ಮಡಿಕೇರಿ, ಜು. ೨೭: ಬೋಯಿಕೇರಿ ಬಳಿ ಯೋಧ ಅಶೋಕ್ ಕುಮಾರ್ ಹಾಗೂ ಅವರ ಕುಟುಂಬದ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಬಂಧಿಸಲ್ಪಟ್ಟಿರುವ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಸುಂಟಿಕೊಪ್ಪದ ಹೆಚ್.ಯು. ರಫೀಕ್ ಖಾನ್, ಆರ್.ಹೆಚ್. ನಾಸಿರ್ ಹಾಗೂ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹೆಚ್.ಯು. ಇಸಾಕ್ ಖಾನ್ ಇವರುಗಳನ್ನು ನಿನ್ನೆ ದಿನ ಬಂಧಿಸಿದ್ದ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಎಸ್ಪಿ ಕ್ಷಮಾ ಮಿಶ್ರಾ ನಿರ್ದೇಶನದಂತೆ ಪ್ರಭಾರ ಡಿವೈಎಸ್‌ಪಿ ಹೆಚ್.ಎಂ. ಶೈಲೇಂದ್ರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯ ನಿರೀಕ್ಷಕರಾದ ಎಸ್.ಎಸ್. ರವಿಕಿರಣ್, ಠಾಣಾಧಿಕಾರಿ ಎಂ.ಕೆ. ಸದಾಶಿವ, ಸಿಬ್ಬಂದಿಗಳಾದ ಹೆಚ್.ಡಿ. ಪ್ರಸನ್ನ ಕುಮಾರ್, ಕೆ.ಕೆ. ಶಶಿಧರ್, ಕೆ.ಜಿ. ರವಿಕುಮಾರ್, ಟಿ.ಆರ್. ದಿನೇಶ್, ಕೆ.ಡಿ. ದಿನೇಶ್, ಸೋಮಶೇಖರ್ ಸಜ್ಜನ್, ಜಿ.ಎಸ್. ಅನಿಲ್, ಮಾದಯ್ಯ, ಸಿದ್ದರಾಮವಂದಲ, ಅಂತೋಣಿ ಐ.ಜೆ., ಎಂ.ಡಿ. ಸೋಮಶೇಖರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.