ಮಡಿಕೇರಿ, ಜು.೨೯ : ನೂತನವಾಗಿ ಅಧಿಕಾರ ಸ್ವೀಕರಿಸಿದ ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಬ್ರಮಣ್ಯ ಎನ್ ಹಾಗೂ ಮಡಿಕೇರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ರೂಪ ಕೆ ಅವರನ್ನು ಸರಳ ಸಮಾರಂಭದಲ್ಲಿ ಮಡಿಕೇರಿ ವಕೀಲರ ಸಂಘದ ವತಿಯಿಂದ ಸ್ವಾಗತಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಕೆ. ಡಿ. ದಯಾನಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ನೂತನ ನ್ಯಾಯಾಧೀಶರಿಗೆ ಕೋರ್ಟ್ ಕಲಾಪ ನಡೆಸಲು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಕ್ರಮ ಗಳನ್ನು ಯಶಸ್ವಿಗೊಳಿಸುವಲ್ಲಿ ವಕೀಲರ ಸಂಘದಿAದ ಸಂಪೂರ್ಣವಾದ ಸಹಕಾರ ನೀಡಲಾಗುವುದೆಂದು ತಿಳಿಸಿದರು. ಸಭೆಯಲ್ಲಿ ಕೊಡಗು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ರಾದ ಜಿನರಾಳಕರ ಭೀಮರಾವ್ ಲಗಮಪ್ಪ ಭಾಗವಹಿಸಿ ನೂತನ ನ್ಯಾಯಾಧೀಶರಿಗೆ ಶುಭ ಕೋರಿದರು.

ಇದೇ ಆಗಸ್ಟ್ ೧೪ ರಂದು ನಡೆಯುವ ರಾಷ್ಟಿçÃಯ ಲೋಕ್ ಅದಾಲತ್ ಅನ್ನು ಯಶಸ್ವಿಗೊಳಿಸ ಬೇಕಾಗಿ ಅವರು ತಿಳಿಸಿದರು.

ಸಮಾರಂಭದಲ್ಲಿ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಪಿ. ಎಸ್. ಚಂದ್ರಶೇಖರ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಬಿ. ಕೆ. ಮನು ಹಾಗೂ ಅಪರ ಸಿವಿಲ್ ನ್ಯಾಯಾಧೀಶರಾದ ಸ್ಮಿತಾ ನಾಗಲಾ ಪುರ ಅವರು ಹಾಜರಿದ್ದರು.

ವಕೀಲರ ಸಂಘದ ನಿರ್ದೇಶಕ ರಾದ ಪಿ. ಬಿ. ದಿವ್ಯಾ ಹಾಗೂ ಲತಾಕುಮಾರಿ ಪ್ರಾರ್ಥಿಸಿದರು. ಉಪಾಧ್ಯಕ್ಷ ಕೆ. ಎಸ್. ತಮ್ಮಯ್ಯ ಹಾಗೂ ಜಂಟಿ ಕಾರ್ಯದರ್ಶಿ ಸಂಜಯ್ ರಾಜ್ ನೂತನ ನ್ಯಾಯಾಧೀಶರ ಪರಿಚಯ ಮಾಡಿದರು. ಕಾರ್ಯದರ್ಶಿ ಎಮ್. ಕೆ. ಅರುಣಕುಮಾರ್ ವಂದಿಸಿದರು.

ಸಭೆಯಲ್ಲಿ ಖಜಾಂಚಿ ಬಿ. ಸಿ. ದೇವಿಪ್ರಸಾದ್, ನಿರ್ದೇಶಕರಾದ ಚಂದನ್ ಪಿ. ಆರ್, ರಾಜೇಶ್, ಸುದಯ್ ನಾಣಯ್ಯ, ತಾಹ ಯಾಸಿನ್, ಡೊಮಿನಿಕ್, ಭಾನುಪ್ರಕಾಶ್, ಸರಕಾರಿ ವಕೀಲರು ಹಾಗೂ ವಕೀಲರ ಸಂಘದ ಸದಸ್ಯರು ಹಾಜರಿದ್ದರು.