ವೈದ್ಯಕೀಯ ಕೋರ್ಸ್:ಮೀಸಲಾತಿ ಘೋಷಿಸಿದ ಸರಕಾರ
ನವದೆಹಲಿ, ಜು. ೨೯: ೨೦೨೧-೨೨ನೇ ಸಾಲಿನ ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಅಖಿಲ ಭಾರತ ಕೋಟಾದಲ್ಲಿ ಒಬಿಸಿಗಳಿಗೆ ಶೇ. ೨೭ ಮತ್ತು ಆರ್ಥಿಕ ದುರ್ಬಲ ವರ್ಗಕ್ಕೆ (ಇಡಬ್ಲ್ಯೂಎಸ್) ಶೇ. ೧೦ ರಷ್ಟು ಮೀಸಲಾತಿಯನ್ನು ಸರ್ಕಾರ ಗುರುವಾರ ಪ್ರಕಟಿಸಿದೆ. ಕಳೆದ ಸೋಮವಾರ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೀರ್ಘಕಾಲದಿಂದ ಬಾಕಿ ಇರುವ ಈ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ನೀಡುವಂತೆ ಸಂಬAಧಪಟ್ಟ ಕೇಂದ್ರ ಸಚಿವಾಲಯಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಎಂಬಿಬಿಎಸ್ನಲ್ಲಿ ಸುಮಾರು ೧,೫೦೦ ಮತ್ತು ಸ್ನಾತಕೋತ್ತರ ಪದವಿಯಲ್ಲಿ ೨,೫೦೦ ಒಬಿಸಿ ವಿದ್ಯಾರ್ಥಿಗಳಿಗೆ ಸೀಟು ಪಡೆಯುವ ಅವಕಾಶ ಸಿಗಲಿದೆ. ಇನ್ನು ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ನಲ್ಲಿ ಸುಮಾರು ೫೫೦ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಸುಮಾರು ೧,೦೦೦ ಸೀಟುಗಳು ಲಭ್ಯವಾಗಲಿವೆ ಎಂದು ಪ್ರಕಟಣೆ ತಿಳಿಸಿದೆ.
ಒಲಂಪಿಕ್ಸ್ಗೆ ಮೇರಿ ಕೋಮ್ ವಿದಾಯ
ಟೋಕಿಯೊ, ಜು. ೨೯: 'ತಿoಡಿಟಜ ಚಿmಚಿಣeuಡಿ boxiಟಿg ಛಿhಚಿmಠಿioಟಿshiಠಿ'ನಲ್ಲಿ ೬ ಬಾರಿ ಚಾಂಪಿಯನ್ ಪಟ್ಟ ಪಡೆದಿರುವ ಪದ್ಮಶ್ರೀ, ಪದ್ಮಭೂಷಣ್ ಹಾಗೂ ಪದ್ಮವಿಭೂಷಣ್ ಪುರಸ್ಕೃತ ಮಣಿಪುರದ ಮೇರಿ ಕೋಮ್ ತಮ್ಮ ಒಲಂಪಿಕ್ ಪಯಣಕ್ಕೆ ವಿದಾಯ ಹೇಳಿದ್ದಾರೆ. ಒಲಂಪಿಕ್ ಬಾಕ್ಸಿಂಗ್ನ್ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಕೊಲಂಬಿಯಾ ದೇಶದ ಇಂಗ್ರಿಟ್ ವಾಲೆಂನ್ಸಿಯ ವಿರುದ್ಧ ಸೋಲುವ ಮೂಲಕ ಬಹು ನಿರೀಕ್ಷಿತ ಒಲಂಪಿಕ್ ಪದಕ ಪಡೆಯುವ ಅವಕಾಶದಿಂದ ವಂಚಿತರಾಗಿದ್ದಾರೆ.
