ಮಡಿಕೇರಿ, ಜು. ೨೮: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಡಾ. ಬಿ.ಆರ್. ಅಂಬೇಡ್ಕರ್, ಏಕಲವ್ಯ ವಸತಿ ಶಾಲೆಗಳಲ್ಲಿ ೨೦೨೧-೨೨ನೇ ಸಾಲಿಗೆ ೬ನೇ ತರಗತಿ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರವೇಶ ಪರೀಕ್ಷೆ ನಡೆಸಲಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ೬ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಆಗಸ್ಟ್ ೧೦ ಕೊನೆಯ ದಿನವಾಗಿದೆ. ೨೦೨೧ರ ಸೆಪ್ಟೆಂಬರ್ ೧೬ ರಂದು ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಎಸ್‌ಎಟಿಎಸ್ ಸಂಖ್ಯೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ವಾರ್ಷಿಕ ಆದಾಯ ಮಿತಿ ಎಸ್‌ಸಿ, ಎಸ್‌ಟಿ, ಸಿ೧ ರೂ. ೨,೫೦,೦೦೦, ೨ಎ, ೨ಬಿ, ೩ಎ, ೩ಬಿ ರೂ. ೧ ಲಕ್ಷ. ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ (೨), ಇತರರೆ ಮೀಸಲಾತಿ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.

ವಿಶೇಷಚೇತನ ಮಗು, ಅಲೆಮಾರಿ, ಅರೆಅಲೆಮಾರಿ, ಸೂಕ್ಷö್ಮ, ಅತಿ ಸೂಕ್ಷö್ಮ ಮಗು, ಮಾಜಿ ಸೈನಿಕರ ಮಗು, ಆಶ್ರಮ, ವಸತಿ ಶಾಲೆ ಮಗು, ಪೌರ ಕಾರ್ಮಿಕರ, ಸಪಾಯಿ ಕರ್ಮಚಾರಿ ಮಗು, ಬಾಲ ಕಾರ್ಮಿಕ, ವಿಧವೆಯ ಮಗು, ದೇವದಾಸಿ, ವಿದುರನ ಮಗು, ಯೋಜನ ನಿರಾಶ್ರಿತರ ಮಗು, ಅನಾಥ ಮಗು, ಎಚ್‌ಐವಿ ಪೀಡಿತರ ಮಗು, ಆತ್ಮಹತ್ಯ ರೈತರ ಮಗು, ಸ್ಥಳೀಯ ಅಭ್ಯರ್ಥಿ (ಸ್ಥಳೀಯ ಅಭ್ಯರ್ಥಿ ಎಂದರೆ ಸ್ವಂತ ತಾಲೂಕಿನ ಅಭ್ಯರ್ಥಿ) ಈ ವಿಶೇಷ ವರ್ಗಕ್ಕೆ ಸೇರಿದ್ದಲ್ಲಿ ಸಂಬAಧಿತ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಸಲ್ಲಿಸಬೇಕು. ಅರ್ಜಿಯನ್ನು ಸಮೀಪದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಡಾ. ಬಿ.ಆರ್. ಅಂಬೇಡ್ಕರ್, ಏಕಲವ್ಯ ವಸತಿ ಶಾಲೆಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾ ಸಮನ್ವಯಾಧಿಕಾರಿ ಅವರು ತಿಳಿಸಿದ್ದಾರೆ.