ಸAಪಾಜೆ, ಜು. ೨೭: ಸಂಪಾಜೆ ಲಯನ್ಸ್ ಕ್ಲಬ್ಬಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ತಾ.೨೪ರಂದು ಜ್ಯೂನಿಯರ್ ಕಾಲೇಜು ಸಂಪಾಜೆಯಲ್ಲಿ ನಡೆಯಿತು.

ಜಿಲ್ಲೆ ೩೧೭ರಡಿಯ ೨ನೇ ಉಪರಾಜ್ಯಪಾಲರಾದ ಡಾ. ಮೆಲ್ವಿನ್ ಡಿಸೋಜ ಅವರು ಪ್ರತಿಜ್ಞಾವಿಧಿಯನ್ನು ನೆರವೇರಿಸಿದರು. ವೇದಿಕೆಯಲ್ಲಿ ಜಿಲ್ಲಾ ಪಿ.ಆರ್.ಓ. ಜಯರಾಮ ದೇರಪ್ಪಜ್ಜಮನೆ, ವಲಯ ಅಧ್ಯಕ್ಷ ವೆಂಕಪ್ಪ ಕೇನಾಜೆ, ನಿರ್ಗಮಿತ ಅಧ್ಯಕ್ಷ ವಾಸುದೇವ ಕಟ್ಟೆಮನೆ, ನಿಯೋಜಿತ ಅಧ್ಯಕ್ಷ ಟೀನಾಚರಣ್, ಕಾರ್ಯದರ್ಶಿ ಕಿಶೋರ್‌ಕುಮಾರ್ ಕೆ, ಕೋಶಾಧಿಕಾರಿ ಧನಲಕ್ಷಿö್ಮ ನವೀನ್ ಉಪಸ್ಥಿತರಿದ್ದರು. ಸುಳ್ಯ, ಗುತ್ತಿಗಾರು, ಕಡಬ, ಪಂಜ ಲಯನ್ಸ್ ಕ್ಲಬ್ಬಿನ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ವಾಸುದೇವ ಸ್ವಾಗತಿಸಿ, ಪ್ರಾರ್ಥನೆಯನ್ನು ಅಕ್ಷರ ಅಪ್ಪಣ್ಣ, ವಂದನಾರ್ಪಣೆಯನ್ನು ಧನಲಕ್ಷಿö್ಮ ನವೀನ್ ಹಾಗೂ ಕಾರ್ಯಕ್ರಮವನ್ನು ಅಮೃತಾ ಅಪ್ಪಣ್ಣ ಅವರು ನಿರೂಪಿಸಿದರು.