ಐವರು ಕಳ್ಳ ಬೇಟೆಗಾರರ ಬಂಧನ
ಚಾಮರಾಜನಗರ, ಜು. ೨೯: ಬಿಳಿಗಿರಿ ರಂಗನಾಥ ದೇವಾಲಯ ಹುಲಿ ರಕ್ಷಿತಾರಣ್ಯದಲ್ಲಿ ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ಐವರನ್ನು ಬಂಧಿಸಿ, ಬೇಟೆಗೆ ಬಳಿಸಿದ್ದ ಬಂದೂಕು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಚಾಮರಾಜನಗರ ತಾಲೂಕಿನ ಗೋವಿಂದರಾಜು (೨೯) ಮತ್ತು ಬೆಂಗಳೂರಿನ ಮಲ್ಲೇಶ್ವರಂನ ಪ್ರಮೋದ್ (೨೭) ಎಂದು ಗುರುತಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಲ್ಲಿ ಮೂವರು ಕೊಡಗು ಜಿಲ್ಲೆಯ ಸೋಮವಾರಪೇಟೆ ಮೂಲದವರಾಗಿದ್ದರೆ, ಒಬ್ಬರು ಚಾಮರಾಜನಗರ ತಾಲೂಕಿನ ಬಡಗಲಪುರ ಮತ್ತು ಇಬ್ಬರು ಬೆಂಗಳೂರಿನ ಮಲ್ಲೇಶ್ವರಂ ಮೂಲದವರಾಗಿದ್ದಾರೆ. ಬಂಧಿತರಿAದ ಎರಡು ಬಂದೂಕುಗಳು (ಈ ಪೈಕಿ ಒಂದಕ್ಕೆ ಪರವಾನಿಗೆ ಇಲ್ಲ), ಆರು ಜೀವಂತ ಕಾರ್ಟಿಜ್ಗಳು, ಒಂದು ಚಾಕು, ಬ್ಯಾಟರಿ ದೀಪಗಳು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ವಡ್ಗಲಪುರ ಬಳಿಯ ಚಾಮರಾಜನಗರಕ್ಕೆ ತೆರಳುತ್ತಿದ್ದ ಕಾರನ್ನು ತಡೆದು ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ಪೆಗಾಸಸ್ ವಿವಾದ-ಕೋರ್ಟ್ ಮಧ್ಯಸ್ಥಿಕೆ ವಹಿಸುವಂತೆ ಪತ್ರ
ನವದೆಹಲಿ, ಜು. ೨೯: ಪೆಗಾಸಸ್ ಬೇಹುಗಾರಿಕೆ ವಿವಾದಕ್ಕೆ ಸಂಬAಧಿಸಿದAತೆ ತಕ್ಷಣ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸುವಂತೆ ಕೋರಿ ೫೦೦ಕ್ಕೂ ಹೆಚ್ಚು ಜನರು ಮತ್ತು ಸಂಘಟನೆಗಳಿAದ ಸಿಜೆಐ ಎನ್.ವಿ. ರಮಣ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಭಾರತದಲ್ಲಿ ಇಸ್ರೇಲಿ ಸಂಸ್ಥೆ ಎನ್ಎಸ್ಒನ ಪೆಗಾಸಸ್ ಸ್ಪೈವೇರ್ ಮಾರಾಟ, ವರ್ಗಾವಣೆ ಮತ್ತು ಬಳಕೆಯನ್ನು ನಿಷೇಧಿಸುವಂತೆ ಕೋರಿದ್ದಾರೆ. ಸ್ಪೆöÊವೇರ್ ಅನ್ನು ಮಹಿಳಾ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು, ವಕೀಲರು ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಕಣ್ಗಾವಲುಗಾಗಿ ಬಳಸಲಾಗಿದೆ ಎಂಬ ಮಾಧ್ಯಮ ವರದಿಗಳ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಅವರು ಲಿಂಗ-ತಟಸ್ಥ ಲೈಂಗಿಕ ಕಿರುಕುಳ, ದತ್ತಾಂಶ ಸಂರಕ್ಷಣೆ ಮತ್ತು ಗೌಪ್ಯತೆ ನೀತಿಯನ್ನು ಅಳವಡಿಸಿಕೊಳ್ಳಲು ಉನ್ನತ ನ್ಯಾಯಾಲಯವನ್ನು ಕೋರಿದ್ದಾರೆ.
