ಮಡಿಕೇರಿ, ಜು. ೨೬: ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡಗಿನ ಯೋಧ ಹಾಗೂ ಅವರ ಕುಟುಂಬದ ಮೇಲೆ ಕಳೆದ ರಾತ್ರಿ ಬೋಯಿಕೇರಿ ಬಳಿ ಹೆದ್ದಾರಿಯಲ್ಲಿ ಗುಂಪು ಹಲ್ಲೆ ನಡೆದಿದ್ದು, ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಜೆಯಲ್ಲಿ ಬಂದಿದ್ದ ಗಾಳಿಬೀಡು ವ್ಯಾಪ್ತಿಯ ಒಂದನೇ ಮೊಣ್ಣಂಗೇರಿ ನಿವಾಸಿ ಭಾರತೀಯ ಸೇನೆಯಲ್ಲಿ ಹತ್ತನೇ ಮದ್ರಾಸ್ ರೆಜಿಮೆಂಟ್ ಸೆಂಟರ್‌ನಲ್ಲಿ ೧೮ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನಾಯಕ್ ಅಶೋಕ್ ಕುಮಾರ್ ಹಾಗೂ ಅವರ ತಂದೆ ಎ.ಟಿ. ಪೊನ್ನಪ್ಪ ಹಾಗೂ ಸಹೋದರ ಚೇತನ್ ಇವರುಗಳೇ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದವರಾಗಿದ್ದಾರೆ. ಅಶೋಕ್ ಕುಮಾರ್ ಅವರು ತಮ್ಮ ತಂದೆ - ತಾಯಿ, ಸಹೋದರ, ಪತ್ನಿ ಹಾಗೂ ಮಗುವಿನೊಂದಿಗೆ ನಿನ್ನೆದಿನ ತಮ್ಮ ಲ್ಯಾನ್ಸರ್ (ಎಪಿ-೦೯ ಎಎಕ್ಸ್-೩೫೨೬) ಕಾರಿನಲ್ಲಿ ಮದಲಾಪುರದ ತಮ್ಮ ಮಾವನ ಮನೆಗೆ ಹಿಂತಿರುಗುವಾಗ ಬೋಯಿಕೇರಿ ಬಳಿ ಹಿಂದಿನಿAದ ಬಂದ ಡಸ್ಟರ್ (ಕೆಎ-೦೩ ಎಂಎಸ್-೭೯೧೮) ಕಾರೊಂದು ಅಶೋಕ್ ಕುಮಾರ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಹಿನ್ನೆಲೆಯಲ್ಲಿ ಕಾರಿನಿಂದ ಇಳಿದ ಅಶೋಕ್ ಕುಮಾರ್ ಡಸ್ಟರ್ ಕಾರಿನ ಬಳಿ ತೆರಳಿ ಅದರ ಚಾಲಕನನ್ನು ಡಿಕ್ಕಿ ಹೊಡೆದ ಬಗ್ಗೆ ಪ್ರಶ್ನಿಸಿದರು. ಈ ವೇಳೆ ಕೆಲಕಾಲ ಮಾತುಕತೆ ನಡೆದು; ಅಶೋಕ್ ಕುಮಾರ್ ಅವರ ತಂದೆ ಪೊನ್ನಪ್ಪ ಅವರು ಮಧ್ಯ ಪ್ರವೇಶಿಸಿ ಘಟನೆಯನ್ನು ದೊಡ್ಡದು ಮಾಡುವುದು ಬೇಡ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ವಿಮೆ ಇತ್ಯಾದಿ ವಿಚಾರದ ಕುರಿತು ಪೊಲೀಸ್ ದೂರು ನೀಡಿ ಸರಿಮಾಡಿಕೊಳ್ಳಲು ಪೊಲೀಸರಿಗೆ ದೂರವಾಣಿ ಕರೆ ಮಾಡಲು ಅಶೋಕ್ ಕುಮಾರ್

(ಮೊದಲ ಪುಟದಿಂದ) ಪ್ರಯತ್ನಿಸುತ್ತಿದ್ದ ವೇಳೆ ಡಸ್ಟರ್ ಕಾರಿನ ಚಾಲಕ ಯಾರಿಗೋ ಮೊಬೈಲ್ ಮೂಲಕ ಕರೆ ಮಾಡಿದ್ದು, ಮರ‍್ನಾಲ್ಕು ವಾಹನಗಳಲ್ಲಿ ಬಂದಿಳಿದ ದುಷ್ಕರ್ಮಿಗಳು ಅಶೋಕ್ ಕುಮಾರ್ ಹಾಗೂ ಅವರ ಕುಟುಂಬದವರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಅಶೋಕ್ ಕುಮಾರ್ (೩೫) ಅವರ ತಂದೆ ಪೊನ್ನಪ್ಪ (೭೦), ಸಹೋದರ ಚೇತನ್ (೩೨) ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಅಶೋಕ್ ಕುಮಾರ್ ಹಾಗೂ ಚೇತನ್ ಅವರ ಚಿನ್ನದ ಚೈನು, ಉಂಗುರ, ಪತ್ನಿ ಯೋಗಿತ ಅವರ ತಾಳಿ ಸರ ಹಲ್ಲೆ ಸಂದರ್ಭ ಕಸಿಯಲ್ಪಟ್ಟಿದೆ. ಯೋಗಿತ (೩೧) ಹಾಗೂ ಅವರ ಅತ್ತೆ ರಾಧಾ (೬೪) ಅವರಿಗೂ ಪೆಟ್ಟು ಬಿದ್ದಿದೆ ಎಂದು ಅಶೋಕ್ ಕುಮಾರ್ ‘ಶಕ್ತಿ’ಗೆ ಮಾಹಿತಿ ನೀಡಿದರು. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಎಂ.ಎಲ್.ಸಿ.ಗಳ ಭೇಟಿ

ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಯೋಧರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಾಜಿ ಸೈನಿಕರುಗಳು ಕೂಡ ಭೇಟಿ ನೀಡಿ ಘಟನೆ ಬಗ್ಗೆ ಖಂಡನೆ ವ್ಯಕ್ತಪಡಿಸಿದರು.

ವೀಣಾ ಅಚ್ಚಯ್ಯ ಖಂಡನೆ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೈನಿಕ ಕುಟುಂಬವನ್ನು ವಿಧಾನಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಅವರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ವೀಣಾ ಅಚ್ಚಯ್ಯ, ಶಾಂತಿಯುತವಾದ ಕೊಡಗಿನಲ್ಲಿ ಈ ರೀತಿಯ ಘಟನೆ ನಡೆದಿರುವುದು ಖಂಡನೀಯ. ಈಗಾಗಲೇ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ ಎಂದರು.

ಕಾAಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಯೋಧರ ನಾಡು ಕೊಡಗಿನಲ್ಲೇ ಸೈನಿಕ ಕುಟುಂಬದ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎಂದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮೂವರ ಬಂಧನ

ಈ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಸುಂಟಿಕೊಪ್ಪ ವ್ಯಾಪ್ತಿಯ ಮೂವರನ್ನು ಬಂಧಿಸಿದ್ದಾರೆ. ಸುಂಟಿಕೊಪ್ಪದ ಇಸಾಕ್, ನಾಸಿರ್ ಹಾಗೂ ಕಾರು ಚಾಲಕ ರಫೀಕ್ ಇವರುಗಳನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.