಾಲಿಬಾನ್ ಮಾಡಲು ಬಿಡುವದಿಲ್ಲ
ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಪ್ರವೀಣ್ ಉತ್ತಪ್ಪ ಮಾತನಾಡಿ, ಶಾಂತಿ, ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿರುವ ಜಿಲ್ಲೆಯಲ್ಲಿಂದು ದ್ವೇಷ ಭಾವನೆ ಬಿತ್ತಲಾಗುತ್ತಿದೆ. ದೇಶ ಕಾಯುವ ಯೋಧನ ಮೇಲೆಯೇ ಹಲ್ಲೆ ಮಾಡಲಾಗಿದೆ. ಇದು ಖಂಡನೀಯ, ಕೊಡಗನ್ನು ಎಂದಿಗೂ ತಾಲಿಬಾನ್ ಮಾಡಲು ಬಿಡುವದಿಲ್ಲ ಎಂದು ಹೇಳಿದರು. ಆರೋಪಿಗಳನ್ನು ಬಂಧಿಸುವದರೊAದಿಗೆ ಅವರುಗಳು ಬಳಸಿದ್ದ ವಾಹನಗಳನ್ನೂ ಕೂಡ ಜಪ್ತಿ ಮಾಡಬೇಕು, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಪೂರ್ವ ನಿಯೋಜಿತ ಕೃತ್ಯ
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ವಾಹನದಲ್ಲಿ ಆರ್ಮಿ ಎಂದು ಬರೆದಿದ್ದನ್ನು ನೋಡಿ ಕುಶಾಲನಗರದಿಂದ ಹಿಂಬಾಲಿಸಿಕೊAಡು ಬಂದು ನಿಗದಿತ ಪ್ರದೇಶದಲ್ಲಿ ಅಪಘಾತ ಮಾಡಿ ಹಲ್ಲೆ ಮಾಡಲಾಗಿದೆ, ಇದೊಂದು ಪೂರ್ವನಿಯೋಜಿತ ಕೃತ್ಯವೆಂದು ಆಪಾದಿಸಿದರು. ಭಾರತದ ಸೈನಿಕರ ಮೇಲೆ ಹಲ್ಲೆ ಹಾಗೂ ಹತ್ಯೆ ಮಾಡಲು ಪಾಕಿಸ್ತಾನದಿಂದ ಭಯೋತ್ಪಾದಕರಿಗೆ ಕರೆ ಕೊಟ್ಟಿದ್ದು, ಇದರ ಭಾಗವಾಗಿ ಈ ಕೃತ್ಯವೆಸಗಲಾಗಿದೆ, ಜಿಲ್ಲೆಯಲ್ಲಿ ಭಯೋತ್ಪಾದನಾ ಕೃತ್ಯ ನಡೆಯುತ್ತಿದೆ ಎಂದು ಈ ಹಿಂದೆಯೇ ಹೇಳಿದಾಗ ಎಲ್ಲರೂ ಹಾಸ್ಯ ಮಾಡಿದ್ದರು. ಇದೀಗ ಒಂದೊAದಾಗಿ ಕಂಡುಬರುತ್ತಿದೆ ಎಂದು ಹೇಳಿದರು. ಗುಂಪು ಹಲ್ಲೆ ನಡೆದಿದ್ದರೂ ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸದೆ, ಆರೋಪಿಗಳಿಗೆ ಜಾಮೀನು ಕೊಡಿಸುವ ಸಲುವಾಗಿ ಕೆಲಸ ಮಾಡಿದ್ದಾರೆ. ಜಾಮೀನು ಕೊಡಿಸಲು ಸಹಕರಿಸಿದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮೊಕದ್ದಮೆ ಎದುರಿಸಲು ಸಿದ್ಧ
ಇಂದು ಪ್ರತಿಭಟನೆ ಮಾಡುತ್ತಿರುವದು ಕೋವಿಡ್ ನಿಯಮ ಉಲ್ಲಂಘನೆಯಾಗಿದ್ದು, ನಮ್ಮ ಮೇಲೆ ಮೊಕದ್ದಮೆ ದಾಖಲಿಸುವದಾಗಿ ಪೊಲೀಸರು ಹೇಳಿದ್ದಾರೆ, ದೇಶಕ್ಕಾಗಿ ಮೊಕದ್ದಮೆ ದಾಖಲಿಸಿಕೊಳ್ಳಲು ಕೂಡ ಸಿದ್ಧರಿರುವದಾಗಿ ರಾಬಿನ್ ಹೇಳಿದರು. ಹಲ್ಲೆ ಮಾಡಿದವರಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳವರಿದ್ದು, ಈ ಹಿಂದೆ ಬಿಜೆಪಿ ಅಧ್ಯಕ್ಷರ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾದವರಿದ್ದಾರೆ, ಎಲ್ಲರನ್ನೂ ಬಂಧಿಸಬೇಕೆAದು ಒತ್ತಾಯಿಸಿದರು.
ರಸ್ತೆ ತಡೆ
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಆಗಮಿಸುವಂತೆ ಪಟ್ಟುಹಿಡಿದ ಪ್ರತಿಭಟನಾಕಾರರು ರಸ್ತೆ ತಡೆ ಮಾಡಿದರು. ಸುಮಾರು ಮೂರು ಗಂಟೆಗಳ ಕಾಲ ರಸ್ತೆ ತಡೆ ಮಾಡಿದರು. ಇಂದು ಶುಕ್ರವಾರವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ವಾಹನಗಳು ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದವು. ಮಧ್ಯಾಹ್ನ ೨.೩೦ರ ವೇಳೆಗೆ ಜಿಲ್ಲಾಧಿಕಾರಿ, ವರಿಷ್ಠಾಧಿಕಾರಿ ಹಾಗೂ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ ಆಗಮಿಸಿದ ಬಳಿಕ ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಪ್ರತಿಭಟನೆಯನ್ನು ಹಿಂಪಡೆದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ, ಮೂಡಾ ಅಧ್ಯಕ್ಷ ರಮೇಶ್ ಹೊಳ್ಳ, ಹಲ್ಲೆಗೊಳಗಾದ ಯೋಧನ ಪತ್ನಿ ಯೋಗಿತಾ, ಮಾಜಿ ಸೈನಿಕರ ಒಕ್ಕೂಟದ ಮೈಸೂರಿನ ಪದಾಧಿಕಾರಿ ರಜನಿ ಸುಬ್ಬಯ್ಯ, ಹಿಂಜಾವೆ ಅಧ್ಯಕ್ಷ ಮೇವಡ ಅಯ್ಯಣ್ಣ, ಪ್ರಧಾನ ಕಾರ್ಯದರ್ಶಿ ಅಜಿತ್ ಸೇರಿದಂತೆ ಮಾಜಿಸೈನಿಕರ ಸಂಘಟನೆಗಳ, ಹಿಂಜಾವೇ, ಎಬಿವಿಪಿ, ಕೊಡಗು ರಕ್ಷಣಾ ವೇದಿಕೆ, ವಿವಿಧ ಸಮಾಜಗಳ ಪದಾಧಿಕಾರಿಗಳು, ಪ್ರಮುಖರು ಪಾಲ್ಗೊಂಡಿದ್ದರು.