ಶಿವರಾಮ್ ಹೆಬ್ಬಾರ್ ಅವರ ಕಾರು ಬೆಂಗಾವಲು ವಾಹನಕ್ಕೆ ಡಿಕ್ಕಿ
ಹುಬ್ಬಳ್ಳಿ, ಜು. ೨೯: ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಬಸವರಾಜ ಬೊಮ್ಮಾಯಿಯವರು ಗುರುವಾರ ಉತ್ತರ ಕನ್ನಡ ಪ್ರವಾಸ ಕೈಗೊಂಡಿದ್ದಾರೆ, ಅಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯಾಗಿರುವ ಮನೆ, ಆಸ್ತಿಪಾಸ್ತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಈ ಪ್ರವಾಸ ವೇಳೆ ಉತ್ತರ ಕನ್ನಡ ಜಿಲ್ಲೆಯ ಶಾಸಕ, ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಕೂಡ ಜೊತೆಯಾಗಿದ್ದರು. ಆದರೆ ಅವರು ಚಲಿಸುತ್ತಿದ್ದ ಕಾರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬೆಂಗಾವಲು ವಾಹನಕ್ಕೆ ಹುಬ್ಬಳ್ಳಿಯಲ್ಲಿ ಡಿಕ್ಕಿ ಹೊಡೆದು ಮಾಜಿ ಸಚಿವ ಹೆಬ್ಬಾರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪ್ಲಾಸ್ಟಿಕ್ ಬ್ಯಾಗ್ನಲ್ಲಿ ೬೦ಕ್ಕೂ ಹೆಚ್ಚು ಮಂಗಗಳು
ಹಾಸನ, ಜು. ೨೯: ವಿಷಾಹಾರ ಸೇವಿಸಿದ ಸುಮಾರು ೬೦ಕ್ಕೂ ಹೆಚ್ಚು ಮಂಗಗಳನ್ನು ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಹಾಕಿ ರಸ್ತೆ ಬದಿ ಎಸೆದಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಸಕಲೇಶಪುರದ ಬೇಗೂರು ಕ್ರಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸುಮಾರು ೬೦ಕ್ಕೂ ಹೆಚ್ಚು ಚೀಲಗಳಲ್ಲಿ ಮಂಗಗಳನ್ನು ಹಾಕಿ ರಸ್ತೆ ಬದಿಗೆ ಎಸೆಯಲಾಗಿದೆ. ದಾರಿಹೋಕರು ಇದನ್ನು ನೋಡಿ ಚೀಲಗಳನ್ನು ಬಿಚ್ಚಿದ್ದು ಈ ವೇಳೆ ಮಂಗಗಳಿಗೆ ವಿಷಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ೬೦ ಮಂಗಗಳ ಪೈಕಿ ಕೇವಲ ೧೪ ಮಂಗಗಳನ್ನು ಮಾತ್ರ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಛೋಟಾ ರಾಜನ್ ಆಸ್ಪತ್ರೆಗೆ ದಾಖಲು
ನವದೆಹಲಿ, ಜು. ೨೯: ಜೈಲಿನಲ್ಲಿರುವ ಭೂಗತ ಪಾತಕಿ ರಾಜೇಂದ್ರ ನಿಕಲ್ಜೆ ಅಲಿಯಾಸ್ ಛೋಟಾ ರಾಜನ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ದಾಖಲಾಗಿದ್ದಾರೆ. ರಾಜನ್ಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಅವರನ್ನು ಮಂಗಳವಾರ ಏಮ್ಸ್ಗೆ ದಾಖಲಿಸಲಾಗಿದೆ. ತಿಹಾರ್ ಜೈಲಿನಲ್ಲಿರುವ ೬೧ ವರ್ಷದ ರಾಜನ್ಗೆ ಎರಡು ತಿಂಗಳ ಹಿಂದೆ ಕೊರೊನಾ ಪಾಸಿಟಿವ್ ಬಂದಿತ್ತು. ಚೇತರಿಸಿಕೊಂಡ ನಂತರ ಮತ್ತೆ ಜೈಲಿಗೆ ಕರೆತರಲಾಗಿತ್ತು. ಈಗ ಹೊಟ್ಟೆ ನೋವಿನಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿದೇಶಕ್ಕೆ ೬.೪ ಕೋಟಿ ಡೋಸ್ ಲಸಿಕೆ ರವಾನೆ
