ಕುಶಾಲನಗರ, ಜು.೩೦: ದುಬಾರೆ ಸಾಕಾನೆಗಳ ಶಿಬಿರಕ್ಕೆ ತಾ. ೩೧ ರಿಂದ (ಇಂದಿನಿAದ) ಪ್ರವಾಸಿಗರಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ.

ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಪ್ರವಾಸಿಗರು ಶಿಬಿರಕ್ಕೆ ಆಗಮಿಸಬಹುದು. ಯಾವುದೇ ರೀತಿಯಲ್ಲಿ ಆನೆಗಳ ಚಟುವಟಿಕೆ ನಡೆಯುವುದಿಲ್ಲ. ಬೆಳಗ್ಗೆ ೯ ರಿಂದ ೧೧ ಮತ್ತು ಸಂಜೆ ೪.೩೦ ರಿಂದ ೫.೩೦ ರ ತನಕ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ. ೨೦೨೧ ಏಪ್ರಿಲ್ ೫ ರಿಂದ ಕೋವಿಡ್ ಹಿನ್ನೆಲೆಯಲ್ಲಿ ಶಿಬಿರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು.