ಪೊನ್ನಂಪೇಟೆ, ಜು. ೨೯: ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ವಿಪರೀತ ಮಳೆಗೆ ಶಿಥಿಲಗೊಂಡಿದ್ದ ಇಲ್ಲಿನ ಶಿವ ಕಾಲೋನಿಯ ನಿವಾಸಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕ ನಂಜುAಡ ಎಂಬವರ ಮನೆಯ ಗೋಡೆ ನಿನ್ನೆ ಕುಸಿದು ಬಿದ್ದಿದೆ. ಮನೆಯ ಹೆಂಚುಗಳು ಒಡೆದು ಹೋಗಿವೆ. ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದ್ದು ನಷ್ಟ ಸಂಭವಿಸಿದೆ. ಸ್ಥಳಕ್ಕೆ ಗ್ರಾ.ಪಂ. ಸದಸ್ಯ ಅಣ್ಣೀರ ಹರೀಶ್, ಕರ್ತಮಾಡ ರಸಿಕ ಭೇಟಿ ನೀಡಿ ಪರಿಶೀಲಿಸಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು ಹಾಗೂ ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಸ್ಥಳೀಯರಾದ ಎಸ್.ಟಿ. ಗಿರೀಶ್ ಹಾಗೂ ನರಸಿಂಹ ಇದ್ದರು.
-ಚನ್ನನಾಯಕ