ನವದೆಹಲಿ, ಜು. ೨೯: ಭಾರತ ಸರ್ಕಾರ ಈವರೆಗೂ ವಿದೇಶಗಳಿಗೆ ೬.೪ ಕೋಟಿ ಡೋಸ್ ಕೊರೊನಾ ಲಸಿಕೆ ರವಾನೆ ಮಾಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದ್ದು, ಈ ವರ್ಷದ ಜನವರಿ ೧೨ ರಿಂದ ಜುಲೈ ೨೨ರ ಅವಧಿಯಲ್ಲಿ ಒಟ್ಟು ೬.೪ ಕೋಟಿ ಕೋವಿಡ್ ಲಸಿಕೆಗಳನ್ನು ವಿದೇಶಗಳಿಗೆ ಕಳುಹಿಸಿಕೊಟ್ಟಿದೆ. ಲೋಕಸಭೆಯಲ್ಲಿ ಈ ಕುರಿತು ಲಿಖಿತ ಉತ್ತರ ನೀಡಿದ ನಾಗರಿಕ ವಿಮಾನಯನ ಸಚಿವ ವಿ.ಕೆ. ಸಿಂಗ್ ಅವರು, ಈ ಅವಧಿಯಲ್ಲಿ ಒಟ್ಟಾಗಿ ೪೨.೨ ಕೋಟಿ ಡೋಸ್ ಲಸಿಕೆಗಳನ್ನು ವಿಮಾನಗಳ ಮೂಲಕ ರವಾನಿಸಲಾಗಿದೆ. ಈ ಪೈಕಿ ೩೫.೮ ಕೋಟಿ ಡೋಸ್ ಲಸಿಕೆಗಳನ್ನು ದೇಶೀಯ ವಿಮಾನಗಳ ಮೂಲಕ ಕಳುಹಿಸಲಾಗಿದೆ. ಇದೇ ಅವಧಿಯಲ್ಲಿ ದೇಶದಾದ್ಯಂತ ನೀಡಲಾಗಿರುವ ಲಸಿಕೆಯ ಪ್ರಮಾಣ ೪೫ ಕೋಟಿಗೂ ಅಧಿಕವಾಗಿದೆ. ಇವರಲ್ಲಿ ೧೮-೪೪ ವರ್ಷದವರಿಗೆ ನೀಡಿದ ೧೫.೩೮ ಕೋಟಿ ಡೋಸ್ ಲಸಿಕೆಗಳು ಸೇರಿವೆ ಎಂದು ತಿಳಿಸಿದ್ದಾರೆ.
ಸೈನೈಡ್ ಸೇವಿಸಿ ಸರಕಳ್ಳ ಆತ್ಮಹತ್ಯೆ
ಬೆಂಗಳೂರು, ಜು. ೨೯: ಅನೇಕ ಸರಗಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಯೊಬ್ಬ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಆತನ ಮತ್ತೋರ್ವ ಸಹಚರನನ್ನು ಕೆ.ಆರ್. ಪುರಂ ಪೊಲೀಸರು ಬಂಧಿಸಿದ್ದಾರೆ. ಮೃತ ಶಂಕಿತನನ್ನು ಸಿ. ಶಂಕರ್ ಎಂದು ಗುರುತಿಸಲಾಗಿದೆ. ಮತ್ತೋರ್ವ ಚಂದ್ರಶೇಖರ್ ಅನ್ನು ಬಂಧಿಸಲಾಗಿದೆ. ಇವರಿಬ್ಬರು ಆಂಧ್ರಪ್ರದೇಶದ ಮದನಪಲ್ಲೆಯ ಬಿ ಕೊಟ್ಟಕೋಟದ ಗ್ರಾಮದ ನಿವಾಸಿಗಳು. ಸ್ಥಳೀಯವಾಗಿ ಅನೇಕ ಸರಗಳ್ಳತನ ಘಟನೆಗಳು ನಡೆಯುತ್ತಿದ್ದು, ಜುಲೈ ೬ ಮತ್ತು ೧೩ ರಂದು ಕೆಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರಕರಣಗಳು ಅವಲಹಳ್ಳಿ ಮತ್ತು ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿ ಸುತ್ತಮುತ್ತ ನಾಲ್ಕು ಕೇಸ್ಗಳು ವರದಿಯಾಗಿದ್ದವು. ಅಲ್ಲದೇ, ದುಷ್ಕರ್ಮಿಗಳ ಪತ್ತೆಯಾಗಿ ತಂಡವೊAದನ್ನು ನೇಮಿಸಲಾಗಿತ್ತು.